ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಪರವಾಗಿ ಇಂದು ದಿಬ್ಬೂರಹಳ್ಳಿಯಲ್ಲಿ ಅಭಿನಯಚಕ್ರವರ್ತಿ ಕಿಚ್ಚ ಸುದೀಪ್ ಭರ್ಜರಿ ಮತಬೇಟೆ ನಡೆಸಿದ್ದಾರೆ.
ದಿಬ್ಬೂರಹಳ್ಳಿಯಿಂದ ಶಿಡ್ಲಘಟ್ಟದ ಕಡೆ ಹೊರಟ ನಟ ಸುದೀಪ್ಗೆ ಕೋಲಾರ ಸಂಸದ ಮುನಿಸ್ವಾಮಿ, ಮಾಜಿ ಶಾಸಕ ರಾಜಣ್ಣ, ನಿರ್ದೇಶಕ ಆರ್ ಚಂದ್ರು ಸೇರಿದಂತೆ ಅನೇಕರು ಸಾಥ್ ನೀಡಿದ್ರು.
ಇನ್ನು ಕ್ಯಾಂಪೇನ್ನಲ್ಲಿ ಮಾತನಾಡಿದ ನಟ ಕಿಚ್ಚ ಸುದೀಪ, ಸೀಕಲ್ ರಾಮಚಂದ್ರ ನನಗೆ ಹಳೆಯ ಪರಿಚಯ . ವಿದ್ಯಾವಂತರು, ಬುದ್ಧಿವಂತರು, ಉದ್ಯಮಿಗಳು ಕೂಡ, ಗೌಡ್ರು ರಾಜಕಾರಣಕ್ಕೆ ಬಂದಿರೋದು ಹಣ ಮಾಡೋಕೆ ಅಲ್ಲ. ಅವರು ದುಡ್ಡಿರೋ ಮನುಷ್ಯ. ಸೇವೆ ಮಾಡೋಕೆ ಬಂದಿದ್ದಾರೆ. ಅವರಿಗೊಂದು ಅವಕಾಶ ಕೊಡಿ . ಬಿಜೆಪಿಗೆ ನಿಮ್ಮ ಮತ ನೀಡಿ ಬೆಂಬಲಿಸಿ ಎಂದಿದ್ದಾರೆ.