• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, June 3, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಅಥಣಿ PSI ದೌರ್ಜನ್ಯದ ವಿರುದ್ಧ ಸಿಡಿದೆದ್ದ ವಕೀಲರ ಸಂಘ : FIR ದಾಖಲಿಸದಿದ್ರೆ ರಾಜ್ಯಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ..!

ಎಫ್‌ಐಆರ್ ದಾಖಲಿಸಲು ವಿಳಂಬ : ಕೋರ್ಟ್ ಕಲಾಪ ಬಹಿಷ್ಕಾರದ ಎಚ್ಚರಿಕೆ ನೀಡಿದ ವಕೀಲರ ಸಂಘ..

ಪ್ರತಿಧ್ವನಿ by ಪ್ರತಿಧ್ವನಿ
June 2, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಅಥಣಿ PSI ದೌರ್ಜನ್ಯದ ವಿರುದ್ಧ ಸಿಡಿದೆದ್ದ ವಕೀಲರ ಸಂಘ : FIR ದಾಖಲಿಸದಿದ್ರೆ ರಾಜ್ಯಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ..!
Share on WhatsAppShare on FacebookShare on Telegram

ಬೆಳಗಾವಿ : ವಕೀಲರೊಬ್ಬರ ಮೇಲೆ ಏಕಾಏಕಿ ಹಲ್ಲೆ ನಡೆಸಿದ ಆರೋಪದಡಿ ಜಿಲ್ಲೆಯ ಅಥಣಿ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅಥಣಿ ವಕೀಲರ ಸಂಘ ಸಿಡಿದೆದ್ದಿದ್ದು, ಪಟ್ಟಣದ ಹಲ್ಯಾಳ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದೆ.

ADVERTISEMENT
ನ್ಯಾಯವಾದಿ ಮೇಲೆ ಖಾಕಿ ದೌರ್ಜನ್ಯ : ಅಥಣಿ ಪಿಎಸ್‌ಐ ಸೇರಿ ಸಿಬ್ಬಂದಿ ವಿರುದ್ಧ ದೂರು ದಾಖಲು..

ಹಲ್ಲೆ ನಡೆಸಿದ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ದೂರು ನೀಡಿ 24 ಗಂಟೆಗಳು ಕಳೆದರೂ ಎಫ್‌ಐಆರ್ ದಾಖಲಿಸದ ಪೊಲೀಸ್ ಇಲಾಖೆಯ ನಡೆಯನ್ನು ಖಂಡಿಸಿದ ವಕೀಲರು, ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಕಳೆದ ಮೇ 30 ರಂದು ತಾಲೂಕಿನ ಸತ್ತಿ ಗ್ರಾಮದ ನಿವಾಸಿ ಹಾಗೂ ವಕೀಲಮಲ್ಲಿಕಾರ್ಜುನ ಕೋರಿ ಪೊಲೀಸರಿಂದ  ದೌರ್ಜನ್ಯಕ್ಕೊಳಗಾಗಿದ್ದಾರೆ. ಮೂರು ದಿನದ ಹಿಂದೆ ಸತ್ತಿ ಗ್ರಾಮದಲ್ಲಿ ನಡೆದ ಜಾತ್ರೆಯ ವೇಳೆ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದಿತ್ತು. ಗಾಯಾಳುಗಳು ವಕೀಲ ಮಲ್ಲಿಕಾರ್ಜುನ ಮನೆಯ ಎದುರಿನ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಈ ವೇಳೆ ರಾತ್ರಿ ಸುಮಾರು 8:40ಕ್ಕೆ ಸ್ಥಳಕ್ಕೆ ಬಂದ ಅಥಣಿ ಪಿಎಸ್‌ಐ ಗಿರಿಮಲ್ಲಪ್ಪ ಉಪ್ಪಾರ, ಪೇದೆ ವಿಷ್ಣು ಗಾಯಕವಾಡ ಹಾಗೂ ಸಮವಸ್ತ್ರದಲ್ಲಿರದ ಇತರ ಇಬ್ಬರು ಸಿಬ್ಬಂದಿ, ಜನರನ್ನು ಚದುರಿಸುವ ಭರದಲ್ಲಿ ಲಾಠಿ ಪ್ರಹಾರ ನಡೆಸಿದ್ದರು.
ಈ ಸಂದರ್ಭದಲ್ಲಿ ತಮ್ಮ ಮನೆಯ ಕಟ್ಟೆಯ ಮೇಲೆ ಕುಳಿತಿದ್ದ ವಕೀಲ ಮಲ್ಲಿಕಾರ್ಜುನ ಬಳಿ ಬಂದ ಪೊಲೀಸರು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಶರ್ಟ್ ಕಾಲರ್ ಹಿಡಿದು ಎಳೆದಾಡಿದ್ದು. ನಾನು ವಕೀಲನಿದ್ದೇನೆ ಎಂದು ಹೇಳಿದರೂ ಲೆಕ್ಕಿಸದೆ, ಕೋರ್ಟ್‌ನಲ್ಲಿ ಹೇಳಿಕೋ ಎಂದು ವೃತ್ತಿಗೆ ಅವಮಾನಿಸಿದ್ದಾರೆ. ಅಲ್ಲದೇ ಪೇದೆ ವಿಷ್ಣು ಗಾಯಕವಾಡ ಕಾಲಿನಿಂದ ಒದ್ದು ಹಲ್ಲೆ ನಡೆಸಿದ್ದಾನೆ ಎಂದು ಮಲ್ಲಿಕಾರ್ಜುನ್ ದೂರಿನಲ್ಲಿ ಆರೋಪಿಸಿದ್ದಾರೆ.

ಇದನ್ನೂ ಓದಿ : ರಾಜೀವ್‌ ನನ್ನ ಸಾಮರ್ಥ್ಯ ಗುರುತಿಸಿದ್ರು, ಸೋನಿಯಾ ನಾಯಕತ್ವದ ಪಾಠ ಹೇಳಿದ್ರು : ಗಾಂಧಿ ಕುಟುಂಬ ಕೊಂಡಾಡಿದ ಡಿಕೆ ಶಿವಕುಮಾರ್

ಇನ್ನೂ ಹಲ್ಲೆ ನಡೆಸಿರುವ ಆರೋಪಿತ ಪೊಲೀಸರ ವಿರುದ್ಧ ದೂರು ನೀಡಿದರೂ, ಪೊಲೀಸರು ತಮ್ಮ ಇಲಾಖೆಯ ಸಿಬ್ಬಂದಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಎಫ್‌ಐಆರ್ ದಾಖಲಿಸುತ್ತಿಲ್ಲ ಎಂದು ಆರೋಪಿಸಿ ಇಂದು ವಕೀಲ ಸಂಘದಿಂದ ಹಲ್ಯಾಳ ವೃತ್ತದಲ್ಲಿ ಜಮಾಯಿಸಿ ಪಿಎಸ್‌ಐ ದೌರ್ಜನ್ಯವನ್ನು ಖಂಡಿದ್ದಲ್ಲದೆ, ಗೂಂಡಾ ಪೊಲೀಸರಿಗೆ ಧಿಕ್ಕಾರ ಎಂದು ಘೋಷಣೆ ಕೂಗಿ ರಸ್ತೆ ತಡೆದು ಖಾಕಿ ನಡೆಯನ್ನು ಟೀಕಿಸಿದ್ದಾರೆ.

ಹಲ್ಲೆ ನಡೆಸಿದ ಪಿಎಸ್‌ಐ ಗಿರಿಮಲ್ಲಪ್ಪ ಉಪ್ಪಾರ ಹಾಗೂ ಇತರ ಮೂವರು ಸಿಬ್ಬಂದಿಗಳ ಮೇಲೆ ತಕ್ಷಣವೇ ಎಫ್‌ಐಆರ್ ದಾಖಲಾಗಬೇಕು. ಇವತ್ತೇ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳದಿದ್ದರೆ, ಮುಂಬರುವ ದಿನಗಳಲ್ಲಿ ಕೋರ್ಟ್ ಕಲಾಪಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸಿ ಉಗ್ರ ಹೋರಾಟ ಮಾಡಲಾಗುವುದು ಎಂದು ವಕೀಲರು ಎಚ್ಚರಿಸಿದ್ದಾರೆ

ಠಾಣೆಗೆ ಬರುವ ಕಕ್ಷಿದಾರರ (ಸಾರ್ವಜನಿಕರ) ಮುಂದೆಯೇ ಪೊಲೀಸರು ವಕೀಲರನ್ನು ಕೀಳಾಗಿ ಕಾಣುತ್ತಿದ್ದಾರೆ. ವಕೀಲರ ಹೆಸರಿಗೆ ಮಸಿ ಬಳಿಯುವ ಕೆಲಸ ನಿರಂತರವಾಗಿ ನಡೆಯುತ್ತಿದ್ದು, ನ್ಯಾಯವಾದಿಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಇದೆ ಸಂದರ್ಭದಲ್ಲಿ ಸಂಘದ ಸದಸ್ಯರು ಇಲಾಖೆಯ ಉನ್ನತ ಅಧಿಕಾರಿಗಳಲ್ಲಿ ಆಗ್ರಹಿಸಿದ್ದಾರೆ..

ಇನ್ನೂ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್‌ಗೆ ವಕೀಲರ ಸಂಘದ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದರು. ಈ ಗಂಭೀರ ವಿಚಾರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (ಎಸ್ಪಿ) ಗಮನಕ್ಕೆ ತಂದು ನೊಂದ ವಕೀಲರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.

ಬಳಿಕ ಮನವಿ ಸ್ವೀಕರಿಸಿದ ತಹಶೀಲ್ದಾರ್ , ಮೇಲಾಧಿಕಾರಿಗಳಿಗೆ ಈ ವಿಷಯ ಮುಟ್ಟಿಸಿ ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ. ಈ ವೇಳೆಯೂ ನಮಗೆ ಮೊದಲು ರಕ್ಷಣೆ ಬೇಕು, ಆಮೇಲೆ ನಾವು ಜನಸಾಮಾನ್ಯರ ರಕ್ಷಣೆ ಮಾಡುತ್ತೇವೆ. ಈ ಅನ್ಯಾಯದ ವಿರುದ್ಧ ಕೇವಲ ಅಥಣಿಯಲ್ಲಿ ಮಾತ್ರವಲ್ಲದೇ, ಕರ್ನಾಟಕದಾದ್ಯಂತ ವಕೀಲರು ಒಗ್ಗೂಡಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಪ್ರತಿಭಟನಾ ನಿರತ ವಕೀಲರು ಎಚ್ಚರಿಸಿದ್ದಾರೆ.

Tags: athani newsAthani PSIBelagavi newsBELAGAVI policeBelagavi SPCRIME NEWSFIRKarnataka PoliceLawyerLawyers AssociationProtest Against CopsPSI Assault On LawyerThasildar Athani
Previous Post

ಬಿಜೆಪಿಗೆ ಅಣ್ಣಾಮಲೈ ರಾಜೀನಾಮೆ..? : ಹೊಸ ಪಕ್ಷ ಕಟ್ಟುತ್ತಾರಾ ಸಿಂಗಂ..?

Next Post

ನೆಹರೂ ಅವರ 72 ವರ್ಷದ ದಾಖಲೆಗೆ ಬ್ರೇಕ್? ಜೂನ್ 10ರಂದು ಇತಿಹಾಸ ಬರೆಯಲಿರುವ ಪ್ರಧಾನಿ ಮೋದಿ!

Related Posts

ನೆಹರೂ ಅವರ 72 ವರ್ಷದ ದಾಖಲೆಗೆ ಬ್ರೇಕ್? ಜೂನ್ 10ರಂದು ಇತಿಹಾಸ ಬರೆಯಲಿರುವ ಪ್ರಧಾನಿ ಮೋದಿ!
Top Story

ವೈರಲ್ ಫೋಟೋ ನೋಡಿ ಕಳವಳಗೊಂಡ ಅಭಿಮಾನಿಗಳು: ದರ್ಶನ್ ಆರೋಗ್ಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

by ಪ್ರತಿಧ್ವನಿ
June 2, 2026
0

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಅವರದ್ದು ಎನ್ನಲಾದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಫೋಟೋದಲ್ಲಿ ದರ್ಶನ್ ಅವರ ಆರೋಗ್ಯ...

Read moreDetails
ದುರ್ಗಾ ಸ್ಟಾಲಿನ್–ಜಿ.ಟಿ. ದೇವೇಗೌಡ ಭೇಟಿ ರಾಜಕೀಯ ಸಂಚಲನ: ಪ್ರವಾಸದ ನಡುವೆ ನಡೆದ ಮಾತುಕತೆ ?

ದುರ್ಗಾ ಸ್ಟಾಲಿನ್–ಜಿ.ಟಿ. ದೇವೇಗೌಡ ಭೇಟಿ ರಾಜಕೀಯ ಸಂಚಲನ: ಪ್ರವಾಸದ ನಡುವೆ ನಡೆದ ಮಾತುಕತೆ ?

June 2, 2026
ನೆಹರೂ ಅವರ 72 ವರ್ಷದ ದಾಖಲೆಗೆ ಬ್ರೇಕ್? ಜೂನ್ 10ರಂದು ಇತಿಹಾಸ ಬರೆಯಲಿರುವ ಪ್ರಧಾನಿ ಮೋದಿ!

ಸಿಎಂ ಕುರ್ಚಿಗೆ ವಾಸ್ತು ಸ್ಪರ್ಶ: ಪ್ರಮಾಣವಚನಕ್ಕೂ ಮುನ್ನ ಡಿಕೆ ಶಿವಕುಮಾರ್ ಕೊಠಡಿಯಲ್ಲಿ ಅಜ್ಜಯ್ಯನ ಚಿತ್ರ ಅಳವಡಿಕೆ

June 2, 2026
ನೆಹರೂ ಅವರ 72 ವರ್ಷದ ದಾಖಲೆಗೆ ಬ್ರೇಕ್? ಜೂನ್ 10ರಂದು ಇತಿಹಾಸ ಬರೆಯಲಿರುವ ಪ್ರಧಾನಿ ಮೋದಿ!

ನೆಹರೂ ಅವರ 72 ವರ್ಷದ ದಾಖಲೆಗೆ ಬ್ರೇಕ್? ಜೂನ್ 10ರಂದು ಇತಿಹಾಸ ಬರೆಯಲಿರುವ ಪ್ರಧಾನಿ ಮೋದಿ!

June 2, 2026
ಬಿಜೆಪಿಗೆ ಅಣ್ಣಾಮಲೈ ರಾಜೀನಾಮೆ..? : ಹೊಸ ಪಕ್ಷ ಕಟ್ಟುತ್ತಾರಾ ಸಿಂಗಂ..?

ಬಿಜೆಪಿಗೆ ಅಣ್ಣಾಮಲೈ ರಾಜೀನಾಮೆ..? : ಹೊಸ ಪಕ್ಷ ಕಟ್ಟುತ್ತಾರಾ ಸಿಂಗಂ..?

June 2, 2026
Next Post
ನೆಹರೂ ಅವರ 72 ವರ್ಷದ ದಾಖಲೆಗೆ ಬ್ರೇಕ್? ಜೂನ್ 10ರಂದು ಇತಿಹಾಸ ಬರೆಯಲಿರುವ ಪ್ರಧಾನಿ ಮೋದಿ!

ನೆಹರೂ ಅವರ 72 ವರ್ಷದ ದಾಖಲೆಗೆ ಬ್ರೇಕ್? ಜೂನ್ 10ರಂದು ಇತಿಹಾಸ ಬರೆಯಲಿರುವ ಪ್ರಧಾನಿ ಮೋದಿ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada