ಕಾಟೇರ ಚಿತ್ರ ಯಶಸ್ವಿ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ರಾಕ್ ಲೈನ್ ಮಾಲ್ನಲ್ಲಿ ಕಾಟೇರ ಚಿತ್ರತಂಡ ಸುದ್ದಿಗೋಷ್ಠಿ ಆಯೋಜನೆ ಮಾಡಿತ್ತು. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟ ದರ್ಶನ್, ನಿರ್ದೇಶಕ ತರುಣ್ ಸುಧೀರ್, ಡೈಲಾಗ್ ರೈಟರ್ ಮಾಸ್ತಿ, ಕಥೆಗಾರ ಜಡೇಶ್ ಕೆ ಹಂಪಿ ಭಾಗಿಯಾಗಿದ್ದರು.
ಈ ವರ್ಷದ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಕಾಟೇರ ಪಾಲಾಗಿದ್ದು, ನಟ ದರ್ಶನ್ ನಟನೆಯ ಕಾಟೇರ ಬಾಕ್ಸ್ ಆಫೀಸ್ ರೂಲ್ ಮಾಡಿದೆ. ನೂರು ದಿನ ಪೂರೈಸಿದ ಸಂಭ್ರಮದಲ್ಲಿ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಕಾಟೇರ ಚಿತ್ರದ ಗೆಲುವಿಗೆ ಕಾರಣವಾದ ತಂತ್ರಜ್ಞರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಚಿತ್ರದ ಕತೆಗಾರ ಜಡೇಶ್ ಹಂಪಿ, ಸಂಭಾಷಣೆಗಾರ ಮಾಸ್ತಿ, ನಟ ಸೂರಜ್ಗೆ ಕಾರು ಗಿಫ್ಟ್ ಮಾಡಿದ್ದಾರೆ.
ಕಾಟೇರ 2 ಬರುತ್ತಾ ಅನ್ನೋ ಪ್ರಶ್ನೆಗೆ ನಟ ದರ್ಶನ್ ಪ್ರತಿಕ್ರಿಯೆ ನೀಡಿದ್ದು, ನಾನು ಯಾವುದೇ ಕಾರಣಕ್ಕೂ ಸೀಕ್ವೆಲ್ ಸಿನಿಮಾಗಳನ್ನು ಮಾಡಲ್ಲ, ಕಾಟೇರ 2 ಬರೋದು ಬೇಡ ಅದು ಮಾಸ್ಟರ್ ಪೀಸ್ ಎಂದಿದ್ದಾರೆ. ಗೆದ್ದ ಎತ್ತಿನ ಬಾಲ ಹಿಡಿಯೋದು ನನಗೆ ಇಷ್ಟ ಇಲ್ಲ ಎಂದಿದ್ದಾರೆ. ನಮ್ಮ ಟೀಂ ಮುಂದಿನ ದಿನಗಳಲ್ಲಿ ಬೇರೆ ಸಿನಿಮಾ ಮಾಡ್ತೀವಿ ಅಂತಾ ಇದೇ ವೇಳೆ ಭರವಸೆ ನೀಡಿದ್ದಾರೆ.