ರಾಕಿಂಗ್ ಸ್ಟಾರ್ ಯಶ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನ ಕೆಜಿಎಫ್ 2 ಸೃಷ್ಟಿಸಿದ ಸಂಚಲನ ಕರಗುವ ಮುನ್ನವೇ ನಿರ್ಮಾಪಕ ವಿಜಯ್ ಕಿರಗಂದೂರು ಕೆಜಿಎಫ್-3 ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ.
ಕೆಜಿಎಫ್-2 ಬಿಡುಗಡೆ ಆಗಿ ಬರೋಬ್ಬರಿ 1 ತಿಂಗಳು ಪೂರೈಸಿದ್ದು, 1200 ಕೋಟಿ ರೂ. ಬಾಚಿಕೊಂಡರು ಭಾರತೀಯ ಚಿತ್ರರಂಗದಲ್ಲೇ ಹೊಸ ಅಲೆ ಎಬ್ಬಿಸಿದೆ.
ನಿರ್ದೇಶಕ ಪ್ರಶಾಂತ್ ನೀಲ್ ಇನ್ನೂ ಎರಡು ಚಿತ್ರಗಳನ್ನು ಒಪ್ಪಿಕೊಂಡಿರುವ ಕಾರಣಕ್ಕಾಗಿ ಕೆಜಿಎಫ್ 3 ಸಿನಿಮಾವನ್ನು ಕೂಡಲೇ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎನ್ನಲಾಗುತ್ತಿತ್ತು. ಆದರೆ ಎಲ್ಲವೂ ಅಂದುಕೊಂಡಂತೆ ಆದರೆ ಅಕ್ಟೋಬರ್ ನಲ್ಲಿ ಕೆಜಿಎಫ್-2 ಶೂಟಿಂಗ್ ಆರಂಭಗೊಳ್ಳುವ ಸಾಧ್ಯತೆ ಇದೆ.

ಮಾಧ್ಯಮದೊಂದಿಗೆ ಮಾತನಾಡಿದ ನಿರ್ಮಾಪಕ ವಿಜಯ್ ಕಿರಗಂದೂರು, ಅಕ್ಟೋಬರ್ ಒಳಗೆ ಸಲಾರ್ ಸಿನಿಮಾದ ಶೂಟಿಂಗ್ ಮುಗಿಸುವ ತೀರ್ಮಾನ ಮಾಡಿದ್ದೇವೆ. ಅಂದುಕೊಂಡಂತೆ ಆ ಸಿನಿಮಾದ ಕೆಲಸ ಮುಗಿದರೆ, ಅಕ್ಟೋಬರ್ ನಿಂದಲೇ ಕೆಜಿಎಫ್ 3 ಕೆಲಸ ಆರಂಭಿಸಲಿದ್ದೇವೆ ಎಂದು ಹೇಳಿದ್ದಾರೆ.
ಕೆಜಿಎಫ್ 2 ಸಿನಿಮಾದಲ್ಲಿ ನಾಯಕ ಬದುಕಿದನಾ ಅಥವಾ ಸತ್ತನಾ ಎನ್ನುವುದು ಅಸ್ಪಷ್ಟ. ಹಾಗಾಗಿ ಯಶ್ ಅವರೇ ಈ ಸಿನಿಮಾದ ನಾಯಕ ಆಗುತ್ತಾರಾ? ಅಥವಾ ಕೆಜಿಎಫ್ 3 ನಲ್ಲಿ ಬೇರೆ ನಾಯಕ ಇರಲಿದ್ದಾರೆ ಎಂಬ ಪ್ರಶ್ನೆಗೆ, ಸ್ಪೈಡರ್ ಮ್ಯಾನ್, ಹೋಮ್ ಕಮಿಂಗ್ ರೀತಿಯಲ್ಲಿ ಪಾತ್ರಗಳನ್ನು ಬದಲಾಯಿಸಿದರೆ, ಇನ್ನೂ ಹೆಚ್ಚಿನ ಸಂಖ್ಯೆಯ ಜನರಿಗೆ ಸಿನಿಮಾವನ್ನು ತಲುಪಿಸಬಹುದು’ ಎಂದು ಉತ್ತರಿಸುವ ಮೂಲಕ ವಿಜಯ್ ಕಿರಗಂದೂರು ಅಚ್ಚರಿ ಮೂಡಿಸಿದ್ದಾರೆ.