ಕಟ್ಟಡವೊಂದರ ಮೇಲೆ ನಿರ್ಮಿಸಲಾಗಿದ್ದ ಮೊಬೈಲ್ ಟವರ್ ಏಕಾಏಕಿ ಧರೆಗುರುಳಿದ ಘಟನೆ ಬೆಂಗಳೂರಿನ ಲಗ್ಗೆರೆಯಲ್ಲಿ ನಡೆದಿದೆ.
ಇಲ್ಲಿನ ಪಾರ್ವತಿನಗರದ ಮನೆಯೊಂದರ ಮೇಲೆ ಅಳವಡಿಸಲಾಗಿದ್ದ ಬೃಹದಾಕಾರದ ಮೊಬೈಲ್ ಟವರ್ ಇದ್ದ ಕಟ್ಟಡದ ಪಕ್ಕದಲ್ಲಿನ ಹಳೆಯ ಮನೆಯನ್ನು ಕೆಡವುತ್ತಿದ್ದಾಗ ಮೊಬೈಲ್ ಟವರ್ ಧರೆಗುರುಳಿದೆ.
ಇನ್ನು ಈ ಮೊಬೈಲ್ ಟವರ್ ಬೀಳುವ ಮುನ್ಸೂಚನೆ ಇದ್ದ ಕಾರಣ ಕಟ್ಟಡದಲ್ಲಿ ವಾಸವಿದ್ದ 11 ಜನರು ಅಲ್ಲಿಂದ ಹೊರಕ್ಕೆ ಬಂದಿದ್ದರು. ಇದಾದ ಕೆಲವೇ ನಿಮಿಷಗಳಲ್ಲಿ ಕಟ್ಟಡದ ಸಮೇತವಾಗಿ ಟವರ್ ಕುಸಿದು ಬಿದ್ದಿದೆ. ಪರಿಣಾಮ ಕಟ್ಟಡದ ಸಮೀಪದ ೨ ಅಂಗಡಿಗಳಿಗೆ ಹಾನಿಯಾಗಿದೆ.






