ಮಕರ ಸಂಕ್ರಾಂತಿ ದಿನ ಬಿಜೆಪಿ ಬಗ್ಗೆ ಮಾತನಾಡಿದ್ದ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸ್ಯಾಂಟ್ರೋ ರವಿ ಕೇಸ್ ಏನು ಆಗಲ್ಲ, ಮಾಧ್ಯಮಗಳಲ್ಲಿ ಒಂದು ವಾರ ತೋರಿಸ್ತೀರಿ, ಆಮೇಲೆ ಮತ್ತೊಂದು
ಸುದ್ದಿ ಬರುತ್ತೆ ಮಾಧ್ಯಮಗಳು ಇದನ್ನು ಮರೆತುಬಿಡ್ತೀರಿ ಎಂದಿದ್ದರು. ಅದರ ಜೊತೆಗೆ ಡ್ರಗ್ಸ್ ಕೇಸ್ನಲ್ಲಿ ಬಂಧನ ಆಗಿದ್ದ ಯುವರಾಜ್ ವಿಚಾರವಾಗಿ ಸ್ಫೋಟಕ ವಿಚಾರ ಬಹಿರಂಗ ಮಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ್. ಡ್ರಗ್ಸ್ ಹೆಸರಿನಲ್ಲಿ ಅರೆಸ್ಟ್ ಮಾಡಿ ಜೈಲಿನಲ್ಲಿ ಇಟ್ಟಿದ್ದು ಒಂದು ನೆಪ ಮಾತ್ರ. ಆದರೆ ಸಂಜಾತ ಪುತ್ರನ ವಿಡಿಯೋಗಳನ್ನು ಡಿಲಿಟ್ ಮಾಡಿಸಲು ಆಡಿದ ನಾಟಕ ಎಂದು ಬಸನಗೌಡ ಪಾಟೀಲ್ ಯತ್ನಾಳ್ ನೇರವಾಗಿಯೇ ಹೇಳಿದ್ದಾರೆ. ಪೊಲೀಸರು ಡ್ರಗ್ಸ್ ಕೇಸ್ ಹೆಸರಿನಲ್ಲಿ ಅರೆಸ್ಟ್ ಮಾಡಿದಾಗ ಮೊದಲು ಪೋನ್ ಕಸಿದುಕೊಂಡು ವಿಡಿಯೋ ಡಿಲೀಟ್ ಮಾಡುತ್ತಿದ್ದರು. ವಿಡಿಯೋ ಇಟ್ಟುಕೊಂಡು ಹಣ ಕೇಳಿದ್ರೆ ಅನ್ನೋ ಭಯದಲ್ಲಿ ವಿಡಿಯೋ ಡಿಲೀಟ್ ಮಾಡಿದ್ರು. ಹಲವಾರು ಮಂತ್ರಿಗಳ ವೀಡಿಯೋ ಕೂಡ ಇವೆ ಎಂದಿದ್ದರು. ಇದೀಗ ಯತ್ನಾಳ್ ಹೇಳಿದ್ದೆಲ್ಲಾ ಸತ್ಯ ಸಿದ್ದರಾಮಯ್ಯ ಷರಾ ಬರೆದಿದ್ದಾರೆ.
ಯಡಿಯೂರಪ್ಪ ಪುತ್ರನ ಬಗ್ಗೆ ನೇರ ಆರೋಪ ಸತ್ಯ..! ಕ್ರಮವಿಲ್ಲ..!!
ಬಸನಗೌಡ ಪಾಟೀಲ್ ವಿರುದ್ಧ ಕ್ರಮ ತೆಗೆದುಕೊಳ್ಳಲಾರದಷ್ಟು ಬಿಜೆಪಿ ಹೈಕಮಾಂಡ್ ನಿಶಕ್ತವಾಗಿದೆ ಎಂದಿರುವ ಸಿದ್ದರಾಮಯ್ಯ, ಯತ್ನಾಳ್ ಕೆಲವೊಮ್ಮೆ ಸತ್ಯವನ್ನೂ ಹೇಳ್ತಾರೆ. ಇತ್ತೀಚಿಗೆ ಯಡಿಯೂರಪ್ಪ ಅವರ ಪುತ್ರನ ಬಗ್ಗೆ ನೇರವಾಗಿ ಆರೋಪ ಮಾಡಿದ್ದರು. ಆದರೆ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. ಯತ್ನಾಳ್ ಕೂಡ ಸಂಜಾತ ಪುತ್ರ ಎಂದು ಸಂಭೋದಿಸಿರುವುದು ಯಡಿಯೂರಪ್ಪ ಅವರ ಪುತ್ರ ಎನ್ನುವುದನ್ನೇ ಸೂಚಿಸುತ್ತದೆ ಎನ್ನುವುದನ್ನು ಸಿದ್ದರಾಮಯ್ಯ ಬಹಿರಂಗವಾಗಿ ಹೇಳಿದ್ದಾರೆ. ಕುಮಾರಸ್ವಾಮಿ ಕೂಡ ಈ ಬಗ್ಗೆ ತನಿಖೆ ಮಾಡಿಸಬೇಕು ಎಂದು ಆಗ್ರಹ ಮಾಡಿದ್ದಾರೆ ಅಲ್ಲವೇ..? ಹಾಗಿದ್ರೆ ಬಂಧನ ಆಗಿದ್ದ ಯಾವ ಯಾವ ಸಿನಿಮಾ ನಟಿ ಜೊತೆಗೆ ವಿಜಯೇಂದ್ರ ವೀಡಿಯೋ ಇತ್ತು..? ಯಾರನ್ನು ಅರೆಸ್ಟ್ ಮಾಡಿ ವೀಡಿಯೋ ಡಿಲೀಟ್ ಮಾಡುವ ಸರ್ಕಸ್ ಮಾಡಿದ್ರು ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ.
ರಾಜ್ಯದಲ್ಲಿ ಪೊಲೀಸ್ ಫೋರ್ಸ್ ದುರ್ಬಳಕೆ ಆಗಿದೆಯಾ..?
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವುದಕ್ಕೆ ರಾಜ್ಯಾದ್ಯಂತ ನಡೆಯುತ್ತಿರುವ ಕ್ರಿಮಿನಲ್ ಪ್ರಕರಣಗಳೇ ಸಾಕ್ಷಿ. ಹೀಗಿರುವಾಗ ರಾಜಕೀಯ ನಾಯಕರು ತಮ್ಮ ತೆವಲಿಗಾಗಿ ಮಾಡಿಕೊಂಡ ವೀಡಿಯೋಗಳು ಹಾಗು ಅದರಿಂದ ಆಗುವ ಬ್ಲಾಕ್ಮೇಲ್ ಬಗ್ಗೆ ತನಿಖೆ ಮಾಡಲು ಡ್ರಗ್ಸ್ ಕೇಸ್ ಹೆಸರಿನಲ್ಲಿ ಕರ್ತವ್ಯ ಲೋಪ ಮಾಡಿದ್ರಾ..? ಎನ್ನುವ ಪ್ರಶ್ನೆ ಎದುರಾಗಿದೆ. ಹೌದು ಎಂದು ಆಡಳಿತ ಪಕ್ಷದ ಶಾಸಕರೇ ಆಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಆದರೂ ಸರ್ಕಾರ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದೆ. ಯತ್ನಾಳ್ ಆರೋಪಕ್ಕೆ ಉತ್ತರ ಕೊಡುವ ಗೋಜಿಗೇ ಹೋಗ್ತಿಲ್ಲ ಸಿಎಂ ಬಸವರಾಜ ಬೊಮ್ಮಾಯಿ. ಯಾವೆಲ್ಲಾ ನಾಯಕಿಯರ ಜೊತೆಗೆ ವೀಡಿಯೋ ಇತ್ತು, ಆ ನಾಯಕಿಯರನ್ನು ಕರೆದು ವಿಚಾರಣೆ ನೆಪದಲ್ಲಿ ವೀಡಿಯೋ ಪಡೆದುಕೊಂಡಿದ್ದಾರೆ. ಆದರೆ ಇದೇ ಡ್ರಗ್ಸ್ ಹೆಸರಲ್ಲಿ ಮತ್ತಷ್ಟು ಅಮಾಕರಿಗೂ ಕಿರುಕುಳು ಕೊಟ್ಟಿರುವ ಸಾಧ್ಯತೆ ಇರುತ್ತದೆ. ಕೋರ್ಟ್ಗೆ ಕಾಸಗಿ ದೂರು ದಾಖಲಿಸಿದ್ರೆ ಬಿಜೆಪಿ ಸರ್ಕಾರ ಮಾಡಿರುವ ಅನಾಚಾರ ಹೊರಬರುವ ಸಾಧ್ಯತೆಗಳಿವೆ.
ವಿಜಯೇಂದ್ರ ಕೂಡ ಯತ್ನಾಳ್ ಆರೋಪಕ್ಕೆ ನೋ ರಿಯಾಕ್ಷನ್..!
ಯಡಿಯೂರಪ್ಪ ಮುಖ್ಯಮಂತ್ರಿ ಆದಾಗಿನಿಂದಲೂ ವಿಜಯೇಂದ್ರ ಬಸನಗೌಡ ಪಾಟೀಲ್ ಅವರ ಮೇನ್ ಟಾರ್ಗೆಟ್. ಮೊದ ಮೊದಲು ಯತ್ನಾಳ್ ಆರೋಪಕ್ಕೆ ತಿರುಗೇಟು ನೀಡುತ್ತಿದ್ದ ಬಿ.ವೈ ವಿಜಯೇಂದ್ರ ಇತ್ತೀಚಿಗೆ ಯತ್ನಾಳ್ ವಿಚಾರಕ್ಕೆ ಹೋಗದೆ ಅಂತರ ಕಾಯ್ದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದಾಗಲೂ ಬಿಜೆಪಿ ಹೈಕಮಾಂಡ್ ಯಾವುದೇ ನೋಟಿಸ್ ನೀಡಲ್ಲ, ಯತ್ನಾಳ್ರಿಂದ ಸ್ಪಷ್ಟನೆ ಪಡೆಯುವ ಕೆಲಸವನ್ನೂ ಮಾಡಲ್ಲ, ಇದೆಲ್ಲವನ್ನೂ ನೋಡಿದಾಗ ವಿಜಯೇಂದ್ರ ಸೇರಿದಂತೆ ಬಿಜೆಪಿಯಲ್ಲಿರುವ ಯತ್ನಾಳ್ ವಿರೋಧಿಗಳಿಗೆ ಒಂದು ಮಾಹಿತಿ ಸ್ಪಷ್ಟವಾಗಿದ್ದು, ಯತ್ನಾಳ್ ಮೇಲೆ ಹೈಕಮಾಂಡ್ ಕೃಪಾಕಟಾಕ್ಷವಿದೆ. ಅದೇ ಕಾರಣಕ್ಕೆ ಯತ್ನಾಳ್ ಬಿಜೆಪಿ ನಾಯಕರನ್ನೇ ಹಿಗ್ಗಾಮುಗ್ಗಾ ಜಾಡಿಸುತ್ತಿದ್ದಾರೆ. ಇದೀಗ ವೀಡಿಯೋ ಮ್ಯಾಟರ್ ಲೀಕ್ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ವೀಡಿಯೋ ಲೀಕ್ ಆದರೂ ಅಚ್ಚರಿಯೇನಿಲ್ಲ.