2016, 2017, 2018ನೇ ಸಾಲಿನಲ್ಲಿ 968 ಕೋಟಿ ಖರ್ಚು ಮಾಡಿ 9,558 ಕೊಳವೆ ಬಾವಿಗಳನ್ನ ಕೊರೆಯಲು ಶುರು ಮಾಡಿದ್ದ ಪಾಲಿಕೆ

ಆ ಬಳಿಕ 976 ಶುದ್ಧಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಗಿದೆ ಎಂದು ಲೆಕ್ಕ ಕೊಟ್ಟಿದ್ದ ಬಿಬಿಎಂಪಿ ಅಧಿಕಾರಿಗಳು
9,588 ಕೊಳವೆಬಾವಿಗಳಲ್ಲಿ 10% ಕೊಳವೆಬಾವಿಗಳ ದಾಖಲೆ ಕೊಡಲು ಪಾಲಿಕೆ ಅಧಿಕಾರಿಗಳಿಗ ವಿಫಲ
• ಪಾಲಿಕೆ ವ್ಯಾಪ್ತಿಯ ವಿವಿಧ ಕಡೆ ಒಟ್ಟು 9,558 ಕೊಳವೆ ಬಾವಿ ಕೊರೆಯುವ ಯೋಜನೆ

- ಒಂದು ಆರ್ ಓ ಪ್ಲಾಂಟ್ ಗೆ 25 ರಿಂದ 28 ಲಕ್ಷ ರೂಪಾಯಿ ಬಿಲ್
- 100 ಅಡಿ ಆಳ ಕೊಳವೆಬಾವಿ ಕೊರೆದು 2 ಸಾವಿರ ಅಡಿ ಕೊರೆಯಲಾಗಿದೆ ಎಂದು ಲೆಕ್ಕ
- ಈ ಯೋಜನೆಗೆ 956 ಕೋಟಿ ರೂಪಾಯಿ ಬಿಲ್ ಕ್ಲೈಮ್ ಮಾಡಿದ್ದ ಬಿಬಿಎಂಪಿ ಇಂಜಿನಿಯರ್ ಚೀಫ್ ಪ್ರಹ್ಲಾದ್
- ಆದರೆ ಅಷ್ಟೊಂದು ಪ್ರಮಾಣದಲ್ಲಿ ದಾಖಲೆ ನೀಡಲು ವಿಫಲ ಆಗಿರುವ ಪಾಲಿಕೆ ಅಧಿಕಾರಿಗಳು
- ಈ ಸಂಬಂಧ ಪಾಲಿಕೆಯ 25ಕ್ಕೂ ಅಧಿಕ ಅಧಿಕಾರಿಗಳಿಗೆ ಇಡಿ ನೋಟೀಸ್ ಈ ಹಿಂದೆ ನೀಡಿತ್ತು • ಕೊಳವೆ ಬಾವಿ ಕೊರೆಸದೆ ಬಿಲ್ ನಲ್ಲಿ ಗೋಲ್ಮಾಲ್
- ಈ ಬಗ್ಗೆ 2019ರಲ್ಲಿ ACBಗೆ ದೂರು ನೀಡಿದ್ದ ಬಿಜೆಪಿ ಮುಖಂಡ ಎನ್ ಆರ್ ರಮೆಶ್
- ಬಳಿಕ ಎಸಿಬಿ ಮುಚ್ಚಿದ ಮೇಲೆ ಲೋಕಾಯುಕ್ತಕ್ಕೆ ಪ್ರಕರಣ ವರ್ಗ
- 2022ಲ್ಲಿ ಮೊತ್ತದ ಪ್ರಮಾಣ ನೋಡಿ ಪ್ರಕರಣ ಇಡಿಗೆ ವರ್ಗ ಮಾಡಿದ್ದ ಲೋಕಾಯುಕ್ತ
ಬಿ.ಎಸ್.ಪ್ರಹ್ಲಾದ್ ಹೇಳಿಕೆ.

ಇದು ಇ.ಡಿ.ದಾಳಿ ಅಲ್ಲ. ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಈ ಹಿಂದೆ ದಾಖಲಾದ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಇಡಿ ಅಧಿಕಾರಿಗಳಿಂದ ಬಿಬಿಎಂಪಿ ಇಂಜಿನಿಯರ್ ಇನ್ ಚೀಫ್ ಗೆ ಡ್ರಿಲ್ ಬಿಬಿಎಂಪಿಯಲ್ಲಿ ನಡೆದಿದೆ ಎನ್ನಲಾದ ಎರಡು ಪ್ರಮುಖ ಪ್ರಾಜೆಕ್ಟ್ ಬಗ್ಗೆ ಪ್ರಶ್ನೆ ಬೋರ್ ವೆಲ್ ಕಾಮಗಾರಿಯಲ್ಲಿ ಅಕ್ರಮ ಹಾಗೂ ವೈಟ್ ಟಾಪಿಂಗ್ ನಲ್ಲಿ ಬಹುಕೋಟಿ ಹಗರಣ ಈ ಎರಡು ಕಾಮಗಾರಿಗಳ ಬಗ್ಗೆ ಮಾಹಿತಿ ಕೇಳುತ್ತಿರುವ ಇಡಿ ಅಧಿಕಾರಿಗಳು.
2018-19ರಲ್ಲಿ ಬೆಂಗಳೂರಲ್ಲಿ ನಡೆದ ವೈಟ್ ಟಾಪಿಂಗ್ ನಲ್ಲಿ ಭಾರೀ ಅಕ್ರಮ ಆರೋಪ, ಈ ಬಗ್ಗೆ 2019ರಲ್ಲಿ ಲೋಕಾಯುಕ್ತಕ್ಕೆ ದೂರು ನೀಡಿದ್ದ ಬೆಂಗಳೂರು ಬಿಜೆಪಿ ಶಾಸಕರ ನಿಯೋಗ. ಮೊದಲ ಹಂತದಲ್ಲಿ 93.37 kmಗೆ 1147.76 ಕೋಟಿ ವೆಚ್ಚ, ಎರಡನೇ ಹಂತದಲ್ಲಿ 62.80 kmಗೆ 758.56 ಕೋಟಿ ವೆಚ್ಚ, ಮೂರನೇ ಹಂತದಲ್ಲಿ 123 kmಗೆ 1139 ಕೋಟಿ ವೆಚ್ಚ ಮಾಡಿರುವ ಪಾಲಿಕೆ. 279 km ಉದ್ದದ ರಸ್ತೆಗ ವೈಟ್ ಟಾಪಿಂಗ್ ಹಾಗೂ ರಸ್ತೆ ದುರಸ್ಥಿಗೆ ಪಾಲಿಕೆ ವೆಚ್ಚ ಮಾಡಿದ್ದು ಬರೋಬ್ಬರಿ 3046 ಕೋಟಿ. ಪ್ರತಿ ಕಿಲೋ ಮೀಟರ್ ಗೆ 12 ರಿಂದ 18 ಕೋಟಿವರೆಗೆ ವೆಚ್ಚ ಮಾಡಿರುವುದಾಗಿ ಪಾಲಿಕೆ ಲೆಕ್ಕ, ಈ ಬಗ್ಗೆ 2019ರಲ್ಲಿ ಲೋಕಾಯುಕ್ತಕ್ಕೆ ದೂರು ನೀಡಿದ್ದ ಬೆಂಗಳೂರು ಬಿಜೆಪಿ ಶಾಸಕರ ನಿಯೋಗ
ಈ ಅವಧಿಯಲ್ಲಿ ಹೈದರಾಬಾದ್ ಮೂಲದ ಮಧುಕಾನ್ ಕಂಪೆನಿಗೆ ಗುತ್ತಿಗೆ ನೀಡಿದ್ದ ಪಾಲಿಕೆ

ದೇಶದ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ಸ್ಥಳೀಯ ಪಾಲಿಕೆಗೆಳ ಜೊತೆ ಗುತ್ತಿಗೆಹೊಂದಿರುವ ಮಧುಕಾನ್, 2022ರಲ್ಲಿ ಗ್ರೇಟರ್ ಡೆಲ್ಲಿ ಅಥಾರಿಟಿಯಲ್ಲಿ ವೈಟ್ ಟಾಪಿಂಗ್ ಕಾಮಗಾರಿಯಲ್ಲಿ ಮುಧುಕಾನ್ ಅಕ್ರಮ ಈ ಸಂಬಂಧ ಮಧುಕಾನ್ ಹಾಗೂ ಡೆಲ್ಲಿ ಅಥಾರಿಟಿ ಮೇಲೆ ದಾಳಿ ಮಾಡಿದ್ದ ಇಡಿ ಈ ವೇಳೆ ಅಂದಾಜು 93 ಕೋಟಿಯಷ್ಟು ಬೃಹತ್ ಮೊತ್ತದ ಹಗರಣ ಬೆಳಕಿಗೆ ಇದೀಗ ಇದೇ ಮಾದರಿಯಲ್ಲಿ ಬಿಬಿಎಂಪಿಯಲ್ಲೂ ಆಗಿರುವ ಶಂಕೆ ಹಿನ್ನೆಲೆ ಪರಿಶೀಲನೆ
ಆರ್.ಆರ್ ನಗರ, ಬೊಮ್ಮನಹಳ್ಳಿ, ಯಲಹಂಕ, ಮಹಾದೇವಪುರ, ದಾಸರಹಳ್ಳಿ ಐದು ವಲಯಗಳ ಕಛೇರಿಗಳ ಮೇಲೆ ಇಡಿ ದಾಳಿ.
ಐದು ವಲಯಗಳ ಇಂಜಿನಿಯರ್ ಕಛೇರಿಗಳ ಮೇಲೆ ಇಡಿ ದಾಳಿ, ಕಡತಗಳ ಪರಿಶೀಲನೆ ಮಾಡ್ತಿರೋ ಇಡಿ ಅಧಿಕಾರಿಗಳು.