ಬೆಂಗಳೂರು (Bengaluru): 2024 ರ ಲೋಕಸಭಾ ಚುನಾವಣೆಗೆ (Loksabha Election) ಬಿಜೆಪಿ (BJP) ಸರ್ವ ಸನ್ನವಾಗಿದ್ದು, ಮಾರ್ಚ್ 8 ರಂದು ಎರಡನೇ ಪಟ್ಟಿ ಬಿಡುಗಡೆಮಾಡುವ ಸಾಧ್ಯತೆ ಇದೆ.
ಈಗಾಗಲೇ 195 ಮಂದಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿ ಮಾರ್ಚ್ 8 ರಂದು ಎರಡನೇ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಮೊದಲ ಪಟ್ಟಿಯಲ್ಲಿ ಕರ್ನಾಟಕದ ಯಾವುದೇ ಒಂದು ಕ್ಷೇತ್ರದ ಅಭ್ಯರ್ಥಿಯ ಹೆಸರು ಪ್ರಕಟವಾಗಿರಲಿಲ್ಲ. ಇದೀಗ ಎರಡನೇ ಪಟ್ಟಿಯಲ್ಲಿ ಕರ್ನಾಟಕದ ಕ್ಷೇತ್ರಗಳ ಅಭ್ಯರ್ಥಿ ಹೆಸರು ಬಿಡುಗಡೆ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಈ ಬಗ್ಗೆ ಪ್ರತಿಧ್ವನಿಗೆ ಬಿಜೆಪಿ ಉನ್ನತ ಮಟ್ಟದ ಮೂಲಗಳಿಂದಲೇ ಮಾಹಿತಿ ಲಭ್ಯವಾಗಿದ್ದು, ಟಿಕೆಟ್ ಆಕಾಂಕ್ಷಿಗಳ ಚಿತ್ತಾ ಎರಡನೇ ಪಟ್ಟಿಯತ್ತ ಇದೆ.
ಎರಡನೇ ಪಟ್ಟಿಯಲ್ಲಿ ಬಹುತೇಕ ಗೊಂದಲವಿಲ್ಲದ 10 ಕ್ಷೇತ್ರಗಳ ಅಭ್ಯರ್ಥಿ ಹೆಸರು ಪ್ರಕಟವಾಗಲಿದೆ.
ಹಾಗಾದ್ರೆ ಯಾವುದು ಆ 10 ಕ್ಷೇತ್ರ?
- ಬೆಂಗಳೂರು ಕೇಂದ್ರ – ಪಿ.ಸಿ. ಮೋಹನ್. (ಹಾಲಿ ಸಂಸದ).
- ಕಲ್ಬುರ್ಗಿ – ಡಾ.ಉಮೇಶ್ ಜಾಧವ್.
- ಬಾಗಲಕೋಟೆ – ಪಿ.ಸಿ. ಗದ್ದೀಗೌಡರ್.
- ಶಿವಮೊಗ್ಗ – ಬಿ.ವೈ. ರಾಘವೇಂದ್ರ.
- ಉಡುಪಿ-ಚಿಕ್ಕಮಗಳೂರು – ಶೋಭಾ ಕರಂದ್ಲಾಜೆ.
- ಚಿಕ್ಕೋಡಿ – ಅಣ್ಣಾಸಾಹೇಬ್ ಜೊಲ್ಲೆ.
- ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ.
- ಕೊಪ್ಪಳ – ಕರಡಿ ಸಂಗಣ್ಣ.
- ದಕ್ಷಿಣ ಕನ್ನಡ – ನಳಿನ್ಕುಮಾರ್ ಕಟೀಲ್.
- ಮೈಸೂರು-ಕೊಡಗು – ಪ್ರತಾಪ್ ಸಿಂಹ.
#karnataka #bengaluru #mpelection #bjp #bjplist