• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, November 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪಶ್ಚಿಮ ಘಟ್ಟದ ಹೊಸ ವಿದ್ಯುದ್ದೀಕೃತ ರೈಲು ಮಾರ್ಗಕ್ಕೆ ಶಕ್ತಿ ತುಂಬಿದ KPTCL : ಸಚಿವ ಕೆ.ಜೆ. ಜಾರ್ಜ್

Shivakumar by Shivakumar
November 12, 2026
in Top Story, ಕರ್ನಾಟಕ
0
KPTCL powers the new electrified railway line in the Western Ghats: Minister K.J. George
Share on WhatsAppShare on FacebookShare on Telegram

ಬೆಂಗಳೂರು : ಪಶ್ಚಿಮ ಘಟ್ಟದ (Western Ghats) ಅತ್ಯಂತ ಸವಾಲಿನ ಸಕಲೇಶಪುರ–ಸುಬ್ರಹ್ಮಣ್ಯ ರೋಡ್ ಹೊಸ ವಿದ್ಯುದ್ದೀಕೃತ ರೈಲು ಮಾರ್ಗದಲ್ಲಿ (Newly Electrified Railway Line) ವಿದ್ಯುತ್ ರೈಲುಗಳ ಸಂಚಾರಕ್ಕೆ ಅಗತ್ಯವಾದ ವಿಶ್ವಾಸಾರ್ಹ ಟ್ರ್ಯಾಕ್ಷನ್ ಪವರ್ (Traction Power) ಒದಗಿಸಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು (KPTCL) ಬಲಿಷ್ಠ ಪ್ರಸರಣ ಮೂಲಸೌಕರ್ಯವನ್ನು (Transmission Infrastructure) ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ (K.J. George) ತಿಳಿಸಿದ್ದಾರೆ.

ADVERTISEMENT

ವಂದೇ ಭಾರತ್ ರೈಲು ಸಂಚಾರಕ್ಕೆ ಮುಕ್ತ ಹಾದಿ

ನವೆಂಬರ್ 13ರಂದು ಆರಂಭವಾಗಲಿರುವ ಯಶವಂತಪುರ–ಮಂಗಳೂರು–ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಯೊಂದಿಗೆ, ಈ ಮಾರ್ಗದಲ್ಲಿ ಇದೇ ಮೊದಲ ಬಾರಿಗೆ ವಂದೇ ಭಾರತ್ ವಿದ್ಯುತ್ ರೈಲು ಸಂಚರಿಸಲಿದೆ. ಈ ಮಹತ್ವಾಕಾಂಕ್ಷಿ ಯೋಜನೆಗೆ ಅಗತ್ಯವಾದ ವಿದ್ಯುತ್ ಮೂಲಸೌಕರ್ಯ ಕಾಮಗಾರಿಗಳು ನಿಗದಿತ ಸಮಯಕ್ಕೆ ಪೂರ್ಣಗೊಳ್ಳುವಂತೆ ಸಚಿವ ಕೆ.ಜೆ. ಜಾರ್ಜ್ ಅವರು ಸರಣಿ ಸಭೆಗಳನ್ನು ನಡೆಸಿ, ಕೆಪಿಟಿಸಿಎಲ್ ಮತ್ತು ರೈಲ್ವೆ ಅಧಿಕಾರಿಗಳ ನಡುವೆ ತ್ವರಿತ ಸಮನ್ವಯಕ್ಕೆ ವೇದಿಕೆ ಕಲ್ಪಿಸಿದ್ದರು. ಅವರ ಮಾರ್ಗದರ್ಶನದಲ್ಲಿ ಪ್ರಸರಣ ಜಾಲ ಬಲವರ್ಧನೆ ಹಾಗೂ ಉಪಕೇಂದ್ರಗಳ ಸಾಮರ್ಥ್ಯ ವೃದ್ಧಿ ಕಾಮಗಾರಿಗಳಿಗೆ ವೇಗ ನೀಡಿ ಹಂತ ಹಂತವಾಗಿ ಯೋಜನೆ ಪೂರ್ಣಗೊಳಿಸಲಾಗಿದೆ.

ದುರ್ಗಮ ಪ್ರದೇಶದಲ್ಲಿ ಸವಾಲು ಮೆಟ್ಟಿ ನಿಂತ ತಾಂತ್ರಿಕ ಪಡೆ

ಪಶ್ಚಿಮ ಘಟ್ಟದ ಕಡಿದಾದ ಬೆಟ್ಟಗಳು, ತೀವ್ರ ಏರಿಳಿತ, ಭಾರಿ ಮಳೆ ಹಾಗೂ ಸಂಕೀರ್ಣ ಭೌಗೋಳಿಕ ಪರಿಸ್ಥಿತಿಯ ನಡುವೆಯೂ ಕೆಪಿಟಿಸಿಎಲ್ ಇಂಜಿನಿಯರ್‌ಗಳು ಮತ್ತು ಸಿಬ್ಬಂದಿ ಹಗಲು-ರಾತ್ರಿ ಶ್ರಮಿಸಿದ್ದಾರೆ. ಮಾರ್ಗದ ಉದ್ದಕ್ಕೂ ಬರುವ 12 ರೈಲ್ವೆ ಟ್ರಾಕ್ಷನ್ ಸಬ್‌ಸ್ಟೇಷನ್‌ಗಳಿಗೆ (RTSS) ಕೆಪಿಟಿಸಿಎಲ್‌ನ 12 ಉಪಕೇಂದ್ರಗಳಿಂದ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇದಕ್ಕಾಗಿ ಸಿದ್ದಾಪುರಕ್ಕೆ 4.5 ಕಿ.ಮೀ. 66 ಕೆವಿ ಪ್ರಸರಣ ಮಾರ್ಗ, ಸಕಲೇಶಪುರ ಕೇಂದ್ರಕ್ಕೆ 220 ಕೆವಿ ಭೂಗತ ಮತ್ತು ಮೇಲ್ಸೇತುವೆ ಸಂಪರ್ಕ, ನೆರಳಕಟ್ಟೆಗೆ 2.76 ಕಿ.ಮೀ. ಉದ್ದದ 220 ಕೆವಿ ಭೂಗತ ಕೇಬಲ್ ಅಳವಡಿಕೆ ಸೇರಿದಂತೆ ಹಲವು ಕ್ಲಿಷ್ಟಕರ ಕಾಮಗಾರಿಗಳನ್ನು ಯಶಸ್ವಿಯಾಗಿ ಮುಗಿಸಲಾಗಿದೆ. ಜೊತೆಗೆ, ಜೋಕಟ್ಟೆ, ಮುಲ್ಕಿ, ಬಾರ್ಕೂರು ಮತ್ತು ಸೇನಾಪುರದಲ್ಲಿ ಅಗತ್ಯ ಪ್ರಸರಣ ಮೂಲಸೌಕರ್ಯ, ಅಂಚೆಪಾಳ್ಯ ಹಾಗೂ ಯಾಚೇನಹಳ್ಳಿ ಉಪಕೇಂದ್ರಗಳಲ್ಲಿ ಟ್ರಾನ್ಸ್‌ಫಾರ್ಮರ್ ಸಾಮರ್ಥ್ಯ ವೃದ್ಧಿ ಹಾಗೂ ಮುರುಡೇಶ್ವರ, ಕುಮಟಾ ಮತ್ತು ಕಾರವಾರ ಕೇಂದ್ರಗಳಿಗೆ ಹಾಲಿ ಜಾಲದಿಂದಲೇ ವಿದ್ಯುತ್ ಒದಗಿಸುವ ವ್ಯವಸ್ಥೆ ಮಾಡಲಾಗಿದೆ.

ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ಇಂಬು

ಕರಾವಳಿ ಮತ್ತು ಬೆಂಗಳೂರು ನಡುವಿನ ಈ ಹೊಸ ರೈಲು ಸಂಪರ್ಕ ಕೇವಲ ಪ್ರಯಾಣವನ್ನು ಸುಗಮಗೊಳಿಸುವುದಲ್ಲದೆ, ಮಂಗಳೂರು, ಉಡುಪಿ, ಮುರುಡೇಶ್ವರ, ಗೋಕರ್ಣ ಸೇರಿದಂತೆ ಆ ಭಾಗದ ಪ್ರವಾಸೋದ್ಯಮ, ಆತಿಥ್ಯ ಹಾಗೂ ಸ್ಥಳೀಯ ಆರ್ಥಿಕತೆಗೆ ಹೊಸ ವೇಗ ನೀಡಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದುರ್ಗಮ ಪ್ರದೇಶದಲ್ಲಿ ತಾಂತ್ರಿಕ ಸವಾಲುಗಳನ್ನು ಮೀರಿ ಈ ಸಾಧನೆ ಮಾಡಿದ ಸಿಬ್ಬಂದಿಯ ಬದ್ಧತೆ ಹಾಗೂ ಕಾರ್ಯವೈಖರಿಯನ್ನು ಅವರು ಶ್ಲಾಘಿಸಿದ್ದಾರೆ.

Priyank Kharge : ಮೋದಿ ಬಗ್ಗೆ ಹೇಳಿ ಬಿಜೆಪಿ ನಾಯಕರಿಗೆ ಖರ್ಗೆ ಟಾಂಗ್‌..! #bjp #mla #pratidhvani

ನಿರಂತರ ನಿಗಾ ಹಾಗೂ ತುರ್ತು ಸ್ಪಂದನಾ ವ್ಯವಸ್ಥೆ

ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ವಿಶೇಷ ಸಿದ್ಧತಾ ಪರಿಶೀಲನೆ ನಡೆಸಿದೆ. ವಂದೇ ಭಾರತ್ ಸಂಚಾರದ ಹಿನ್ನೆಲೆಯಲ್ಲಿ ಪ್ರಮುಖ ಉಪಕೇಂದ್ರಗಳು ಮತ್ತು ಸಂಪರ್ಕ ಕೇಂದ್ರಗಳಲ್ಲಿ ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಿ ದಿನದ 24 ಗಂಟೆಯೂ ಮೇಲ್ವಿಚಾರಣೆ ಹಾಗೂ ತುರ್ತು ಸ್ಪಂದನಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕಠಿಣ ಸವಾಲುಗಳನ್ನು ಎದುರಿಸಿ 12 ರೈಲ್ವೆ ಟ್ರಾಕ್ಷನ್ ಕೇಂದ್ರಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ ಇಂಜಿನಿಯರ್‌ಗಳು ಹಾಗೂ ಸಿಬ್ಬಂದಿಯ ಪರಿಶ್ರಮ ಕರ್ನಾಟಕದ ರೈಲು ಸಂಪರ್ಕ ಜಾಲದ ಇತಿಹಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಕೆಲವು ದೇಶಗಳಲ್ಲಿ ಶೇ.80 ಎಥೆನಾಲ್ ಬಳಕೆ: ಮಿಶ್ರಣ ನೀತಿ ಸಮರ್ಥಿಸಿಕೊಂಡ ಆರ್. ಅಶೋಕ್; ವಾಹನಗಳ ಹೊಂದಾಣಿಕೆ ಬಗ್ಗೆ ನೆಟ್ಟಿಗರ ಪ್ರಶ್ನೆ

 

Tags: k.j. georgeNewly Electrified Railway LineWestern Ghats
Previous Post

ಕೆಲವು ದೇಶಗಳಲ್ಲಿ ಶೇ.80 ಎಥೆನಾಲ್ ಬಳಕೆ: ಮಿಶ್ರಣ ನೀತಿ ಸಮರ್ಥಿಸಿಕೊಂಡ ಆರ್. ಅಶೋಕ್; ವಾಹನಗಳ ಹೊಂದಾಣಿಕೆ ಬಗ್ಗೆ ನೆಟ್ಟಿಗರ ಪ್ರಶ್ನೆ

Next Post

KPSC ಪರೀಕ್ಷೆಗೆ ಚುನಾವಣೆ ಮಾದರಿಯ ಬಿಗಿ ಭದ್ರತೆ: ಅಕ್ರಮಗಳಿಗೆ ಬ್ರೇಕ್ ಹಾಕಲು ಸಿಎಂ ಖಡಕ್ ಸೂಚನೆ

Related Posts

ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕಿದ ವಿದ್ಯಾರ್ಥಿಗಳಿಗೆ ಶಾಕ್! ಮನೆ ಮಾಲಕರು ವಿಧಿಸಿದ ಷರತ್ತುಗಳೇನು?
ಕರ್ನಾಟಕ

ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕಿದ ವಿದ್ಯಾರ್ಥಿಗಳಿಗೆ ಶಾಕ್! ಮನೆ ಮಾಲಕರು ವಿಧಿಸಿದ ಷರತ್ತುಗಳೇನು?

by Shivakumar
November 12, 2026
0

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುವುದು ದಿನದಿಂದ ದಿನಕ್ಕೆ ಸವಾಲಿನ ಕೆಲಸವಾಗುತ್ತಿದೆ. ಅದರಲ್ಲೂ ವಿದ್ಯಾರ್ಥಿಗಳು ಮತ್ತು ಉದ್ಯೋಗಕ್ಕಾಗಿ ನಗರಕ್ಕೆ ಬರುವವರಿಗೆ ಮನೆ ಬಾಡಿಗೆ, ಮುಂಗಡ ಹಣ...

Read moreDetails
ನಾರಾಯಣ ಮೂರ್ತಿಯ ಉದ್ಯೋಗ ಅರ್ಜಿ ತಿರಸ್ಕರಿಸಿದ್ದರೇ ಅಜೀಂ ಪ್ರೇಮ್‌ಜಿ? ವರ್ಷಗಳ ಬಳಿಕ ಹೊರಬಿತ್ತು ಅಚ್ಚರಿಯ ಸತ್ಯ!

ನಾರಾಯಣ ಮೂರ್ತಿಯ ಉದ್ಯೋಗ ಅರ್ಜಿ ತಿರಸ್ಕರಿಸಿದ್ದರೇ ಅಜೀಂ ಪ್ರೇಮ್‌ಜಿ? ವರ್ಷಗಳ ಬಳಿಕ ಹೊರಬಿತ್ತು ಅಚ್ಚರಿಯ ಸತ್ಯ!

November 12, 2026
MDR charges for UPI payments above Rs 2,000: Final decision likely by November 15

2,000 ರೂ. ಮೇಲ್ಪಟ್ಟ ಯುಪಿಐ ಪಾವತಿಗಳಿಗೆ ಎಂಡಿಆರ್ ಶುಲ್ಕ: ನ.15ರೊಳಗೆ ಅಂತಿಮ ನಿರ್ಧಾರ ಸಾಧ್ಯತೆ

November 12, 2026
Priority given to technology-based security measures to enhance the credibility of public examinations: Minister Priyank Kharge

ಸಾರ್ವಜನಿಕ ಪರೀಕ್ಷೆಗಳ ವಿಶ್ವಾಸಾರ್ಹತೆ ಹೆಚ್ಚಿಸಲು ತಂತ್ರಜ್ಞಾನ ಆಧಾರಿತ ಸುರಕ್ಷತಾ ಕ್ರಮಗಳಿಗೆ ಆದ್ಯತೆ: ಸಚಿವ ಪ್ರಿಯಾಂಕ್ ಖರ್ಗೆ

November 12, 2026
Dereliction of duty in land forgery case: Athani PSI Girimallappa Uppara suspended

ಜಮೀನು ಫೋರ್ಜರಿ ಪ್ರಕರಣದಲ್ಲಿ ಕರ್ತವ್ಯ ಲೋಪ: ಅಥಣಿ ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ ಅಮಾನತು

November 12, 2026
Next Post
Strict, election-style security for KPSC exams: CM issues stern directive

KPSC ಪರೀಕ್ಷೆಗೆ ಚುನಾವಣೆ ಮಾದರಿಯ ಬಿಗಿ ಭದ್ರತೆ: ಅಕ್ರಮಗಳಿಗೆ ಬ್ರೇಕ್ ಹಾಕಲು ಸಿಎಂ ಖಡಕ್ ಸೂಚನೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada