• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬಿಹಾರಿ (Bihar) ಬಾಬು.. ಹಾಸನದ ಯುವತಿ.. ಲವ್‌, ಮ್ಯಾರೇಜ್‌ & ಡೆತ್‌..

ಪ್ರತಿಧ್ವನಿ by ಪ್ರತಿಧ್ವನಿ
May 17, 2024
in Top Story, ವಿದೇಶ
0
Share on WhatsAppShare on FacebookShare on Telegram

ಬೆಂಗಳೂರಿನಲ್ಲಿ ಸಾವುಗಳಿಗೆ ಲೆಕ್ಕವಿಲ್ಲ. ಆದರೆ ಈ ಸಾವು (Death) ಮಾತ್ರ ಮನಸ್ಸನ್ನು ಕದಡುತ್ತದೆ ಅನ್ನೋದು ಮಾತ್ರ ಸುಳ್ಳಲ್ಲ. 10 ವರ್ಷದ ಹಿಂದೆ ಬಿಹಾರದಿಂದ ಬೆಂಗಳೂರಿಗೆ(Bangalore) ಬಂದಿದ್ದ ಅಮಿತ್‌‌ ಕುಮಾರ್‌ ಜಿಮ್‌ ಟ್ರೈನರ್‌ (Gym Trainer) ಆಗಿ ಕೆಲಸ ಮಾಡ್ತಿದ್ದ. ಬೆಂಗಳೂರಿನ ಟಿ ದಾಸರಹಳ್ಳಿಯಲ್ಲಿ ಕೆಲಸ ಮಾಡ್ತಿದ್ದ ಅಮಿತ್‌ ಕುಮಾರ್‌‌, ಅದೇ ಏರಿಯಾದಲ್ಲಿ ಹಾಸನ ಮೂಲದ ಯುವತಿ ಜೊತೆಗೆ ಲವ್‌‌ನಲ್ಲಿ ಬಿದ್ದಿದ್ದ. ಯುವತಿ ಕೂಡ ಈತನ ಪ್ರೀತಿಗೆ ಮನಸೋತಿದ್ದಳು. ಆ ಬಳಿಕ 18 ವರ್ಷ ತುಂಬುವ ತನಕ ಕಾದಿದ್ದು ಕಳೆದ ವರ್ಷ ಅಷ್ಟೇ ಹಸೆಮಣೆ ಏರಿದ್ದರು.

ADVERTISEMENT

28 ವರ್ಷದ ಅಮಿತ್‌ ಕುಮಾರ್‌, 19 ವರ್ಷದ ಯುವತಿ ಮೊದಲಿಗೆ ಅನ್ಯೋನ್ಯವಾಗಿ ಸಂಸಾರ ದೋಣಿ ಸಾಗಿಸುತ್ತಿದ್ದರು. ಆದರೆ ಮದುವೆಯಾದ ಮೂರ್ನಾಲ್ಕು ತಿಂಗಳಿಗೆ ನರ್ಸಿಂಗ್‌ ಕಾಲೇಜಿಗೆ(Nursing College) ಸೇರಿಸಿದ್ದ. ಹೆಂಡತಿ ಕಾಲೇಜು ಮೆಟ್ಟಿಲು ಹತ್ತಿದ ಬಳಿಕ ಆಕೆಯ ಮೇಲೆ ಅನುಮಾನ ಶುರುವಾಗಿತ್ತು. ಸ್ನೇಹಿತರ ಜೊತೆಗೆ ಮಾತನಾಡುವುದನ್ನು ಸಹಿಸಲು ಸಾಧ್ಯವಾಗದ ಅಮಿತ್‌ ಕುಮಾರ್‌(Amith Kumar), ಹೆಂಡತಿ ಜೊತೆಗೆ ಜಗಳ ತೆಗೆಯುತ್ತಿದ್ದ. ಇತ್ತೀಚಿಗೆ ಇದು ತೀರಾ ಸಾಮಾನ್ಯವಾಗಿತ್ತು.

ಕಳೆದ ವರ್ಷ ಅಷ್ಟೇ ಪೋಷಕರ ವಿರೋಧದ ನಡುವೆಯೂ ಮದುವೆಯಾಗಿ ಟಿ ದಾಸರಹಳ್ಳಿಯಲ್ಲಿ(T Dasarahalli) ಸಣ್ಣದೊಂದು ಮನೆ ಮಾಡಿಕೊಂಡು ವಾಸವಿದ್ದ ಜೋಡಿಯ ಬಾಳಲ್ಲಿ ಅನುಮಾನ ಬಿರುಗಾಳಿಯನ್ನು ಸೃಷ್ಟಿಸಿತ್ತು. ಬೇರೆ ಹುಡುಗರ ಜೊತೆಗೆ ಹೆಚ್ಚಾಗಿ ಫೋನನಲ್ಲಿ ಮಾತಾಡ್ತಾಳೆ ಅಂತ ಜಗಳ ಶುರುಮಾಡಿದ್ದ. ಆಕೆ ತನ್ನ ಗಂಡನ ಮನೆ ಬಿಟ್ಟು ಹೆತ್ತವರ ಮನೆಯಲ್ಲಿ ಇರುವುದಕ್ಕೆ ಶುರು ಮಾಡಿದ್ಲು. ಆ ಬಳಿಕ ಒತ್ತಾಯ ಮಾಡಿಕೊಂಡು ಮನೆಗೆ ಕರೆದುಕೊಂಡು ಬಂದಿದ್ದ. ಮೇ 15ರಂದು ಜಗಳ ಆದ ಬಳಿಕ ಯುವತಿ ತನ್ನ ಪೋಷಕರ ಮನೆಗೆ ಹೋಗಿದ್ದಳು. ಆಕೆಯನ್ನು ವಾಪಸ್‌ ಕರೆತರಲು ಸಾಯುವ ನಾಟಕ ಆಡಿದ್ದ ಅಮಿತ್‌ ಕುಮಾರ್‌ ಸತ್ತೇ ಹೋಗಿದ್ದಾನೆ.

ಮೇ 15 ರ ಸಂಜೆ 7.30ಕ್ಕೆ ಪತ್ನಿ ತನ್ನ ಪೋಷಕರ ಮನೆಗೆ ತೆರಳಿದ್ದಳು. ಆ ಬಳಿಕ ರೂಮ್‌ ಲಾಕ್ ಮಾಡಿಕೊಂಡು ಒಂದು ಹಗ್ಗಕ್ಕೆ ನೇಣು ಹಾಕಿಕೊಳ್ಳುತ್ತೇನೆ (Suicide) ಎಂದು ಪತ್ನಿಗೆ ವಿಡಿಯೋ ಕರೆ ಮಾಡಿದ್ದ. ನೀನು ನಮ್ಮ ಮನೆಗೆ ವಾಪಸ್‌ ಬಂದಿಲ್ಲ ಅಂದ್ರೆ ನಾನು ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಬೆದರಿಸಿದ್ದ. ಫ್ಯಾನಿಗೆ ಹಗ್ಗ ಕಟ್ಟಿಕೊಂಡು ಕುತ್ತಿಗೆಗೆ ಬಿಗಿದುಕೊಂಡಿದ್ದ. ಆ ಸಮಯದಲ್ಲಿ ಅಚಾನಕ್ ಆಗಿ ಚೇರ್ ಜಾರಿತೋ ಅಥವಾ ಹೆಂಡತಿಯ ನಡೆತೆ ಮೇಲೆ ಅನುಮಾನಗೊಂಡು ಸಾಯುವ ನಿರ್ಧಾರವನ್ನೇ ಮಾಡಿದ್ನೋ ಅನ್ನೋದರ ಬಗ್ಗೆ ಪೊಲೀಸ್ರು ತನಿಖೆ ಕೈಗೊಂಡಿದ್ದಾರೆ. ಪ್ರೀತಿಸಿ, ಮನೆಯವರ ವಿರೋಧ ಮಾಡಿಕೊಂಡು ಮದುವೆ ಆಗಿದ್ದ ಯುವತಿ 19 ವರ್ಷಕ್ಕೇ ವಿಧವೆ ಆಗಿದ್ದಾಳೆ.

Bihara
Youth
Love
Hassan
T Dasarahalli
Bangalore
Love Marriage
Gym Trainer
Suicide

Tags: Hassan
Previous Post

ದಟ್ಟವಾದ ಮತ್ತು ಆಕರ್ಷಕ ಕಣ್ಣಿನ ರೆಪ್ಪೆಗಳು ನಿಮ್ಮದಾಗಬೇಕು ಅಂದ್ರೆ ಈ ಹ್ಯಾಕ್ ಟ್ರೈ ಮಾಡಿ

Next Post

15 ಕೆಜಿ ತುಪ್ಪ ಎಗರಿಸಿದ ಖದೀಮರು!

Related Posts

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 19, 2026
0

ಬೆಂಗಳೂರು : ಇಂಧನ ಪರಿವರ್ತನೆಗೆ ನೀತಿ, ನಿಯಂತ್ರಣದ ಜತೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ. ನ್ಯಾಯಾಂಗ, ನೀತಿ ನಿರೂಪಕರು, ನಿಯಂತ್ರಕರು ಮತ್ತು ಉದ್ಯಮದ ನಡುವಿನ ಅರ್ಥಪೂರ್ಣ ಚರ್ಚೆಗಳಿಗೆ ಈ...

Read moreDetails
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

April 19, 2026
ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

April 19, 2026
Next Post
15 ಕೆಜಿ ತುಪ್ಪ ಎಗರಿಸಿದ ಖದೀಮರು!

15 ಕೆಜಿ ತುಪ್ಪ ಎಗರಿಸಿದ ಖದೀಮರು!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada