ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಮಾಡಿದ್ದ 40 ಪರ್ಸೆಂಟ್ ಕಮಿಷನ್ ಆರೋಪ ಕುರಿತಾದ ದಾಖಲೆಗಳನ್ನು ಇಂದು ನಾಗಮೋಹನ್ ದಾಸ್ ಸಮಿತಿಗೆ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಕೆಂಪಣ್ಣ, ಹಾಲಿ ಕಾಂಗ್ರೆಸ್ ಸರ್ಕಾರದಲ್ಲೂ ಭ್ರಷ್ಟಾಚಾರ ನಡೆಯುತ್ತಿದ್ದು ಆ ಬಗ್ಗೆಯೂ ಸಮಿತಿಗೆ ದಾಖಲೆಗಳನ್ನು ಒದಗಿಸಿರುವುದಾಗಿ ಮಾಹಿತಿ ನೀಡಿದ್ದಾರೆ.ಇನ್ನು ೪೦ ಪರ್ಸೆಂಟ್ ಸರ್ಕಾರದ ವಿರುದ್ಧದ ತಮ್ಮ ಆರೋಪಕ್ಕೆ ಸಂಬಂಧಿಸಿದಂತೆ ಸುಮಾರು ೮೦೦೦ ಪುಟಗಳ ದಾಖಲೆ ಗಳನ್ನು ಸಲ್ಲಿಸಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ಆಡಳಿತಾವಧಿಯಲ್ಲಿನ ಭ್ರಷ್ಟಾಚಾರ, ಕಮಿಷನ್ ದಂಧೆ, ಬಿಲ್ ಗೋಲ್ ಮಾಲ್‌ಗೆ ಸಂಬಂಧಿಸಿದ ಆಡಿಯೊ, ವಿಡಿಯೊ ತುಣುಕುಗಳೂ ಸೇರಿದಂತೆ ಜಿಲ್ಲಾವಾರು ದಾಖಲೆಗಳನ್ನು ಕೆಂಪಣ್ಣ ಸಲ್ಲಿಸಿದ್ದಾರೆ.