ಬೆಳಗಾವಿ:ವಿದ್ಯುತ್ ಸ್ಪರ್ಶಿಸಿ ಲೈನಮೆನ್ ಮೃತಪಟ್ಟ ಘಟನೆ ಬೆಳಗಾವಿ (Belagavi) ಜಿಲ್ಲೆಯಲ್ಲಿ ನಡೆದಿದೆ.
ಸುರೇಶ ಹನಮಂತಪ್ಪ ಇಂಚಲ (46) ಮೃತ ದುರ್ದೈವಿ. ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಹತ್ತಿರ ಜಾಕ್ವೆಲ್ ಬಳಿ ಈ ಘಟನೆ ನಡೆದಿದೆ.ಹುಬ್ಬಳ್ಳಿ -ಧಾರವಾಡ ನೀರು ಬಿಡುಗಡೆ ಮಾಡುವ ಜಾಕ್ವೆಲ್ ಬಳಿ ಸುರೇಶ್ ವಿದ್ಯುತ್ ರಿಪೇರಿ ಮಾಡುತ್ತಿದ್ದ.
ಈ ವೇಳೆ ವಿದ್ಯುತ್ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹವು ವಿದ್ಯುತ್ ಕಂಬದಲ್ಲೆ ಜೋತಾಡಿದೆ. ಸವದತ್ತಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.