ನಾಗಮಂಗಲ (Nagamangala) ಗಲಭೆ ಸಂಬಂಧ ಪೊಲೀಸರು (Police) 52 ಆರೋಪಿಗಳನ್ನು ಬಂಧಿಸಿದ್ದು, ಈ ಆರೋಪಿಗಳಿಗೆ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಪೊಲೀಸರು ಕರೆದೊಯ್ಯುವ ವೇಳೆ ಆರೋಪಿಗಳ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.
ಇಂದು ಗಲಭೆ ಪೀಡಿತ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣಕ್ಕೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ (H D kumaraswamy) ಭೇಟಿ ನೀಡಲಿದ್ದಾರೆ. ಅನ್ಯಕೋಮಿಯರ ದಾಂಧಲೆಯಿಂದ ನಷ್ಟ ಅನುಭಿಸಿರು ಸಂತ್ರಸ್ತರನ್ನ ಹೆಚ್ ಡಿ ಕುಮಾರಸ್ವಾಮಿ ಭೇಟಿ ಮಾಡಲಿದ್ದಾರೆ.
ಇನ್ನು ಗಲಭೆ ಪ್ರಕರಣ ಹಿನ್ನೆಲೆಯಲ್ಲಿ ನಾಗಮಂಗಲ ಪಟ್ಟಣದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನಾಗಮಂಗಲ ಟೌನ್ ಹಾಗೂ ಸುತ್ತಮುತ್ತ 3 ಕಿಮೀ ವ್ಯಾಪ್ತಿಯಲ್ಲಿ ನಿಷೇಧ ಹೇರಲಾಗಿದೆ. ಮದ್ಯದ ಅಂಗಡಿ, ಬಾರ್ & ರೆಸ್ಟೋರೆಂಟ್ (Bar & Restaurant) ಮುಚ್ಚುವಂತೆ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ಆದೇಶ ಹೊರಡಿಸಲಾಗಿದೆ.