ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್ ಮಾಡಿರುವ ಅರಬ್-ಇಸ್ರೇಲಿ ನಟಿಯನ್ನು ʼಭಯೋತ್ಪಾದನೆಗೆ ಪ್ರಚೋದನೆʼ ನೀಡಿದ ಶಂಕೆಯ ಮೇಲೆ ಬಂಧಿಸಲಾಗಿದೆ.
ಉತ್ತರ ಇಸ್ರೇಲಿ ನಗರವಾದ ನಜರೆತ್ನಲ್ಲಿ ವಾಸಿಸುತ್ತಿರುವ ಮೈಸಾ ಅಬ್ದೆಲ್ ಹಾದಿಯನ್ನು ಸೋಮವಾರ ಬಂಧಿಸಲಾಗಿದ್ದು, ಗುರುವಾರದವರೆಗೆ ಅವರನ್ನು ಕಸ್ಟಡಿಯಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುದ್ಧದ ಕುರಿತು ಚರ್ಚಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್ಗಳ ಮೇಲೆ ಬಂಧನಕ್ಕೊಳಗಾದ ಅರಬ್ ಇಸ್ರೇಲಿಗಳ ಸಾಲಿಗೆ ನಟಿಯೂ ಸೇರಿದ್ದಾರೆ.
ಅಕ್ಟೋಬರ್ 7 ರಂದು ಫೆಲೆಸ್ತೀನ್ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿರುವ ಹಮಾಸ್ ನಡೆಸಿದ ದಾಳಿಯ ಸಮಯದಲ್ಲಿ ಗಾಜಾ ಪಟ್ಟಿ ಮತ್ತು ಇಸ್ರೇಲ್ ನಡುವಿನ ಬೇಲಿಯನ್ನು ಬುಲ್ಡೋಜರ್ ಮೂಲಕ ತೆರವುಗೊಳಿಸುತ್ತಿರುವ ಚಿತ್ರವನ್ನು ನಟಿ ಪೋಸ್ಟ್ ಮಾಡಿದ್ದರು.
ದಾಳಿಯಲ್ಲಿ 1,400 ಕ್ಕೂ ಹೆಚ್ಚು ಇಸ್ರೇಲಿಯನ್ನರು ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಹೇಳುತ್ತದೆ. ಅದೇ ವೇಳೆ ಯುದ್ಧ ಘೋಷಿಸಿರುವ ಇಸ್ರೇಲ್ ಗಾಝಾ ಪ್ರದೇಶದ ಮೇಲೆ ಪ್ರತೀಕಾರದ ದಾಳಿಯಲ್ಲಿ 5,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಹಮಾಸ್ ಸರ್ಕಾರ ಹೇಳಿದೆ.
1989 ರವರೆಗೆ ಜರ್ಮನಿಯನ್ನು ವಿಭಜಿಸಿದ್ದ ಬರ್ಲಿನ್ ಗೋಡೆಯ ಪತನವನ್ನು ಉಲ್ಲೇಖಿಸಿದ್ದ ನಟಿ ʼಬರ್ಲಿನ್ ಶೈಲಿಗೆ ಹೋಗೋಣʼ ಎಂದು ಶೀರ್ಷಿಕೆ ಬಳಸಿ ಬುಲ್ಡೋಝರ್ ಚಿತ್ರವನ್ನು ಹಂಚಿಕೊಂಡಿದ್ದರು.
ಈ ಚಿತ್ರ ಹಂಚಿಕೊಂಡದಕ್ಕಾಗಿ ಆಕೆ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದ್ದಾರೆಂದು ಆರೋಪಿಸಿದ್ದಾರೆ ಎಂದು ಅವರ ವಕೀಲ ಜಾಫರ್ ಫರಾಹ್ ತಿಳಿಸಿದ್ದಾರೆ.
37 ವರ್ಷದ ನಟಿ ಹಲವಾರು ವೆಬ್ ಸೀರೀಸ್, ಚಲನಚಿತ್ರಗಳು ಮತ್ತು ನಾಟಕಗಳಲ್ಲಿ ನಟಿಸಿದ್ದಾರೆ.
ಅರಬ್ ಇಸ್ರೇಲಿ ಗಾಯಕ ದಲಾಲ್ ಅಬು ಅಮ್ನೆ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ಳಿಗಾಗಿ ಈ ವಾರ ಅವರನ್ನು ಬಂಧಿಸಲಾಯಿತು.
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ಪ್ರಾರಂಭದಿಂದಲೂ ಗಾಜಾ ನಿವಾಸಿಗಳೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸಿದ ಕಾಮೆಂಟ್ಗಳ ಮೇಲೆ ಇಸ್ರೇಲ್ನ ಅರಬ್ ಅಲ್ಪಸಂಖ್ಯಾತರು ಮತ್ತು ಪೂರ್ವ ಜೆರುಸಲೆಮ್ನಲ್ಲಿರುವ ಪ್ಯಾಲೆಸ್ಟೀನಿಯನ್ನರನ್ನು ಬಂಧಿಸಲಾಗಿದೆ, ಕಾಲೇಜುಗಳಿಂದ ಹೊರಹಾಕಲಾಗಿದೆ.