• Home
  • About Us
  • ಕರ್ನಾಟಕ
Sunday, January 25, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

Belagavi Politics: ಲಕ್ಷ್ಮಣ್‌ ಸವದಿಗೆ ತೀವ್ರ ನಿರಾಸೆ ತಂದಿಟ್ಟ ಜಾರಕಿಹೊಳಿ ಬ್ರದರ್ಸ್‌ ತಂತ್ರ

ಪ್ರತಿಧ್ವನಿ by ಪ್ರತಿಧ್ವನಿ
December 13, 2025
in Top Story, Uncategorized, ಕರ್ನಾಟಕ, ರಾಜಕೀಯ
0
Belagavi Politics: ಲಕ್ಷ್ಮಣ್‌ ಸವದಿಗೆ ತೀವ್ರ ನಿರಾಸೆ ತಂದಿಟ್ಟ ಜಾರಕಿಹೊಳಿ ಬ್ರದರ್ಸ್‌ ತಂತ್ರ
Share on WhatsAppShare on FacebookShare on Telegram

ಬೆಂಗಳೂರು : ಪ್ರತಿಷ್ಠಿತ ಬೆಳಗಾವಿಯ(Belagavi) ಡಿಸಿಸಿ ಬ್ಯಾಂಕ್‌ ಆಡಳಿತ ಚುಕ್ಕಾಣಿಯನ್ನು ತಮ್ಮ ಕೈಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಜಾರಕಿಹೊಳಿ(Jarakiholi) ಬ್ರದರ್ಸ್‌ ಇದೀಗ ಹೊಸ ರಾಜಕೀಯ ದಾಳ ಉರುಳಿಸುತ್ತಿದ್ದಾರೆ. ಈಗಾಗಲೇ ತಮ್ಮ ಕುಟುಂಬದ ಇಬ್ಬರಿಗೆ ನಿರ್ದೇಶಕ ಸ್ಥಾನ ಕಲ್ಪಿಸಿಕೊಡುವಲ್ಲಿ ಬ್ರದರ್ಸ್‌ ತಂತ್ರಗಾರಿಕೆ ಫಲ ನೀಡಿದೆ. ಈ ಮೂಲಕ ತಮ್ಮ ರಾಜಕೀಯ ಶಕ್ತಿಯನ್ನು ಎಲ್ಲರಿಗೂ ಜಾರಕಿಹೊಳಿ ಸಹೋದರರು ತೋರಿಸಿಕೊಟ್ಟಿದ್ದಾರೆ.

ADVERTISEMENT
DK Shivakumar: ದೆಹಲಿಗೆ ಹೋಗಿದ್ಯಾಕೆ ಅನ್ನೋ ಬಗ್ಗೆ ಏರ್​ಪೋರ್ಟ್​ನಲ್ಲಿ ಡಿಸಿಎಂ ಡಿಕೆಶಿ ರಿಯಾಕ್ಷನ್ #pratidhvani

ಡಿಸಿಸಿ ಬ್ಯಾಂಕ್‌ ಚುನಾವಣೆಯ ಆರಂಭದಿಂದಲೂ ತಾವು ಹಾಕಿದ್ದ ಯೋಜನೆ, ಯೋಚನೆಗಳಿಗ ಸಾಕಷ್ಟು ಎಫರ್ಟ್‌ ಹಾಕುವ ಮೂಲಕ ಗುರಿ ಸಾಧಿಸಿದ್ದರು. ಇದರ ಫಲವಾಗಿ ಡಿಸಿಸಿ ಬ್ಯಾಂಕ್‌ ಅನ್ನು ತಮ್ಮ ವಶಕ್ಕೆ ಪಡೆಯುವಲ್ಲಿ ಸಫಲರಾಗಿದ್ದರು. ಅಂದುಕೊಂಡಂತೆ ಲಿಂಗಾಯತರಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷಗಿರಿಯನ್ನು ಕಟ್ಟುವಲ್ಲಿಯೂ ಹಿಂದೆಬೀಳಲಿಲ್ಲ. ಈ ಮೂಲಕ ಎದುರಾಳಿಗಳಾಗಿದ್ದ ಮಾಜಿ ಸಂಸದ ರಮೇಶ್‌ ಕತ್ತಿ(Ŗamesh Katti) ಹಾಗೂ ಶಾಸಕ ಲಕ್ಷ್ಮಣ್‌ ಸವದಿಗೆ(Laxman Savadi) ಶಾಕ್‌ ನೀಡಿದ್ದರು.

ತೀವ್ರ ಜಿದ್ದಾಜಿದ್ದಿನ ಕಣವಾಗಿ ಪರಿಣಮಿಸಿದ್ದ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಗೆದ್ದು ಬೀಗಿರುವ ಜಾರಕಿಹೊಳಿ ಬ್ರದರ್ಸ್‌ ಮತ್ತೆ ವಿರೋಧಿಗಳಿಗೆ ಚೆಕ್‌ ಮೆಟ್‌ ನೀಡಲು ಮುಂದಾಗಿದ್ದಾರೆ. ಬೆಳಗಾವಿ ಡಿಸಿಸಿ ಬ್ಯಾಂಕ್ ನಿಂದ ಅಫೆಕ್ಸ್ ಬ್ಯಾಂಕ್ ಗೆ ಪ್ರತಿನಿಧಿ ಆಯ್ಕೆ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ. ಹೀಗಾಗಿ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿಗೆ ಇನ್ನಷ್ಟು ಹಿನ್ನಡೆಯಾಗುವಂತೆ ರಣತಂತ್ರ ರೂಪಿಸಿದ್ದಾರೆ.

ಈಗಾಗಲೇ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷಗಿರಿಯ ಮೇಲೆ ಕಣ್ಣಿಟ್ಟಿರುವ ಸವದಿಗೆ ಕನಸಿಗೆ ಸಾಹುಕಾರ್‌ ಟೀಂ ತಣ್ಣೀರು ಎರಚಿದೆ. ಅಪೆಕ್ಸ್‌ ಬ್ಯಾಂಕ್‌ಗೆ ಸವದಿ ಬದಲಿಗೆ ಸಚಿವ ಸತೀಶ್‌ ಜಾರಕಿಹೊಳಿ ಪುತ್ರ ರಾಹುಲ್‌ಗೆ ಚಾನ್ಸ್ ನೀಡಲಾಗಿದೆ. ಪ್ರಮುಖವಾಗಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅಣತಿಯಂತೆ ಈ ಆಯ್ಕೆ ಪ್ರಕ್ರಿಯೆ ನಡೆದಿದೆ. ಅಲ್ಲದೆ ಪ್ರತಿ ಡಿಸಿಸಿ ಬ್ಯಾಂಕ್‌ನಿಂದ ರಾಜ್ಯ ಅಪೆಕ್ಸ್‌ ಬ್ಯಾಂಕ್‌ಗೆ ಒಬ್ಬರನ್ನು ಪ್ರತಿನಿಧಿಗಳಾಗಿ ಆಯ್ಕೆ ಮಾಡಲಾಗುತ್ತದೆ.

Jarkiholi Brothers: ಲಕ್ಷ್ಮಣ್ ಸವದಿ ಆಸೆಗೆ ಜಾರಕಿಹೊಳಿ ಬ್ರದರ್ಸ್ ತಣ್ಣೀರು..! #LaxmanSavadi #congress

ಜಿಲ್ಲಾ ಪ್ರತಿನಿಧಿಗಳು ಸೇರಿ ಅಫೆಕ್ಸ್ ಬ್ಯಾಂಕ್ ಅಧ್ಯಕ್ಷರ ಆಯ್ಕೆಯನ್ನು ಮಾಡುವ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ರಾಜ್ಯದಲ್ಲಿನ ಪ್ರತಿಷ್ಠಿತ ಹುದ್ದೆಗಳಲ್ಲಿ ಅಫೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನವು ಒಂದಾಗಿದ್ದು, ಬಹುತೇಕ ಶಾಸಕರು, ಸಹಕಾರಿ ರಂಗದಲ್ಲಿ ಕೆಲಸ ಮಾಡಿರುವವರಿಗೆ ಅಧ್ಯಕ್ಷಗಿರಿ ಒಲಿಯುತ್ತ ಬಂದಿದೆ. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ ಈ ಹಿನ್ನೆಲೆಯಲ್ಲಿ ಈ ಬಾರಿ ಅಧ್ಯಕ್ಷ ಸ್ಥಾನ ಪಡೆಯಲೇಬೇಕೆಂದು ಸವದಿ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಜಿಲ್ಲಾ ರಾಜಕೀಯದಲ್ಲಿನ ಸಾಕಷ್ಟು ಬೆಳವಣಿಗೆಗಳಿಂದ ಇದೀಗ ಬ್ರದರ್ಸ್‌ ರಚಿಸಿದ ರಾಜಕೀಯ ತಂತ್ರಗಾರಿಕೆ ವರ್ಕೌಟ್‌ ಆಗಿದ್ದು, ಲಕ್ಷ್ಮಣ್‌ ಸವದಿಗೆ ತೀವ್ರ ನಿರಾಸೆಯಾದಂತಾಗಿದೆ.

Tags: Belagavi PoliticsBJPcongressPoliticsRahul JarakiholiSatish Jarakiholi
Previous Post

ಕರ್ನಾಟಕದಲ್ಲಿ ಶೇ.63ರಷ್ಟು ಭ್ರಷ್ಟಾಚಾರ: ಕಾಂಗ್ರೆಸ್‌ ವಿರುದ್ಧ ಮುಗಿಬಿದ್ದ ಬಿಜೆಪಿ

Next Post

ಅಪ್ಪನ ಬುದ್ಧಿ ಕಲಿಯದ ಮಗ: ಬೆಂಗಳೂರಿನಲ್ಲಿ ಶಾರುಖ್ ಖಾನ್ ಪುತ್ರನ ಅಸಭ್ಯ ವರ್ತನೆ

Related Posts

“ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಕೃಷಿ ಭೂಮಿ ಬಳಕೆಗೆ ಪರ್ಮಿಷನ್‌ ಬೇಕಿಲ್ಲ..!”
ಇದೀಗ

“ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಕೃಷಿ ಭೂಮಿ ಬಳಕೆಗೆ ಪರ್ಮಿಷನ್‌ ಬೇಕಿಲ್ಲ..!”

by ಪ್ರತಿಧ್ವನಿ
January 25, 2026
0

ಬೆಂಗಳೂರು: ನವೀಕರಿಸಬಹುದಾದ ಇಂಧನ ಯೋಜನೆಗಳು ಕೃಷಿ ಭೂಮಿಯಲ್ಲಿ ಕಾರ್ಯಾರಂಭಿಸುವುದುಕ್ಕೆ ಪೂರ್ವಾನುಮತಿ ಪಡೆಯುವ ಅವಶ್ಯತಕೆ ಇಲ್ಲ. ಇದಕ್ಕಾಗಿ ನೂತನ ವ್ಯವಸ್ಥೆಯನ್ನು ಕರ್ನಾಟಕ ಸರ್ಕಾರ ಜಾರಿಗೆ ತಂದಿದೆ, ಈ ಹೆಜ್ಜೆಯು...

Read moreDetails
ರಾಜಭವನ ಕಾಂಗ್ರೆಸ್ ಭವನ, ಆಗಿದ್ದನ್ನು ಸಿಎಂ ಸಿದ್ದರಾಮಯ್ಯ ಮರೆತರೆ..? : ಬೊಮ್ಮಾಯಿ ಕಿಡಿ

ರಾಜಭವನ ಕಾಂಗ್ರೆಸ್ ಭವನ, ಆಗಿದ್ದನ್ನು ಸಿಎಂ ಸಿದ್ದರಾಮಯ್ಯ ಮರೆತರೆ..? : ಬೊಮ್ಮಾಯಿ ಕಿಡಿ

January 25, 2026
ದೇಶದ ಅತಿದೊಡ್ಡ ರಾಬರಿ ಬಯಲು: 400 ಕೋಟಿ ಎಲ್ಲಿ ಹೋಯ್ತು..?:

ದೇಶದ ಅತಿದೊಡ್ಡ ರಾಬರಿ ಬಯಲು: 400 ಕೋಟಿ ಎಲ್ಲಿ ಹೋಯ್ತು..?:

January 25, 2026
ನಿದ್ರೆಯ ಕೊರತೆಯೇ ಹೊಟ್ಟೆಯ ಕೊಬ್ಬು ಹೆಚ್ಚಲು ಪ್ರಮುಖ ಕಾರಣ: ಇಲ್ಲಿದೆ ಮಹತ್ವದ ಮಾಹಿತಿ

ನಿದ್ರೆಯ ಕೊರತೆಯೇ ಹೊಟ್ಟೆಯ ಕೊಬ್ಬು ಹೆಚ್ಚಲು ಪ್ರಮುಖ ಕಾರಣ: ಇಲ್ಲಿದೆ ಮಹತ್ವದ ಮಾಹಿತಿ

January 25, 2026
ಸಾಂವಿಧಾನಿಕ ಪ್ರಜ್ಞೆ–ಪ್ರಜಾತಂತ್ರದ ಮೌಲ್ಯ

ಸಾಂವಿಧಾನಿಕ ಪ್ರಜ್ಞೆ–ಪ್ರಜಾತಂತ್ರದ ಮೌಲ್ಯ

January 25, 2026
Next Post
ಅಪ್ಪನ ಬುದ್ಧಿ ಕಲಿಯದ ಮಗ: ಬೆಂಗಳೂರಿನಲ್ಲಿ ಶಾರುಖ್ ಖಾನ್ ಪುತ್ರನ ಅಸಭ್ಯ ವರ್ತನೆ

ಅಪ್ಪನ ಬುದ್ಧಿ ಕಲಿಯದ ಮಗ: ಬೆಂಗಳೂರಿನಲ್ಲಿ ಶಾರುಖ್ ಖಾನ್ ಪುತ್ರನ ಅಸಭ್ಯ ವರ್ತನೆ

Recent News

ದೇಶದ ಅತಿದೊಡ್ಡ ರಾಬರಿ ಬಯಲು: 400 ಕೋಟಿ ಎಲ್ಲಿ ಹೋಯ್ತು..?:
Top Story

ದೇಶದ ಅತಿದೊಡ್ಡ ರಾಬರಿ ಬಯಲು: 400 ಕೋಟಿ ಎಲ್ಲಿ ಹೋಯ್ತು..?:

by ಪ್ರತಿಧ್ವನಿ
January 25, 2026
ನಿದ್ರೆಯ ಕೊರತೆಯೇ ಹೊಟ್ಟೆಯ ಕೊಬ್ಬು ಹೆಚ್ಚಲು ಪ್ರಮುಖ ಕಾರಣ: ಇಲ್ಲಿದೆ ಮಹತ್ವದ ಮಾಹಿತಿ
Top Story

ನಿದ್ರೆಯ ಕೊರತೆಯೇ ಹೊಟ್ಟೆಯ ಕೊಬ್ಬು ಹೆಚ್ಚಲು ಪ್ರಮುಖ ಕಾರಣ: ಇಲ್ಲಿದೆ ಮಹತ್ವದ ಮಾಹಿತಿ

by ಪ್ರತಿಧ್ವನಿ
January 25, 2026
ಸಾಂವಿಧಾನಿಕ ಪ್ರಜ್ಞೆ–ಪ್ರಜಾತಂತ್ರದ ಮೌಲ್ಯ
Top Story

ಸಾಂವಿಧಾನಿಕ ಪ್ರಜ್ಞೆ–ಪ್ರಜಾತಂತ್ರದ ಮೌಲ್ಯ

by ಪ್ರತಿಧ್ವನಿ
January 25, 2026
Daily Horoscope: ಇಂದು ವ್ಯವಹಾರದಲ್ಲಿ ಅತಿ ಹೆಚ್ಚು ಲಾಭ ಪಡೆಯುವ ರಾಶಿಗಳಿವು..!
Top Story

Daily Horoscope: ಇಂದು ವ್ಯವಹಾರದಲ್ಲಿ ಅತಿ ಹೆಚ್ಚು ಲಾಭ ಪಡೆಯುವ ರಾಶಿಗಳಿವು..!

by ಪ್ರತಿಧ್ವನಿ
January 25, 2026
Siddaramaiah: ಹಣ ನಮ್ಮದು ಹೆಸರು ಮಾತ್ರ ಕೇಂದ್ರದ್ದು: ಹುಬ್ಬಳ್ಳಿಯಲ್ಲಿ ಗುಡುಗಿದ ಸಿದ್ದರಾಮಯ್ಯ
Top Story

Siddaramaiah: ಹಣ ನಮ್ಮದು ಹೆಸರು ಮಾತ್ರ ಕೇಂದ್ರದ್ದು: ಹುಬ್ಬಳ್ಳಿಯಲ್ಲಿ ಗುಡುಗಿದ ಸಿದ್ದರಾಮಯ್ಯ

by ಪ್ರತಿಧ್ವನಿ
January 24, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

“ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಕೃಷಿ ಭೂಮಿ ಬಳಕೆಗೆ ಪರ್ಮಿಷನ್‌ ಬೇಕಿಲ್ಲ..!”

“ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಕೃಷಿ ಭೂಮಿ ಬಳಕೆಗೆ ಪರ್ಮಿಷನ್‌ ಬೇಕಿಲ್ಲ..!”

January 25, 2026
ರಾಜಭವನ ಕಾಂಗ್ರೆಸ್ ಭವನ, ಆಗಿದ್ದನ್ನು ಸಿಎಂ ಸಿದ್ದರಾಮಯ್ಯ ಮರೆತರೆ..? : ಬೊಮ್ಮಾಯಿ ಕಿಡಿ

ರಾಜಭವನ ಕಾಂಗ್ರೆಸ್ ಭವನ, ಆಗಿದ್ದನ್ನು ಸಿಎಂ ಸಿದ್ದರಾಮಯ್ಯ ಮರೆತರೆ..? : ಬೊಮ್ಮಾಯಿ ಕಿಡಿ

January 25, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!