• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, August 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ವಿದ್ಯಾರ್ಥಿಯನ್ನು ಕೊಂದಿದ್ದು ಯಾರು..? ಪೊಲೀಸರ ಅನುಮಾನ ಏನು..?

Krishna Mani by Krishna Mani
May 17, 2024
in Top Story, ಇದೀಗ
0
ವಿದ್ಯಾರ್ಥಿಯನ್ನು ಕೊಂದಿದ್ದು ಯಾರು..? ಪೊಲೀಸರ ಅನುಮಾನ ಏನು..?
Share on WhatsAppShare on FacebookShare on Telegram

ಬೆಂಗಳೂರಿನ ಬಿಎಂಎಸ್ ಮಹಿಳಾ‌ ಕಾಲೇಜಿನಲ್ಲಿ ಎರಡನೇ ವರ್ಷದ ಬಿಬಿಎ ಓದುತ್ತಿದ್ದ ಪ್ರಭುದ್ಯಾ ಎಂಬಾಕೆ ಸಾವಾಗಿದ್ದು, ಮನೆಯ ಬಾತ್ ರೂಮ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಸುಬ್ರಮಣ್ಯಪುರದ ಬೃಂದಾವನ ಲೇಔಟ್‌ನಲ್ಲಿ ಸಹೋದರ ಹಾಗು ತಾಯಿ ಜೊತೆಗೆ ವಾಸವಾಗಿದ್ದ ಪ್ರಭುದ್ಯಾ ಮಧ್ಯಾಹ್ನ 3.30ರ ಸುಮಾರಿಗೆ ಸ್ನೇಹಿತರ ಜೊತೆಗೆ ಹೋಗಿ ಪಾನಿಪೂರಿ ತಿಂದುಕೊಂಡು ಬಂದಿದ್ದಾಳೆ. ಈ ಬಗ್ಗೆ ತನ್ನ ತಾಯಿಗೆ ಮಾಹಿತಿ ಕೊಟ್ಟಿರುವ ಪ್ರಭುದ್ಯಾ, ಆ ಬಳಿಕ ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಳಾ ಅನ್ನೋ ಅನುಮಾನ ಕಾಡುತ್ತಿದೆ.

ADVERTISEMENT

ಕೇವಲ 21 ವರ್ಷದ ಪ್ರಭುದ್ಯಾ ಎಡಗೈ ಮೇಲೆ ಹಾಗು ಕುತ್ತಿಗೆ ಬಲ ಭಾಗದಲ್ಲಿ ಹರಿತವಾದ ಆಯುಧದಿಂದ ಕೊಯ್ದಿರುವ ಗುರುತು ಪತ್ತೆಯಾಗಿದೆ. ತೀವ್ರ ರಕ್ತಸ್ರಾವದಿಂದ ಪ್ರಭುದ್ಯಾ ಸಾವನ್ನಪ್ಪಿದ್ದಾಳೆ. ಆದರೆ ಕೊಲೆಯೋ..? ಆತ್ಮಹತ್ಯೆಯೋ ಅನ್ನೋ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ ಮನೆಯಲ್ಲಿ ಮೂರು ಡೆತ್‌‌ ನೋಟ್‌ ಪತ್ತೆಯಾಗಿದ್ದು, ಅದರಲ್ಲಿ ಅಮ್ಮಾ ಸಾರಿ ಎಂದು ಬರೆಯಲಾಗಿದೆ ಎನ್ನಲಾಗಿದೆ. ಆದರೆ ಪ್ರಭುದ್ಯಾ ಹಸ್ತಾಕ್ಷರಕ್ಕೂ ಡೆತ್‌ನೋಟ್‌ ಹಸ್ತಾಕ್ಷರಕ್ಕೂ ತಾಳೆ ಆಗ್ತಿಲ್ಲ ಅನ್ನೋ ಮಾಹಿತಿ ಕೂಡ ಇದೆ. ಹಾಗಿದ್ದರೆ ಕೊಂದಿದ್ದು ಯಾರು..?

ಮನೆಯಲ್ಲಿ ಪ್ರಭುದ್ಯಾ ಹಾಗು ಆಕೆಯ ಸಹೋದರ ಇಬ್ಬರೂ ಇದ್ದರು. ಆದರೆ ಸಂಜೆ 4:30ರ ಸುಮಾರಿಗೆ ಪ್ರಭುದ್ಯಾ ಸಹೋದರ ಜಿಮ್‌ಗೆ ಹೋಗಿದ್ದಾನೆ. ಆ ಬಳಿಕ ಸಂಜೆ 7.30ಕ್ಕೆ ತಾಯಿ ಮನೆಗೆ ಬಂದಾಗ ಮಗಳು ಸತ್ತು ಬಿದ್ದಿರುವುದು ಗೊತ್ತಾಗಿದೆ. ಮನೆಯ ಹಿಂದಿನ ಡೋರ್ ಓಪನ್ ಆಗಿದ್ದು, ಕೊಲೆ ನಡೆದಿದೆ ಎನ್ನುವುದಕ್ಕೆ ಪ್ರಮುಖ ಕಾರಣವಾಗಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿಸಿ ಮೃತದೇಹ ಹಸ್ತಾಂತರ ಮಾಡಲಾಗಿದೆ.

ಕನಕಪುರ ಮೂಲಕ ಪ್ರಭುದ್ಯಾ ಕುಟುಂಬ ಬೆಂಗಳೂರಿನಲ್ಲೇ ವಾಸವಾಗಿತ್ತು. ಕೌಟುಂಬಿಕ ಕಲಹದಿಂದ ತಂದೆ ಕುಟುಂಬದಿಂದ ದೂರವಾಗಿದ್ದರು ಎನ್ನಲಾಗಿದೆ. ತಾಯಿ ಸಾಮಾಜಿಕ ಕಾರ್ಯಕರ್ತೆಯಾಗಿಯೂ ಕೆಲಸ ಮಾಡ್ತಿದ್ರು ಎನ್ನಲಾಗಿದ್ದು, ಮೊಬೈಲ್‌ ವಶಕ್ಕೆ ಪಡೆದಿರುವ ಪೊಲೀಸ್ರು ತನಿಖೆ ನಡೆಸುತ್ತಿದ್ದಾರೆ. ತಮಗೆ ತಾವೇ ಕೊಯ್ದುಕೊಂಡರೆ ಅಷ್ಟೊಂದು ಆಳಕ್ಕೆ ಗಾಯ ಆಗುವುದಿಲ್ಲ ಎನ್ನುವುದು ಪೊಲೀಸರ ಅನುಮಾನಕ್ಕೂ ಕಾರಣವಾಗಿದೆ. ಇನ್ನು ಕೊಲೆ ಬಳಿಕ ಕೊಲೆಗಾರ ಡೆತ್‌ನೋಟ್‌ ಬರೆದಿಟ್ಟು ಹೋಗುವಷ್ಟು ತಾಳ್ಮೆ ಇತ್ತಾ..? ಪ್ರೀತಿ ಪ್ರೇಮ ವಿಚಾರದಲ್ಲಿ ಗೊತ್ತಿದ್ದವನೇ ಕೊಲೆ ಮಾಡಿರುವ ಸಾಧ್ಯತೆ ಇದೆಯಾ ಅನ್ನೋ ಬಗ್ಗೆಯೂ ತನಿಖೆ ನಡೆಯುತ್ತಿದೆ.

Previous Post

15 ಕೆಜಿ ತುಪ್ಪ ಎಗರಿಸಿದ ಖದೀಮರು!

Next Post

ಪೊಲೀಸರ ಅತಿಥಿಯಾದ ಅಂಜಲಿ ಹಂತಕ; ಸಿಕ್ಕಿದ್ದು ಹೇಗೆ?

Related Posts

ಬೇರೆ ವಿಚಾರಗಳಲ್ಲಿ ನಿರರ್ಗಳತೆ..ರಾಮಮಂದಿರ ದೇಣಿಗೆ ಕೇಸ್‌ನಲ್ಲಿ ಮೋದಿ ಮೌನ ಯಾಕೆ..?
Top Story

ಪ್ರೇಕ್ಷಕರು ಬದಲಾದಾಗ ಭಾಷೆಯಲ್ಲೂ ಬದಲಾವಣೆ: ಮೋಹನ್ ಭಾಗವತ್ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ವ್ಯಂಗ್ಯ

by ಪ್ರತಿಧ್ವನಿ
August 30, 2026
0

ಬೆಂಗಳೂರು: ಅಮೆರಿಕದಲ್ಲಿ ಹಿಂದೂತ್ವ, ಮುಸ್ಲಿಮರು ಹಾಗೂ ‘ಹಿಂದೂ ರಾಷ್ಟ್ರ’ದ ಕುರಿತು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ನೀಡಿರುವ ಹೇಳಿಕೆಗೆ ತೀವ್ರ ಪ್ರತಿಕ್ರಿಯಿಸಿರುವ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್...

Read moreDetails
Kiccha Sudeep: ಸಂಕಷ್ಟದಲ್ಲಿದ್ದ ನಾಲ್ಕು ಕುಟುಂಬಗಳಿಗೆ ಉಚಿತ ಆಟೋ ರಿಕ್ಷಾ ವಿತರಿಸಿದ ಕಿಚ್ಚ ಸುದೀಪ್

Kiccha Sudeep: ಸಂಕಷ್ಟದಲ್ಲಿದ್ದ ನಾಲ್ಕು ಕುಟುಂಬಗಳಿಗೆ ಉಚಿತ ಆಟೋ ರಿಕ್ಷಾ ವಿತರಿಸಿದ ಕಿಚ್ಚ ಸುದೀಪ್

August 30, 2026
ಬಿ.ನಾಗೇಂದ್ರ ರಾಜೀನಾಮೆ ಅಂಗೀಕಾರ: ರಾಜ್ಯಪಾಲರಿಂದ ಅಧಿಕೃತ ಆದೇಶ

ಬಿ.ನಾಗೇಂದ್ರ ರಾಜೀನಾಮೆ ಅಂಗೀಕಾರ: ರಾಜ್ಯಪಾಲರಿಂದ ಅಧಿಕೃತ ಆದೇಶ

August 30, 2026
ದೇಶದಲ್ಲಿ ಮುಸ್ಲಿಮರು ಇರಬಾರದೆಂದು ಭಾವಿಸಿದ್ರೆ ಆತ ಹಿಂದೂ ಅಲ್ಲ: ಸಂಚಲನ ಮೂಡಿಸಿದ ಮೋಹನ್ ಭಾಗವತ್ ಹೇಳಿಕೆ

ದೇಶದಲ್ಲಿ ಮುಸ್ಲಿಮರು ಇರಬಾರದೆಂದು ಭಾವಿಸಿದ್ರೆ ಆತ ಹಿಂದೂ ಅಲ್ಲ: ಸಂಚಲನ ಮೂಡಿಸಿದ ಮೋಹನ್ ಭಾಗವತ್ ಹೇಳಿಕೆ

August 30, 2026
ಅಪರಾಧ ಪ್ರಕರಣಗಳ ಹಿಂಪಡೆಯುವಿಕೆ ಪರಿಶೀಲನೆಗೆ ಸಚಿವರ ಸಮಿತಿ ರಚನೆ

ಅಪರಾಧ ಪ್ರಕರಣಗಳ ಹಿಂಪಡೆಯುವಿಕೆ ಪರಿಶೀಲನೆಗೆ ಸಚಿವರ ಸಮಿತಿ ರಚನೆ

August 30, 2026
Next Post
ನೇಹ ಹತ್ಯೆ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಮತ್ತೊಂದು ಮರ್ಡರ್ ! ಅಂಜಲಿ ಎಂಬ ಯುವತಿಯ ಬರ್ಬರ ಹತ್ಯೆ !

ಪೊಲೀಸರ ಅತಿಥಿಯಾದ ಅಂಜಲಿ ಹಂತಕ; ಸಿಕ್ಕಿದ್ದು ಹೇಗೆ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada