• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಲಖೀಂಪುರ್ ಘಟನೆ ಬಿಜೆಪಿಯ ಹಿಂಸಾಚಾರವನ್ನು ಬಿಚ್ಚಿಟ್ಟಿದೆ: ಸಂಯುಕ್ತ ಕಿಸಾನ್‌ ಮೋರ್ಚಾ

Any Mind by Any Mind
October 9, 2021
in ದೇಶ
0
ಲಖೀಂಪುರ್ ಘಟನೆ ಬಿಜೆಪಿಯ ಹಿಂಸಾಚಾರವನ್ನು ಬಿಚ್ಚಿಟ್ಟಿದೆ: ಸಂಯುಕ್ತ ಕಿಸಾನ್‌ ಮೋರ್ಚಾ
Share on WhatsAppShare on FacebookShare on Telegram

ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಗಳನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಹಿಂಸಾತ್ಮಕ ಕ್ರಮಗಳನ್ನು ಅನುಸರಿಸುವ ಮೂಲಕ ಹತ್ತಿಕ್ಕಲು ಯತ್ನಿಸುತ್ತಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಆರೋಪಿಸಿದೆ ಮತ್ತು ಉತ್ತರ ಪ್ರದೇಶದ ಲಖಿಂಪುರ್ ಖೇರಿ ಘಟನೆಯ ಮೂಲಕ ಅವರ ಉದ್ದೇಶ ಬಹಿರಂಗವಾಗಿದೆ ಎಂದಿದೆ.

ADVERTISEMENT

ಹಿರಿಯ ಎಸ್‌ಕೆಎಂ ನಾಯಕ ದರ್ಶನ್ ಪಾಲ್ ಮಾತನಾಡಿ, ಲಖಿಂಪುರ್ ಖೇರಿ ಹಿಂಸಾಚಾರವನ್ನು ಪ್ರತ್ಯೇಕವಾಗಿ ನೋಡಬಾರದು ಏಕೆಂದರೆ, ಈ ಘಟನೆ ರೈತರ ವಿರುದ್ಧ ನಡೆಯುತ್ತಿರುವ ದೊಡ್ಡ ಪಿತೂರಿಯ ಭಾಗವಾಗಿದೆ. “ಲಖೀಂಪುರ್ ಘಟನೆ ಜನರನ್ನು ಭಯಭೀತಗೊಳಿಸಲು ಮತ್ತು ಜನರ ಧ್ವನಿಯನ್ನು ಅಡಗಿಸುವ ವಾತಾವರಣವನ್ನು ಸೃಷ್ಟಿಸುವ ಪ್ರಯತ್ನವಾಗಿದೆ. ಎಸ್‌ಕೆಎಂ ಈ ವಿಧಾನದ ವಿರುದ್ಧ ದೃಢವಾಗಿ ನಿಂತಿದೆ ಮತ್ತು ಧ್ವನಿ ಎತ್ತುವುದನ್ನು ಮುಂದುವರಿಸುತ್ತದೆ, ”ಎಂದು ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಎಸ್‌ಕೆಎಂ ಘಟಕಗಳಲ್ಲಿ ಒಂದಾದ ಭಾರತೀಯ ಕಿಸಾನ್ ಒಕ್ಕೂಟದ (ಉಗ್ರಗಾನ್) ಅಧ್ಯಕ್ಷ ಜೋಗಿಂದರ್ ಸಿಂಗ್ ಮಾತನಾಡಿ, ರೈತರ ಆಂದೋಲನ ಶಾಂತಿಯುತವಾಗಿ ನಡೆಯುತ್ತಿದೆ, ಆದರೆ ಬಿಜೆಪಿ ಸರ್ಕಾರಗಳು – ಕೇಂದ್ರದಲ್ಲಿರಲಿ ಅಥವಾ ಉತ್ತರ ಪ್ರದೇಶದಲ್ಲಿ ಚಳುವಳಿಯನ್ನು ಕಿತ್ತೊಗೆಯಲು ವಿವಿಧ ತಂತ್ರಗಳನ್ನು ಮಾಡುತ್ತಿವೆ ಎಂದು ಹೇಳಿದ್ದಾರೆ.

“ಬಿಜೆಪಿ ಪದೇ ಪದೇ ಚಳುವಳಿಯನ್ನು ಒಂದು ಅಥವಾ ಇನ್ನೊಂದರ ಜೊತೆ ಹೊಂದಿಸಲು ಪ್ರಯತ್ನಿಸುತ್ತಿತ್ತು, ಅದನ್ನು ಅಪಖ್ಯಾತಿಗೊಳಿಸುವ ಏಕೈಕ ಉದ್ದೇಶದಿಂದ. ಬಿಜೆಪಿಯವರು ನಮ್ಮ ಚಳುವಳಿಯನ್ನು ‘ಖಲಿಸ್ತಾನಿಗಳು’, ‘ಪಾಕಿಸ್ತಾನ-ಚೀನಾ’ ನಂತರ ನಮ್ಮನ್ನು ದೇಶವಿರೋಧಿ ಎಂದು ಲೇಬಲ್ ಮಾಡಲು ಪ್ರಯತ್ನಿಸಿದರು, ಆದರೆ ಅವರ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ. ಈಗ, ಕಳೆದ ಕೆಲವು ತಿಂಗಳುಗಳಲ್ಲಿ ಅವರು ಹೊಸ ಆಟವನ್ನು ಆಡಲು ಪ್ರಾರಂಭಿಸಿದರು, ಅವರ ಆಟ ಹಿಂಸಾತ್ಮಕವಾಗಿದ್ದು ತುಂಬಾ ಅಪಾಯಕಾರಿಯಾಗಿದೆ “ಎಂದು ಜೋಗಿಂದರ್ ಸಿಂಗ್ ಹೇಳಿದ್ದಾರೆ.

“ಬಿಜೆಪಿ ಹಿಂಸೆಯಲ್ಲಿ ಭಾಗಿಯಾಗಿದ್ದರೂ, ನಾವು ಶಾಂತಿಯುತವಾಗಿ ಉತ್ತರಿಸುತ್ತೇವೆ, ಇದು ನಮ್ಮ ಚಳುವಳಿಯ ಶಕ್ತಿ. ನಮ್ಮ ಬೇಡಿಕೆಗಳು ಈಡೇರುವವರೆಗೂ ನಮ್ಮ ಆಂದೋಲನ ಮುಂದುವರಿಯುತ್ತದೆ. ಈಗ ಪಶ್ಚಾತ್ತಾಪಪಡುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.

ಕೇಂದ್ರ ರಾಜ್ಯ ಖಾತೆ ಸಚಿವ ಅಜಯ್ ಮಿಶ್ರಾ ಅವರನ್ನು ತಕ್ಷಣವೇ ವಜಾಗೊಳಿಸಬೇಕು ಮತ್ತು ಬಂಧಿಸಬೇಕು ಎಂದು ಸಿಂಗ್ ಹೇಳಿದರು. ಆತನ ಮಗ ಆಶಿಶ್ ಮಿಶ್ರಾ ಕೂಡ ವಿಳಂಬ ಮಾಡದೆ ಬಂಧಿಸಬೇಕು  ಎಂದು ಆಗ್ರಹಿಸಿದ್ದಾರೆ.

“ನಾವು ಅಕ್ಟೋಬರ್ 12 ಅನ್ನು ‘ಶಹೀದ್ ಕಿಸಾನ್ ದಿವಸ್’ ಎಂದು ಆಚರಿಸುತ್ತೇವೆ ಮತ್ತು ಟಿಕೊನಿಯಾದ ಲಖಿಂಪುರ್ ಖೇರಿಯಲ್ಲಿ ಮೃತಪಟ್ಟ ರೈತರ ‘ಆಂಟಿಮ್ ಅರ್ದಾಸ್’ (ಅಂತಿಮ ವಿಧಿ) ಗೆ ಸೇರುವಂತೆ ನಾವು ದೇಶದಾದ್ಯಂತ ರೈತರಿಗೆ ಮನವಿ ಮಾಡಿದ್ದೇವೆ ಎಂದು ಜೋಗಿಂದರ್ ಸಿಂಗ್ ಹೇಳಿದ್ದಾರೆ.

Tags: BJPfarm bills 2020Farm laws protestFarmersFarmers protestlakimpurUttar PradeshYogi Adityanathನರೇಂದ್ರ ಮೋದಿಬಿಜೆಪಿ
Previous Post

ಲಖೀಂಪುರ್ ಹಿಂಸಾಚಾರ – ಪೊಲೀಸರ ಮುಂದೆ ಹಾಜರಾದ ಮಂತ್ರಿ ಮಗ ಆಶೀಶ್ ಮಿಶ್ರಾ

Next Post

ಅಶೋಕ Vs ಸೋಮಣ್ಣ: ಬೆಂಗಳೂರು ಉಸ್ತುವಾರಿ ವಿಚಾರದಲ್ಲಿ ಸಚಿವರ ನಡುವೆ ಕಾದಾಟ.!

Related Posts

ಇರಾನ್‌ – ಅಮೆರಿಕ ನಡುವೆ ಮುನೀರ್‌ ಮಧ್ಯಸ್ಥಿಕೆ : ದೊಡ್ಡಣ್ಣ ಎಂದು ಕೊಚ್ಚಿಕೊಳ್ಳುವ ಟ್ರಂಪ್‌ಗ್ಯಾಕೆ ಬಂತು ಈ ದುಸ್ಥಿತಿ..?
Top Story

ಇರಾನ್‌ – ಅಮೆರಿಕ ನಡುವೆ ಮುನೀರ್‌ ಮಧ್ಯಸ್ಥಿಕೆ : ದೊಡ್ಡಣ್ಣ ಎಂದು ಕೊಚ್ಚಿಕೊಳ್ಳುವ ಟ್ರಂಪ್‌ಗ್ಯಾಕೆ ಬಂತು ಈ ದುಸ್ಥಿತಿ..?

by ಪ್ರತಿಧ್ವನಿ
April 19, 2026
0

ನವದೆಹಲಿ : ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಪಾಕಿಸ್ತಾನ, ಇರಾನ್ ಮತ್ತು ಅಮೆರಿಕ ನಡುವಿನ ಶಾಂತಿ ಮಾತುಕತೆಯಲ್ಲಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್...

Read moreDetails
ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

April 18, 2026
ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

April 18, 2026
ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

April 18, 2026
ಆಟೋ ಚಾಲಕರ ನೋವು, ಸಂಕಷ್ಟ ಈ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ : ಆಪ್‌ ಆಕ್ರೋಶ..!

ಆಟೋ ಚಾಲಕರ ನೋವು, ಸಂಕಷ್ಟ ಈ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ : ಆಪ್‌ ಆಕ್ರೋಶ..!

April 18, 2026
Next Post
ಅಶೋಕ Vs ಸೋಮಣ್ಣ: ಬೆಂಗಳೂರು ಉಸ್ತುವಾರಿ ವಿಚಾರದಲ್ಲಿ ಸಚಿವರ ನಡುವೆ ಕಾದಾಟ.!

ಅಶೋಕ Vs ಸೋಮಣ್ಣ: ಬೆಂಗಳೂರು ಉಸ್ತುವಾರಿ ವಿಚಾರದಲ್ಲಿ ಸಚಿವರ ನಡುವೆ ಕಾದಾಟ.!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada