ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿರವರು ಚುನಾವಣೆಗಳಲ್ಲಿ ಜಾತಿ, ಹಣ ಮತ್ತು ಪಕ್ಷಾಂತರಿಗಳ ಪ್ರಭಾವವನ್ನು ಕೊನೆಗಾಣಿಸುವ ಚುನಾವಣಾ ಸುಧಾರಣೆಗಳನ್ನು ಪೂರ್ವಭಾವಿಯಾಗಿ ತರಬೇಕು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೌಲ್ಯಗಳು ಕುಸಿಯುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಪ್ರವೃತ್ತಿಗೆ ರಾಜಕರಾಣಿಗಳು ಮಣಿಯುವ ಪ್ರವೃತ್ತಿ ನಿಲ್ಲಬೇಕು. ಸಮಾಜದ ವಿವಿಧ ಕ್ಷೇತ್ರಗಳ ಹಿರಿಯ ನಾಯಕರು ಇದರ ವಿರುದ್ದ ಧ್ವನಿ ಎತ್ತಬೇಕು. ಈಗಿನ ಕಾಲಘಟ್ಟದಲ್ಲಿ ಜಾತಿ, ಹಣ, ಹೆಂಡ ಮತ್ತು ಪಕ್ಷಾಂತರಗಳಿಂದ ಜನರಿಗೆ ಚುನಾವಣೆ ಎಂಬುದು ಭಾವನೆಗಳಿಗೆ ಸ್ಪಂದಿಸದ ವ್ಯವಸ್ಥೆ ಎಂಬ ಭಾವನೆ ಮೂಡಲು ಶುರುವಾಗಿದೆ ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಈ ವಿಷಯದ ಬಗ್ಗೆ ಸುಧೀರ್ಘ ಚರ್ಚೆ ಅಗತ್ಯವಿದೆ ಇದಕ್ಕೆ ಸಾಹಿತಿಗಳ ಹಾಗೂ ಮಾಧ್ಯಮದವರ ಬೆಂಬಲ ಅತ್ಯವಶ್ಯಕ ಎಂದು ಹೇಳಿದ್ದಾರೆ.