• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನಾಗಮಂಗಲಕ್ಕೆ ಕುಮಾರಸ್ವಾಮಿ ಭೇಟಿ.. ಚಲುವರಾಯಸ್ವಾಮಿ ಗುದ್ದು..

ಕೃಷ್ಣ ಮಣಿ by ಕೃಷ್ಣ ಮಣಿ
September 19, 2024
in Top Story, ಕರ್ನಾಟಕ, ರಾಜಕೀಯ, ಶೋಧ
0
ನಾಗಮಂಗಲಕ್ಕೆ ಕುಮಾರಸ್ವಾಮಿ ಭೇಟಿ.. ಚಲುವರಾಯಸ್ವಾಮಿ ಗುದ್ದು..
Share on WhatsAppShare on FacebookShare on Telegram

ADVERTISEMENT

ಮಂಡ್ಯ: ನಾಗಮಂಗಲ ಗಣೇಶ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಮಂಗಲದ ಬದ್ರಿಕೊಪ್ಪಲಿಗೆ ಕೇಂದ್ರ ಸಚಿವ H.D ಕುಮಾರಸ್ವಾಮಿ ಭೇಟಿ ನೀಡಿದ್ದಾರೆ. ಗಲಭೆ ಬಳಿಕ ಎರಡನೇ ಬಾರಿಗೆ ನಾಗಮಂಗಲಕ್ಕೆ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ. ಗಲಭೆ ಬಳಿಕ ಬಂಧನದ ಭೀತಿಯಿಂದ ಯುವಕರು ಊರು ತೊರೆದಿದ್ದು, ಯುವಕರ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಕುಮಾರಸ್ವಾಮಿ ಮತ್ತೊಮ್ಮೆ ಆಗಮಮಿಸಿದ್ದಾರೆ. ಇದಕ್ಕೂ ಮೊದಲು ಹಾನಿ ಸ್ಥಳಗಳಿಗೆ ಭೇಟಿ ನೀಡಿದ್ದರು.

ಬದ್ರಿಕೊಪ್ಪಲಿನ ಜನರಿಗೆ ಕುಮಾರಸ್ವಾಮಿ ನೆರವಿನ ಭರವಸೆ ನೀಡಿದ್ದಾರೆ. ಜನರ ಸಮಸ್ಯೆ ಆಲಿಸಿದ ಬಳಿಕ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ಆಮಿ ಧನ ಸಹಾಯ ಮಾಡಿದ್ದಾರೆ. ನಾಗಮಂಗಲ ಗಲಭೆ ಹಿನ್ನೆಲೆ ಬದ್ರಿಕೊಪ್ಪಲಿನ 13 ಜನ ಜೈಲು ಸೇರಿದ್ದರು. ಜೈಲು ಸೇರಿರುವ 13 ಜನ ಯುವಕರ ಕುಟುಂಬಕ್ಕೆ H.D ಕುಮಾರಸ್ಆಮಿ ಹಣದ ನೆರವು ನೀಡಿದ್ದಾರೆ. ಈ ನಡುವೆ ನಾಗಮಂಗಲ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪೊಲೀಸ್ ಅಧಿಕಾರಿಯನ್ನು ಸಸ್ಪೆಂಡ್ ಮಾಡಲಾಗಿದೆ. ಕರ್ತವ್ಯ ನಿರ್ಲಕ್ಷ್ಯ ಆರೋಪದಲ್ಲಿ ನಾಗಮಂಗಲ ಡಿವೈಎಸ್‌ಪಿ ಡಾ ಸುಮಿತ್ ಎ.ಆರ್ ಸಸ್ಪೆಂಡ್ ಮಾಡಿ ಮಂಡ್ಯ ಎಸ್‌ಪಿ ಮಲ್ಲಿಕಾರ್ಜು ಬಾಲದಂಡಿ ಆದೇಶ ಮಾಡಿದ್ದಾರೆ. ಇದಕ್ಕೂ ನಾಗಮಂಗಲ ಟೌನ್ ಠಾಣೆಯ ಇನ್ಸ್‌ಪೆಕ್ಟರ್‌ ಅಶೋಕ್ ಕುಮಾರ್ ಅವರನ್ನು ಅಮಾನತು ಮಾಡಲಾಗಿತ್ತು.

ನಾಗಮಂಗಲ ಗಲಭೆ ಬಗ್ಗೆ ಜಿಲ್ಲಾಡಳಿತದಿಂದ ವರದಿ ವಿಚಾರವಾಗಿ ಮಂಡ್ಯದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿದ್ದು, ಸರ್ಕಾರಕ್ಕೆ ವರದಿ ಬಂದಿದೆ, ಆದಷ್ಟು ಬೇಗ ಪರಿಹಾರ ಕೊಡ್ತೇವೆ ಎಂದಿದ್ದಾರೆ. ಇನ್ನು ಕೇಂದ್ರ ಸಚಿವ ಕುಮಾರಸ್ವಾಮಿ ನಾಗಮಂಗಲಕ್ಕೆ ಭೇಟಿ ವಿಚಾರವಾಗಿ ಮಾತನಾಡಿ, ಮುಗಿದು ಹೋಗಿರುವ ವಿಚಾರ. ಅದನ್ನ ಇಲ್ಲಿಗೆ ಬಿಟ್ಟು ಬಿಡೋದು ಒಳ್ಳೆಯದು. ಪದೇ ಪದೇ ಹೋಗುವುದರಿಂದ ಏನು ಪ್ರಯೋಜನ. ಪರಿಹಾರ ಕೊಡಿಸುವ ವಿಚಾರವಾಗಿ ಕೆಲಸ ಮಾಡ್ತೇವೆ ಎಂದಿದ್ದಾರೆ. ಸೈಲೆಂಟ್ ಆಗಿರೋದನ್ನ ದಿನ ಬೆಳಗ್ಗೆ ಎದ್ದು ಕೆದಕುತ್ತಿದ್ದಾರೆ ನಾನು ಏನು ಮಾಡೋಕ್ಕಾಗುತ್ತೆ. ಅವರಿಗೆ ಅವರೇ ಪರಿಹಾರ ಹುಡಿಕಿಕೊಳ್ಳಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಸಿಎಂ ವಿರುದ್ದ ಹಿಟ್ಲರ್ ಎಂಬ ಶೋಭಾ ಕರಂದ್ಲಾಜೆ ಹೇಳಿಕೆ ವಿಚಾರಕ್ಕೆ ಉತ್ತರ ಕೊಟ್ಟಿರುವ ಚಲುವರಾಯಸ್ವಾಮಿ, ಕೇಂದ್ರದ ಸಚಿವರು ತೂಕವಾಗಿ ಮಾತನಾಡಬಹುದು. ಅವರಿಗೆ ನಾವು ಉತ್ತರ ಕೊಡಬಹುದು. ಉತ್ತರ ಕೊಟ್ಟರೆ ನಮ್ಮ ವ್ಯಕ್ತಿತ್ವ ಹಾಳಾಗುತ್ತದೆ ಎಂದಿದ್ದಾರೆ. ಇನ್ನು ಶೋಭಾ, ಅಶೋಕ್‌ಗೆ ಬೇಕಿರೋದು ಸಾರ್ವಜನಿಕರ ಹಿತ, ಶಾಂತಿ ಅಲ್ಲ. ಇಬ್ಬರು ಸೇರಿ ಕೆರಗೋಡು ಗ್ರಾಮದಲ್ಲಿ ಶುರು ಮಾಡಿದರು. ಕೆ.ಆರ್.ಪೇಟೆಯಲ್ಲಿ, ಪಾಂಡವಪುರದಲ್ಲಿ ಪ್ರಯತ್ನ ಮಾಡಿದರು. ಅದ್ಯಾವುದು ಸಕ್ಸಸ್ ಆಗಲಿಲ್ಲ. ಈಗ ಮತ್ತೆ ನಾಗಮಂಗಲಕ್ಕೆ ಪದೇ ಪದೇ ಬರ್ತಿದ್ದಾರೆ. ಘರ್ಷಣೆಗೆ ಜೆಡಿಎಸ್‌ನ ಕೆಲವರು ಕುಮ್ಮಕ್ಕು ಕೊಡಲು ನಿಂತಿದ್ದಾರೆ. ನಮ್ಮ ಜಿಲ್ಲೆಯ ಜನ ಇದನ್ನ ಸಹಿಸಲ್ಲ ಎಂದಿದ್ದಾರೆ.

Tags: BJPcommunal tension in nagamangalaCongress PartyNAGAMANGALAnagamangala ganesh newsnagamangala ganeshanagamangala ganesha processionnagamangala ganesha procession violencenagamangala incidentnagamangala latest newsnagamangala newsnagamangala news todaynagamangala news today livenagamangala riot casenagamangala riotsnagamangala today newsnagamangala violencenelamangala news today livestone pelting during nagamangala ganesha processionಎಚ್ ಡಿ ಕುಮಾರಸ್ವಾಮಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ರಾಷ್ಟ್ರೀಯ ಬಾಡ್ಮಿಂಟನ್ ಕೊಡಗಿನ ದಿಯಾ ಭೀಮಯ್ಯಗೆ ಪ್ರಥಮ ಸ್ಥಾನ.

Next Post

ಮುನಿರತ್ನ ವಿರುದ್ಧ ರೇ** ಕೇಸ್‌ ಬಗ್ಗೆ ಸುರೇಶ್‌ ಹೇಳಿದ್ದೇನು.!

Related Posts

ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ
ಕರ್ನಾಟಕ

ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ

by ಪ್ರತಿಧ್ವನಿ
April 14, 2026
0

ವಿಜಯಪುರ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಳವಾಗುತ್ತಿರುವ ನಡುವೆ, ಒಂದೇ ದಿನದಲ್ಲಿ ಎರಡು ಭೀಕರ ಘಟನೆಗಳು ಬೆಳಕಿಗೆ ಬಂದಿವೆ. ಜಿಲ್ಲೆಯ ಹೊರವಲಯದ ಅಲಿಯಾಬಾದ್ ಬಳಿ ಗುಂಡಿನ ಸದ್ದು ಕೇಳಿಸಿಕೊಂಡಿದ್ದು,...

Read moreDetails
ಸಿದ್ದರಾಮಯ್ಯ ಲವ್ ಸ್ಟೋರಿ ಮರುಚರ್ಚೆ: ‘ಭಾಗ್ಯ’ ಯೋಜನೆಗಳ ಅರ್ಥ ಏನು? ಸಿಎಂ ಸ್ಪಷ್ಟನೆ

ಸಿದ್ದರಾಮಯ್ಯ ಲವ್ ಸ್ಟೋರಿ ಮರುಚರ್ಚೆ: ‘ಭಾಗ್ಯ’ ಯೋಜನೆಗಳ ಅರ್ಥ ಏನು? ಸಿಎಂ ಸ್ಪಷ್ಟನೆ

April 14, 2026
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
Next Post

ಮುನಿರತ್ನ ವಿರುದ್ಧ ರೇ** ಕೇಸ್‌ ಬಗ್ಗೆ ಸುರೇಶ್‌ ಹೇಳಿದ್ದೇನು.!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada