• Home
  • About Us
  • ಕರ್ನಾಟಕ
Wednesday, December 17, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Uncategorized

ಯಡಿಯೂರಪ್ಪ ಪುತ್ರ ವಿಜಯೇಂದ್ರ ಬಗ್ಗೆ ಯತ್ನಾಳ್​ ಹೇಳಿಕೆ ಸತ್ಯಾನಾ..? 

ಕೃಷ್ಣ ಮಣಿ by ಕೃಷ್ಣ ಮಣಿ
January 19, 2023
in Uncategorized
0
ಯಡಿಯೂರಪ್ಪ ಪುತ್ರ ವಿಜಯೇಂದ್ರ ಬಗ್ಗೆ ಯತ್ನಾಳ್​ ಹೇಳಿಕೆ ಸತ್ಯಾನಾ..? 
Share on WhatsAppShare on FacebookShare on Telegram

ಮಕರ ಸಂಕ್ರಾಂತಿ ದಿನ ಬಿಜೆಪಿ ಬಗ್ಗೆ ಮಾತನಾಡಿದ್ದ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​, ಸ್ಯಾಂಟ್ರೋ ರವಿ ಕೇಸ್ ಏನು ಆಗಲ್ಲ, ಮಾಧ್ಯಮಗಳಲ್ಲಿ ಒಂದು ವಾರ ತೋರಿಸ್ತೀರಿ, ಆಮೇಲೆ ಮತ್ತೊಂದು 

ADVERTISEMENT

ಸುದ್ದಿ ಬರುತ್ತೆ ಮಾಧ್ಯಮಗಳು ಇದನ್ನು ಮರೆತುಬಿಡ್ತೀರಿ ಎಂದಿದ್ದರು. ಅದರ ಜೊತೆಗೆ ಡ್ರಗ್ಸ್ ಕೇಸ್​ನಲ್ಲಿ ಬಂಧನ ಆಗಿದ್ದ ಯುವರಾಜ್ ವಿಚಾರವಾಗಿ ಸ್ಫೋಟಕ ವಿಚಾರ ಬಹಿರಂಗ ಮಾಡಿದ್ದ ಬಸನಗೌಡ ಪಾಟೀಲ್​ ಯತ್ನಾಳ್​. ಡ್ರಗ್ಸ್ ಹೆಸರಿನಲ್ಲಿ ಅರೆಸ್ಟ್​ ಮಾಡಿ ಜೈಲಿನಲ್ಲಿ ಇಟ್ಟಿದ್ದು ಒಂದು ನೆಪ ಮಾತ್ರ. ಆದರೆ ಸಂಜಾತ ಪುತ್ರನ ವಿಡಿಯೋಗಳನ್ನು ಡಿಲಿಟ್ ಮಾಡಿಸಲು ಆಡಿದ ನಾಟಕ ಎಂದು ಬಸನಗೌಡ ಪಾಟೀಲ್​ ಯತ್ನಾಳ್ ನೇರವಾಗಿಯೇ ಹೇಳಿದ್ದಾರೆ. ಪೊಲೀಸರು ಡ್ರಗ್ಸ್​ ಕೇಸ್​ ಹೆಸರಿನಲ್ಲಿ ಅರೆಸ್ಟ್ ಮಾಡಿದಾಗ ಮೊದಲು ಪೋನ್ ಕಸಿದುಕೊಂಡು ವಿಡಿಯೋ ಡಿಲೀಟ್ ಮಾಡುತ್ತಿದ್ದರು. ವಿಡಿಯೋ ಇಟ್ಟುಕೊಂಡು ಹಣ ಕೇಳಿದ್ರೆ ಅನ್ನೋ ಭಯದಲ್ಲಿ ವಿಡಿಯೋ ಡಿಲೀಟ್ ಮಾಡಿದ್ರು. ಹಲವಾರು ಮಂತ್ರಿಗಳ ವೀಡಿಯೋ ಕೂಡ ಇವೆ ಎಂದಿದ್ದರು. ಇದೀಗ ಯತ್ನಾಳ್​ ಹೇಳಿದ್ದೆಲ್ಲಾ ಸತ್ಯ ಸಿದ್ದರಾಮಯ್ಯ ಷರಾ ಬರೆದಿದ್ದಾರೆ. 

ಯಡಿಯೂರಪ್ಪ ಪುತ್ರನ ಬಗ್ಗೆ ನೇರ ಆರೋಪ ಸತ್ಯ..! ಕ್ರಮವಿಲ್ಲ..!!

ಬಸನಗೌಡ ಪಾಟೀಲ್​ ವಿರುದ್ಧ ಕ್ರಮ ತೆಗೆದುಕೊಳ್ಳಲಾರದಷ್ಟು ಬಿಜೆಪಿ ಹೈಕಮಾಂಡ್​ ನಿಶಕ್ತವಾಗಿದೆ ಎಂದಿರುವ ಸಿದ್ದರಾಮಯ್ಯ, ಯತ್ನಾಳ್​ ಕೆಲವೊಮ್ಮೆ ಸತ್ಯವನ್ನೂ ಹೇಳ್ತಾರೆ. ಇತ್ತೀಚಿಗೆ ಯಡಿಯೂರಪ್ಪ ಅವರ ಪುತ್ರನ ಬಗ್ಗೆ ನೇರವಾಗಿ ಆರೋಪ ಮಾಡಿದ್ದರು. ಆದರೆ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. ಯತ್ನಾಳ್​ ಕೂಡ ಸಂಜಾತ ಪುತ್ರ ಎಂದು ಸಂಭೋದಿಸಿರುವುದು ಯಡಿಯೂರಪ್ಪ ಅವರ ಪುತ್ರ ಎನ್ನುವುದನ್ನೇ ಸೂಚಿಸುತ್ತದೆ ಎನ್ನುವುದನ್ನು ಸಿದ್ದರಾಮಯ್ಯ ಬಹಿರಂಗವಾಗಿ ಹೇಳಿದ್ದಾರೆ. ಕುಮಾರಸ್ವಾಮಿ ಕೂಡ ಈ ಬಗ್ಗೆ ತನಿಖೆ ಮಾಡಿಸಬೇಕು ಎಂದು ಆಗ್ರಹ ಮಾಡಿದ್ದಾರೆ ಅಲ್ಲವೇ..? ಹಾಗಿದ್ರೆ ಬಂಧನ ಆಗಿದ್ದ ಯಾವ ಯಾವ ಸಿನಿಮಾ ನಟಿ ಜೊತೆಗೆ ವಿಜಯೇಂದ್ರ ವೀಡಿಯೋ ಇತ್ತು..? ಯಾರನ್ನು ಅರೆಸ್ಟ್​ ಮಾಡಿ ವೀಡಿಯೋ ಡಿಲೀಟ್​ ಮಾಡುವ ಸರ್ಕಸ್​ ಮಾಡಿದ್ರು ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ. 

ರಾಜ್ಯದಲ್ಲಿ ಪೊಲೀಸ್​ ಫೋರ್ಸ್​ ದುರ್ಬಳಕೆ ಆಗಿದೆಯಾ..? 

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವುದಕ್ಕೆ ರಾಜ್ಯಾದ್ಯಂತ ನಡೆಯುತ್ತಿರುವ ಕ್ರಿಮಿನಲ್ ಪ್ರಕರಣಗಳೇ ಸಾಕ್ಷಿ. ಹೀಗಿರುವಾಗ ರಾಜಕೀಯ ನಾಯಕರು ತಮ್ಮ ತೆವಲಿಗಾಗಿ ಮಾಡಿಕೊಂಡ ವೀಡಿಯೋಗಳು ಹಾಗು ಅದರಿಂದ ಆಗುವ ಬ್ಲಾಕ್​ಮೇಲ್​ ಬಗ್ಗೆ ತನಿಖೆ ಮಾಡಲು ಡ್ರಗ್ಸ್​ ಕೇಸ್​​ ಹೆಸರಿನಲ್ಲಿ ಕರ್ತವ್ಯ ಲೋಪ ಮಾಡಿದ್ರಾ..? ಎನ್ನುವ ಪ್ರಶ್ನೆ ಎದುರಾಗಿದೆ. ಹೌದು ಎಂದು ಆಡಳಿತ ಪಕ್ಷದ ಶಾಸಕರೇ ಆಗಿರುವ ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿದ್ದಾರೆ. ಆದರೂ ಸರ್ಕಾರ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದೆ. ಯತ್ನಾಳ್ ಆರೋಪಕ್ಕೆ ಉತ್ತರ ಕೊಡುವ ಗೋಜಿಗೇ ಹೋಗ್ತಿಲ್ಲ ಸಿಎಂ ಬಸವರಾಜ ಬೊಮ್ಮಾಯಿ. ಯಾವೆಲ್ಲಾ ನಾಯಕಿಯರ ಜೊತೆಗೆ ವೀಡಿಯೋ ಇತ್ತು, ಆ ನಾಯಕಿಯರನ್ನು ಕರೆದು ವಿಚಾರಣೆ ನೆಪದಲ್ಲಿ ವೀಡಿಯೋ ಪಡೆದುಕೊಂಡಿದ್ದಾರೆ. ಆದರೆ ಇದೇ ಡ್ರಗ್ಸ್​ ಹೆಸರಲ್ಲಿ ಮತ್ತಷ್ಟು ಅಮಾಕರಿಗೂ ಕಿರುಕುಳು ಕೊಟ್ಟಿರುವ ಸಾಧ್ಯತೆ ಇರುತ್ತದೆ. ಕೋರ್ಟ್​ಗೆ ಕಾಸಗಿ ದೂರು ದಾಖಲಿಸಿದ್ರೆ ಬಿಜೆಪಿ ಸರ್ಕಾರ ಮಾಡಿರುವ ಅನಾಚಾರ ಹೊರಬರುವ ಸಾಧ್ಯತೆಗಳಿವೆ. 

ವಿಜಯೇಂದ್ರ ಕೂಡ ಯತ್ನಾಳ್​ ಆರೋಪಕ್ಕೆ ನೋ ರಿಯಾಕ್ಷನ್​..!

ಯಡಿಯೂರಪ್ಪ ಮುಖ್ಯಮಂತ್ರಿ ಆದಾಗಿನಿಂದಲೂ ವಿಜಯೇಂದ್ರ ಬಸನಗೌಡ ಪಾಟೀಲ್​ ಅವರ ಮೇನ್​ ಟಾರ್ಗೆಟ್​. ಮೊದ ಮೊದಲು ಯತ್ನಾಳ್​ ಆರೋಪಕ್ಕೆ ತಿರುಗೇಟು ನೀಡುತ್ತಿದ್ದ ಬಿ.ವೈ ವಿಜಯೇಂದ್ರ ಇತ್ತೀಚಿಗೆ ಯತ್ನಾಳ್​ ವಿಚಾರಕ್ಕೆ ಹೋಗದೆ ಅಂತರ ಕಾಯ್ದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಬಸನಗೌಡ ಪಾಟೀಲ್​ ಯತ್ನಾಳ್​ ಬಿಜೆಪಿ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದಾಗಲೂ ಬಿಜೆಪಿ ಹೈಕಮಾಂಡ್​ ಯಾವುದೇ ನೋಟಿಸ್​ ನೀಡಲ್ಲ, ಯತ್ನಾಳ್​ರಿಂದ ಸ್ಪಷ್ಟನೆ ಪಡೆಯುವ ಕೆಲಸವನ್ನೂ ಮಾಡಲ್ಲ, ಇದೆಲ್ಲವನ್ನೂ ನೋಡಿದಾಗ ವಿಜಯೇಂದ್ರ ಸೇರಿದಂತೆ ಬಿಜೆಪಿಯಲ್ಲಿರುವ ಯತ್ನಾಳ್​ ವಿರೋಧಿಗಳಿಗೆ ಒಂದು ಮಾಹಿತಿ ಸ್ಪಷ್ಟವಾಗಿದ್ದು, ಯತ್ನಾಳ್​ ಮೇಲೆ ಹೈಕಮಾಂಡ್​ ಕೃಪಾಕಟಾಕ್ಷವಿದೆ. ಅದೇ ಕಾರಣಕ್ಕೆ ಯತ್ನಾಳ್​ ಬಿಜೆಪಿ ನಾಯಕರನ್ನೇ ಹಿಗ್ಗಾಮುಗ್ಗಾ ಜಾಡಿಸುತ್ತಿದ್ದಾರೆ. ಇದೀಗ ವೀಡಿಯೋ ಮ್ಯಾಟರ್​ ಲೀಕ್​ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ವೀಡಿಯೋ ಲೀಕ್​ ಆದರೂ ಅಚ್ಚರಿಯೇನಿಲ್ಲ. 

Previous Post

ಸಮಾಜವಾದಿ ನಾಯಕನ ಮಗಳನ್ನು ಅಪಹರಿಸಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ: ಪಕ್ಷದಿಂದ ಉಚ್ಛಾಟನೆ

Next Post

ಎಲ್ಲೋ ಏನನ್ನೋ ಮರೆಮಾಚಲಾಗುತ್ತಿದೆ..!

Related Posts

ಎಲ್ಲವೂ ಸರಿಯಾಗಬೇಕು: ಜೈಲಾಧಿಕಾರಿಗಳಿಗೆ ಅಲೋಕ್ ಕೊಟ್ಟ ಡೆಡ್ ಲೈನ್ ಏನು..?
Uncategorized

ಎಲ್ಲವೂ ಸರಿಯಾಗಬೇಕು: ಜೈಲಾಧಿಕಾರಿಗಳಿಗೆ ಅಲೋಕ್ ಕೊಟ್ಟ ಡೆಡ್ ಲೈನ್ ಏನು..?

by ಪ್ರತಿಧ್ವನಿ
December 16, 2025
0

  ಬೆಂಗಳೂರು: ಕರ್ನಾಟಕ ಕಾರಗೃಹ ಮತ್ತು ಸುಧಾರಣ ಇಲಾಖೆ ನೂತನ ಡಿಜಿಪಿಯಾಗಿರೋ ಅಲೋಕ್ ಕುಮಾರ್ ನಿನ್ನೆ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಈ...

Read moreDetails
ಆಯುರ್ವೇದಿಕ್ ಚಿಕಿತ್ಸೆ ಟೆಂಟ್: 40 ಲಕ್ಷ ವಂಚಿಸಿದ್ದ ನಕಲಿ ಸ್ವಾಮೀಜಿ ಬಂಧನ

ಆಯುರ್ವೇದಿಕ್ ಚಿಕಿತ್ಸೆ ಟೆಂಟ್: 40 ಲಕ್ಷ ವಂಚಿಸಿದ್ದ ನಕಲಿ ಸ್ವಾಮೀಜಿ ಬಂಧನ

December 10, 2025
Belagavi Politics: ಲಕ್ಷ್ಮಣ್‌ ಸವದಿಗೆ ತೀವ್ರ ನಿರಾಸೆ ತಂದಿಟ್ಟ ಜಾರಕಿಹೊಳಿ ಬ್ರದರ್ಸ್‌ ತಂತ್ರ

Belagavi Politics: ಲಕ್ಷ್ಮಣ್‌ ಸವದಿಗೆ ತೀವ್ರ ನಿರಾಸೆ ತಂದಿಟ್ಟ ಜಾರಕಿಹೊಳಿ ಬ್ರದರ್ಸ್‌ ತಂತ್ರ

December 13, 2025
*ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಆರ್.ವಿ. ದೇವರಾಜ್ ಮೈಸೂರಿನಲ್ಲಿ ವಿಧಿವಶರಾಗಿದ್ದಾರೆ*

*ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಆರ್.ವಿ. ದೇವರಾಜ್ ಮೈಸೂರಿನಲ್ಲಿ ವಿಧಿವಶರಾಗಿದ್ದಾರೆ*

December 2, 2025
ಬೆಂಗಳೂರಲ್ಲಿ ದೇಶದ ಅತಿದೊಡ್ಡ ಸೈಬರ್ ವಂಚನೆ ಬಯಲು

ಬೆಂಗಳೂರಲ್ಲಿ ದೇಶದ ಅತಿದೊಡ್ಡ ಸೈಬರ್ ವಂಚನೆ ಬಯಲು

November 17, 2025
Next Post
ಎಲ್ಲೋ ಏನನ್ನೋ ಮರೆಮಾಚಲಾಗುತ್ತಿದೆ..!

ಎಲ್ಲೋ ಏನನ್ನೋ ಮರೆಮಾಚಲಾಗುತ್ತಿದೆ..!

Please login to join discussion

Recent News

Daily Horoscope: ಇಂದು ಈ ರಾಶಿಯವರು ಅಂದುಕೊಂಡಿದೆಲ್ಲಾ ಈಡೇರುತ್ತದೆ..!
Top Story

Daily Horoscope: ಇಂದು ಈ ರಾಶಿಯವರು ಅಂದುಕೊಂಡಿದೆಲ್ಲಾ ಈಡೇರುತ್ತದೆ..!

by ಪ್ರತಿಧ್ವನಿ
December 17, 2025
Health Care

ಹೆಣ್ಣು ಭ್ರೂಣ ಹತ್ಯೆ ಸಾಮಾಜಿಕ ಪಿಡುಗು, ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ: ದಿನೇಶ್ ಗುಂಡೂರಾವ್

by ಪ್ರತಿಧ್ವನಿ
December 16, 2025
Top Story

ಎರಡನೇ ವಾರದಲ್ಲೂ ಮುಂದುವರೆದಿದೆ‌ “ದಿ ಡೆವಿಲ್” ಚಿತ್ರದ ಯಶಸ್ಸಿನ ಓಟ..!!

by ಪ್ರತಿಧ್ವನಿ
December 16, 2025
Winter Session 2025: ಗ್ರೇಟರ್ ಬೆಂಗಳೂರು ಆಡಳಿತ 2ನೇ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ
Top Story

Winter Session 2025: ಗ್ರೇಟರ್ ಬೆಂಗಳೂರು ಆಡಳಿತ 2ನೇ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ

by ಪ್ರತಿಧ್ವನಿ
December 16, 2025
Winter Session 2025: ಅಧಿವೇಶನ ಕರೆದಿರುವುದೇ ಉ.ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚಿಸಲು-ಡಿ.ಕೆ ಶಿವಕುಮಾರ್‌
Top Story

Winter Session 2025: ಅಧಿವೇಶನ ಕರೆದಿರುವುದೇ ಉ.ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚಿಸಲು-ಡಿ.ಕೆ ಶಿವಕುಮಾರ್‌

by ಪ್ರತಿಧ್ವನಿ
December 16, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Daily Horoscope: ಇಂದು ಈ ರಾಶಿಯವರು ಅಂದುಕೊಂಡಿದೆಲ್ಲಾ ಈಡೇರುತ್ತದೆ..!

Daily Horoscope: ಇಂದು ಈ ರಾಶಿಯವರು ಅಂದುಕೊಂಡಿದೆಲ್ಲಾ ಈಡೇರುತ್ತದೆ..!

December 17, 2025

ಹೆಣ್ಣು ಭ್ರೂಣ ಹತ್ಯೆ ಸಾಮಾಜಿಕ ಪಿಡುಗು, ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ: ದಿನೇಶ್ ಗುಂಡೂರಾವ್

December 16, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada