ಮಾಜಿ ಪ್ರಧಾನಿ ಮಹಿಂದ ರಾಜಪಕ್ಸೆ ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಶ್ರೀಲಂಕಾದಲ್ಲಿ ಹಿಂಸಾಚಾರ ಭುಗಿಲೆದಿದೆ. ಇದರ ಮದ್ಯೆ ಮಾಜಿ ಪ್ರಧಾನಿ ತಮ್ಮ ಕುಟುಂಬ ಸಮೇತ ಪಲಾಯನ ಮಾಡಲು ಸಿದ್ದತೆ ನಡೆಸಿದೆ ಎಂದು ತಿಳಿದು ಬಂದಿದೆ.
ಶ್ರೀಲಂಕಾದ ಈಶಾನ್ಯ ಭಾಗದಲ್ಲಿರುವ ಟ್ರಿಂಕೋಮಲಿಯಲ್ಲಿರುವ ನೌಕಾ ನೆಲೆಯಲ್ಲಿ ಆಶ್ರಯ ಪಡೆದಿದೆ ಎಂದು ತಿಳಿದು ಬಂದಿದೆ. ರಾಜಧಾನಿ ಕೊಲೊಂಬೊದಿಂದ ಸುಮಾರು 270ಕಿ.ಮೀ ದೂರುವಿರುವ ಪ್ರದೇಶದ ಸುತ್ತ ಪ್ರತಿಭಟನಕಾರರು ಸುತ್ತುವರೆದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸದ್ಯ ಶ್ರೀಲಂಕಾದಲ್ಲಿ ತಲೆದೂರಿರುವ ಆರ್ಥಿಕ ಬಿಕ್ಕಟ್ಟಿನ ವಿರುದ್ದ ನಡೆದ ಪ್ರತಿಭಟನೆಯಲ್ಲಿ ಆಡಳಿತ ಪಕ್ಷದ ಶಾಸಕ ಹಾಗೂ ಸಂಸದ ಸೇರಿದಂತೆ ಒಟ್ಟು ಐದು ಮಂದಿ ಸಾವನಪ್ಪಿದ್ದಾರೆ ಮತ್ತು ರಾಷ್ಟ್ರವ್ಯಾಪಿ ಕರ್ಪ್ಯೂವನ್ನು ಸಹ ವಿಧಿಸಲಾಗಿದೆ. ರಾಜಪಕ್ಸೆ ರಾಜೀನಾಮೆ ನೀಡಿದ ನಂತರ ಭುಗಿಲೆದ್ದ ಹಿಂಸಾಚಾರದಲ್ಲಿ ಸುಮಾರು 225ಕ್ಕು ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಪ್ರತಿಭಟನಕಾರರು ರಾಜಪಕ್ಸೆಯ ಅಧಿಕೃತ ನಿವಾಸದ ಬಳಿ ಜಮಾಯಿಸಿ ಮುತ್ತಿಗೆ ಹಾಕಲು ಯತ್ನಿಸಿದ್ದರು. ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಲು ಆಶ್ರುವಾಯು ಪ್ರಯೋಗಿಸಿ ರಾಜಪಕ್ಸೆ ಕುಟುಂಬದವರನ್ನು ರಕ್ಷಿಸಿ ಹೆಲಿಕಾಪ್ಟರ್ ಮೂಲಕ ಸೇನೆ ಕೊಂಡೊಯಿತ್ತು.
ಆಕ್ರೋಶಭರಿತ ನಾಗರೀಕರು ಕನಿಷ್ಠ 10 ಬಾಂಬ್ಗಳನ್ನು ಮನೆಯ ಕಾಂಪೌಂಡ್ಗೆ ಎಸೆದರು ಎಂದು ಉನ್ನತ ಭದ್ರತಾ ಅಧಿಕಾರಿ ತಿಳಿಸಿದ್ದಾರೆ. 1948ರ ನಂತರ ಶ್ರೀಲಂಕಾ ಸ್ವತಂತ್ರ ಪಡೆದ ನಂತರ ಅತ್ಯಂತ ಆರ್ಥಿಕ ಬಿಕ್ಕಟ್ಟು ಎದುರಿಸಿದೆ ಮತ್ತು ರಾಜಪಕ್ಸೆ ಕುಟುಂಬವು ಇದಕ್ಕೆ ನೇರ ಹೊಣೆ ಎಂದು ನಾಗರೀಕರು ಆರೋಪಿಸಿದ್ದಾರೆ.
ಶ್ರೀಲಂಕಾದ ಪ್ರಮುಖ ವಿರೋಧ ಪಕ್ಷ ಸಮಗಿ ಜನ ಬಲವೇಗಯಾ(SJB) ಮಧ್ಯಂತರ ಸರ್ಕಾರವನ್ನು ರಚಿಸುವ ಪ್ರಸ್ತಾವನೆಯನ್ನು ತಿರಸ್ಕರಿಸಿ ಅಧ್ಯಕ್ಷರ ರಾಜೀನಾಮೆಗೆ ಆಗ್ರಹಿಸಿದೆ.
ಮಹಿಂದ ರಾಜಪಕ್ಸೆ ನಿನ್ನೆ ರಾಜೀನಾಮೆ ನೀಡಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಟ್ವೀಟ್ ಮಾಡಿದ ನಂತರ ಹಿಂಸಾಚಾರ ಭುಗಿಲದಿದ್ದೆ. ಆಡಳಿತ ಪಕ್ಷದ ಶಾಸಕರು ಹಾಗೂ ಸಂಸದರಿಗೆ ಸೇರಿದ 41 ಮನೆಗಳನ್ನು ರಾತ್ರೋರಾತ್ರಿ ಬೆಂಕಿ ಹಚ್ಚಲಾಗಿದೆ.
ಇನ್ನು ಮುಂದಿನ ದಿನಗಳಲ್ಲಿ ಇದು ಎಲ್ಲಿಯವರೆಗು ಬಂದು ನಿಲ್ಲುತ್ತದೆ ಎಂಬುದನ್ನ ಕಾದು ನೋಡಬೇಕಿದೆ.