• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕರ್ನಾಟಕ ಸರ್ಕಾರದಿಂದ ಬೆಂಗಳೂರು ಟೆಕ್ ಶೃಂಗಸಭೆಯ 28 ನೇ ಆವೃತ್ತಿ ಘೋಷಣೆ

ಪ್ರತಿಧ್ವನಿ by ಪ್ರತಿಧ್ವನಿ
August 11, 2025
in Top Story, ರಾಜಕೀಯ, ವಾಣಿಜ್ಯ
0
ಕರ್ನಾಟಕ ಸರ್ಕಾರದಿಂದ ಬೆಂಗಳೂರು ಟೆಕ್ ಶೃಂಗಸಭೆಯ 28 ನೇ ಆವೃತ್ತಿ ಘೋಷಣೆ
Share on WhatsAppShare on FacebookShare on Telegram

ADVERTISEMENT
  • ಬೆಂಗಳೂರಿನ ಬಿಐಇಸಿಯಲ್ಲಿ ಏಷ್ಯಾದ ಅತಿ ದೊಡ್ಡ ಶೃಂಗಸಭೆ ಆಯೋಜನೆ
    ಪ್ರಮುಖಾಂಶಗಳು:
  • ಜಾಗತಿಕ ಪಾಲ್ಗೊಳ್ಳುವಿಕೆಯೊಂದಿಗೆ ಬಿಐಇಸಿಯಲ್ಲಿ ಚೊಚ್ಚಲ ಬಿಟಿಎಸ್ 2025
  • `ಫ್ಯೂಚರೈಸ್’ ವಿಷಯದೊಂದಿಗೆ 10 ಸಮ್ಮೇಳನಾ ಟ್ರಾö್ಯಕ್‌ಗಳು
  • ಬಿಟಿಎಸ್ 2025 ರಲ್ಲಿ 1,00,000 ಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆ
  • ಪ್ರಮುಖವಾಗಿ ಜಾಗತಿಕ ತಂತ್ರಜ್ಞಾನ ಮತ್ತು ಸುಸ್ಥಿರತೆ ವಿಚಾರಗಳ ಮಂಥನ
  • ಬಿಟಿಎಸ್ 2025 ರ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದಿಂದ 200+ ಸಿಇಒಗಳೊಂದಿಗೆ ಉಪಹಾರದೊಂದಿಗೆ ಸಂವಾದ ಆಯೋಜನೆ
  • ಕರ್ನಾಟಕದಿಂದ ಟೆಕ್ ಲ್ಯಾಂಡ್‌ಸ್ಕೇಪ್ ಪ್ರೊಗ್ರೆಸ್ ರಿಪೋರ್ಟ್ ಬಿಡುಗಡೆ, ಕ್ಯಾಟಲಿಸ್ಟ್ ಆರಂಭ

ಬೆAಗಳೂರು, 11 ಆಗಸ್ಟ್ 2025: ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ & ಜೈವಿಕ ತಂತ್ರಜ್ಞಾನ ಮತ್ತು ಆರ್‌ಡಿಪಿಆರ್ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಇಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಏಷ್ಯಾದ ಅತಿ ದೊಡ್ಡ ತಂತ್ರಜ್ಞಾನ ಶೋ 28 ನೇ ಆವೃತ್ತಿಯ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯನ್ನು ಘೋಷಣೆ ಮಾಡಿದರು. ಈ ಶೃಂಗಸಭೆಯು ಬೆಂಗಳೂರಿನ 2025 ರ ನವೆಂಬರ್ 18 ರಿಂದ 20 ರವರೆಗೆ ನಡೆಯಲಿದೆ. ಈ ಬಿಟಿಎಸ್ 2025 ಮೂಲಕ ಬೆಂಗಳೂರು ನಗರ ಮತ್ತೊಮ್ಮೆ ಜಾಗತಿಕ ತಂತ್ರಜ್ಞಾನ ನಾವೀನ್ಯತೆ ಮತ್ತು ಸಹಭಾಗಿತ್ವದ ಮುಂಚೂಣಿ ಸ್ಥಾನದಲ್ಲಿ ನಿಲ್ಲಲಿದೆ.


ಹೆಚ್ಚುತ್ತಿರುವ ಬೇಡಿಕೆ ಮತ್ತು ಪ್ರಮಾಣವನ್ನು ಪೂರೈಸುವ ದೃಷ್ಟಿಯಿಂದ ಇದೇ ಮೊದಲ ಬಾರಿಗೆ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ (ಬಿಐಇಸಿ)ದಲ್ಲಿ ಈ ಶೃಂಗಸಭೆಯನ್ನು ಆಯೋಜಿಸಲಾಗುತ್ತಿದೆ. ಇಲ್ಲಿ ವಿಶ್ವ ದರ್ಜೆಯ ಮೂಲಸೌಕರ್ಯ, ವಿಸ್ತಾರವಾದ ಪ್ರದರ್ಶನ ಸಭಾಂಗಣಗಳು, ಅತ್ಯಾಧುನಿಕ ಸಮ್ಮೇಳನ ಸೌಲಭ್ಯಗಳು ಇರಲಿವೆ ಮತ್ತು ನಮ್ಮ ಮೆಟ್ರೋ ಮೂಲಕ ತಡೆರಹಿತವಾದ ಸಂಪರ್ಕವನ್ನು ಹೊಂದಿದೆ. ಇದು ಪರಿಸರ ಕಾಳಜಿಯನ್ನು ಹೊಂದಿರುವ ತಾಣವಾಗಿದ್ದು, ಮಹತ್ವಾಕಾಂಕ್ಷೆಯ ಬಿಟಿಎಸ್‌ಗೆ ನೆಚ್ಚಿನ ತಾಣವಾಗಿದೆ.


ಈ ಶೃಂಗಸಭೆಯಲ್ಲಿ 20,000+ ಸ್ಟಾರ್ಟಪ್‌ಗಳ ಸಂಸ್ಥಾಪಕರು, 1000+ ಹೂಡಿಕೆದಾರರು, 15,000+ ಪ್ರತಿನಿಧಿಗಳು, 600+ ಭಾಷಣಕಾರರು ಮತ್ತು 1,200+ ಪ್ರದರ್ಶಕರು ಸೇರಿದಂತೆ 1,00,000 ಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದಲ್ಲಿ 100 ಕ್ಕೂ ಹೆಚ್ಚು ಜ್ಞಾನಾಧಾರಿತ ಉಪನ್ಯಾಸಗಳು, 5,000+ ಕ್ಯುರೇಟೆಡ್ ಸಭೆಗಳು ಮತ್ತು 60+ ದೇಶಗಳು ಮತ್ತು ಭಾರತದ ಎಲ್ಲಾ 36 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.
ಈ ಬಾರಿಯ ಬಿಟಿಎಸ್ 2025 ರ ವಿಷಯ ‘ಈuಣuಡಿise’ ಆಗಿದೆ. ಇದು ಮುಂದಿನ ದಶಕಗಳನ್ನು ರೂಪಿಸುವ ತಂತ್ರಜ್ಞಾನ ಪರಿಸರ ವ್ಯವಸ್ಥೆಯ ವೈವಿಧ್ಯಮಯ ವಲಯಗಳಲ್ಲಿ ರೂಪಾಂತರಕ್ಕೆ ಚಾಲನೆ ನೀಡುವ ತಂತ್ರಜ್ಞಾನಗಳನ್ನು ಕಲ್ಪಿಸಲು, ನಾವೀನ್ಯತೆಯನ್ನು ಒದಗಿಸಲು ಮತ್ತು ಅವುಗಳನ್ನು ಕಾರ್ಯಗತಗೊಳಿಸುವ ಕ್ರಿಯೆಗೆ ಒಂದು ಪ್ರಬಲವಾದ ಆಹ್ವಾನವನ್ನು ನೀಡುತ್ತದೆ. ಬಿಟಿಎಸ್ 2025 ಸಮ್ಮೇಳನವು ಐಟಿ & ಡೀಪ್‌ಟೆಕ್, ಎಲೆಕ್ಟ್ರೋ-ಸೆಮಿಕಾನ್, ಡಿಜಿಟಲ್ ಹೆಲ್ತ್ & ಬಯೋಟೆಕ್, ಸ್ಟಾರ್ಟಪ್ ಇಕೋಸಿಸ್ಟಂ, ಗ್ಲೋಬಲ್ ಕೊಲಾಬರೇಶನ್ ಮತ್ತು ಇಂಡಿಯಾ –ಯುಎಸ್‌ಎ ಟೆಕ್ ಕಾನ್‌ಕ್ಲೇವ್ ಸೇರಿದಂತೆ 10 ಟ್ರಾö್ಯಕ್‌ಗಳನ್ನು ಒಳಗೊಂಡಿರುತ್ತದೆ. ಇದರ ಜೊತೆಗೆ ಎಐ ಯೂನಿವರ್ಸ್, ಫಿನ್‌ವರ್ಸ್, ಡಿಫೆನ್ಸ್ & ಸ್ಪೇಸ್‌ಟೆಕ್ ಮತ್ತು ಮೈ ಪ್ಲಾನೆಟ್ ಮೈ ಫ್ಯೂಚರ್ ಎಂಬ ಹೊಸ ಟ್ರಾö್ಯಕ್‌ಗಳನ್ನೂ ಒಳಗೊಂಡಿರುತ್ತದೆ. ಇದು ಸುಸ್ಥಿರತೆ ಮತ್ತು ಹವಾಮಾನ ತಂತ್ರಜ್ಞಾನದ ಮೇಲೆ ಕೇಂದ್ರೀಕೃತವಾಗಿರುತ್ತದೆ.

20000 ಕ್ಕೂ ಹೆಚ್ಚು ಸ್ಟಾರ್ಟಪ್ ಸಂಸ್ಥಾಪಕರು ಪಾಲ್ಗೊಳ್ಳಲಿರುವ ಗೇಮ್ ಚೇಂಜರ್ಸ್, ಉದ್ಯಮಿಗಳು, ಆಧ್ಯಾತ್ಮಿಕ ನಾಯಕರು, ಸಾಹಸಿಗರು, ಕಲಾವಿದರು ಮತ್ತು ಪ್ರವರ್ತಕರು ಸೇರಿದಂತೆ ವೈವಿಧ್ಯಮಯ ಸಮೂಹವನ್ನು ಒಂದೆಡೆ ಸೇರಿಸುವ ಒಂದು ಅದ್ಭುತವಾದ ಕಾರ್ಯಕ್ರಮವಾದ ಫ್ಯೂಚರ್ ಮೇರ‍್ಸ್ ಕಾನ್‌ಕ್ಲೇವ್ ಒಂದು ವಿಶೇಷ ಆಕರ್ಷಣೆಯಾಗಿರುತ್ತದೆ. ಮಲ್ಟಿ ಪೆವಿಲಿಯನ್ ಎಕ್ಸಿಬಿಷನ್ ಅಂತಾರಾಷ್ಟಿçÃಯ ಪಾಲ್ಗೊಳ್ಳುವಿಕೆ ಮತ್ತು ಉದ್ಯಮದ ಉಪಸ್ಥಿತಿಯಲ್ಲಿ ಗಮನಾರ್ಹವಾದ ಬೆಳವಣಿಗೆಯೊಂದಿಗೆ ವಲಯಗಳಲ್ಲಿ ಅದ್ಭುತ ನಾವೀನ್ಯತೆಗಳನ್ನು ಪ್ರದರ್ಶಿಸಲಿದೆ.
ಈ ಬಾರಿಯ ಪ್ರದರ್ಶನವು ಎಂದಿಗಿAತಲೂ ದೊಡ್ಡ ಮಟ್ಟದಲ್ಲಿ ಇರಲಿದ್ದು, ಹಲವಾರು ಪೆವಿಲಿಯನ್‌ಗಳಲ್ಲಿ ನಾವೀನ್ಯತೆ, ಸಹಯೋಗ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿನ ಆವಿಷ್ಕಾರಗಳನ್ನು ಪ್ರದರ್ಶನ ಮಾಡಲಿದೆ. 1,200 ಕ್ಕೂ ಹೆಚ್ಚು ಭಾರತೀಯ ಮತ್ತು ಜಾಗತಿಕ ಪ್ರದರ್ಶಕರು ಇದರಲ್ಲಿ ಪಾಲ್ಗೊಳ್ಳಲಿದ್ದು, ವೈವಿಧ್ಯಮಯ ವಲಯಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪರಿಚಯಿಸಲಾಗುತ್ತಿದೆ.


ಬಿಟಿಎಸ್ 2025 ಉದ್ಯಮದ ನಾಯಕರು, ನವೀನ ನವೋದ್ಯಮಗಳು, ಪ್ರಮುಖ ಸಂಶೋಧಕರು ಮತ್ತು ಪ್ರಮುಖ ಶೈಕ್ಷಣಿಕ ಪ್ರತಿನಿಧಿಗಳನ್ನು ಒಳಗೊಂಡ ಸಚಿವರ ನೇತೃತ್ವದ ಹಲವಾರು ದೇಶಗಳ ನಿಯೋಗಗಳನ್ನು ಆತಿಥ್ಯ ನೀಡಲಿದೆ. ಗ್ಲೋಬಲ್ ಇನ್ನೋವೇಶನ್ ಅಲಾಯನ್ಸ್ ಅಡಿಯಲ್ಲಿ ಒಂದೇ ವೇದಿಕೆಯಲ್ಲಿ ಸೇರಲಿರುವ ನಿಯೋಗಗಳು ಗಡಿಯಾಚೆಗಿನ ಸಹಭಾಗಿತ್ವಗಳು, ಜ್ಞಾನ ವಿನಿಮಯ ಮತ್ತು ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಬೆಳವಣಿಗೆಗೆ ಪೂರಕವಾದ ಅವಕಾಶಗಳ ಬಗ್ಗೆ ಚರ್ಚಿಸಲಿವೆ.
ಈ ಕಾರ್ಯಕ್ರಮವು ಸ್ಟಾರ್ಟಪ್ ಸ್ಪಿçಂಗ್‌ಬೋರ್ಡ್ ಮೂಲಕ ಸ್ಟಾರ್ಟಪ್‌ಗಳ ಮೇಲೆ ವಿಶೇಷ ಗಮನಹರಿಸಲಿದೆ. ಇದು ಹೂಡಿಕೆದಾರರು, ಮಾರ್ಗದರ್ಶಕರು ಮತ್ತು ಜಾಗತಿಕ ನೆಟ್‌ವರ್ಕ್ಗಳೊಂದಿಗೆ ಹೆಚ್ಚಿನ ಸಾಮರ್ಥ್ಯದ ಉದ್ಯಮಗಳನ್ನು ಸಂಪರ್ಕಿಸುವ ಕ್ಯುರೇಟೆಡ್ ಕಾರ್ಯಕ್ರಮವಾಗಿದೆ. ಚಟುವಟಿಕೆಗಳಲ್ಲಿ ಉನ್ನತ ವಿಸಿ ನೆಟ್‌ವರ್ಕ್ಗಳ ನೇತೃತ್ವದ ಹೂಡಿಕೆದಾರರ ಪಿಚಿಂಗ್ ಅವಧಿಗಳು, ಉದ್ಯಮ ತಜ್ಞರೊಂದಿಗೆ ಒನ್-ಆನ್-ಒನ್ ಮೆಂಟರಿಂಗ್ ಕ್ಲಿನಿಕ್ಸ್, ಪ್ರದರ್ಶನದಲ್ಲಿ ಮೀಸಲಾದ ಸ್ಟಾರ್ಟಪ್ ಪೆವಿಲಿಯನ್ ಮತ್ತು ವಿಶೇಷ ಹೂಡಿಕೆದಾರರ ಸಂಪರ್ಕ ಅವಕಾಶಗಳು ಸೇರಿವೆ. ಪ್ರತಿಷ್ಠಿತ ಸ್ಟಾರ್ಟಪ್ ಪ್ರಶಸ್ತಿಗಳ ಮೂಲಕ ಗುರುತಿಸುವಿಕೆಯೊಂದಿಗೆ ಸ್ಕೇಲಿಂಗ್, ನಿಧಿಸಂಗ್ರಹಣೆ ಮತ್ತು ಅಂತಾರಾಷ್ಟಿçÃಯ ಮಾರುಕಟ್ಟೆ ಪ್ರವೇಶದ ಕುರಿತು ಕೇಂದ್ರೀಕೃತ ವಿಷಯಾಧಾರಿತ ಅವಧಿಗಳಿಂದ ಸ್ಟಾರ್ಟಪ್‌ಗಳು ಪ್ರಯೋಜನವನ್ನು ಪಡೆಯಲಿವೆ.
ರೂರಲ್ ಐಟಿ ಕ್ವಿಜ್, ಬಯೋ ಕ್ವಿಜ್, ಬಯೋ ಪೋಸ್ರ‍್ಸ್, ಐಟಿ, ಬಯೋ ಮತ್ತು ಎಕ್ಸಿಬಿಟರ್ ಪ್ರಶಸ್ತಿ ಹಾಗೂ ಗ್ಲೋಬಲ್ ಲೀರ‍್ಸ್ ರಿಸೆಪ್ಷನ್ ಸೇರಿದಂತೆ ಇನ್ನೂ ಅನೇಕ ವಿಶೇಷ ಕಾರ್ಯಕ್ರಮಗಳು ಶೃಂಗಸಭೆಗೆ ಮೆರಗು ತರಲಿವೆ.


ಇಂದು ಬೆಳಗ್ಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ 200 ಕ್ಕೂ ಹೆಚ್ಚು ಉನ್ನತ ಮಟ್ಟದ ಸಂಸ್ಥೆಗಳ ಸಿಇಒಗಳೊಂದಿಗೆ ಉಪಾಹಾರ ಸಭೆ ನಡೆಯಿತು. ಬೆಂಗಳೂರು ಟೆಕ್ ಶೃಂಗಸಭೆ 2025 ಅನ್ನು ಔಪಚಾರಿಕವಾಗಿ ಘೋಷಣೆ ಮಾಡಲು ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕರ್ನಾಟಕ ತನ್ನ ನಾಯಕತ್ವ ಸ್ಥಾನವನ್ನು ಮುಂದುವರಿಸಲು ತೆಗೆದುಕೊಳ್ಳಬೇಕಾದ ಅಗತ್ಯ ಪ್ರಮುಖ ಕಾರ್ಯತಂತ್ರಗಳು ಮತ್ತು ಉಪಕ್ರಮಗಳ ಕುರಿತು ಈ ಸಂದರ್ಭದಲ್ಲಿ ಚರ್ಚಿಸಲಾಯಿತು. ನಾಸ್ಕಾಂ, ಐಇಎಸ್‌ಎ, ಟಿಐಇ ಬೆಂಗಳೂರು, ಎಬಿಎಲ್‌ಇ ಮತ್ತು ಎಬಿಎಐನಂತಹ ಪ್ರಮುಖ ಉದ್ಯಮಗಳು ಐಟಿ ಮತ್ತು ಡೀಪ್‌ಟೆಕ್, ಬಯೋಟೆಕ್ ಮತ್ತು ಹೆಲ್ತ್ಟೆಕ್, ಎಲೆಕ್ಟಾçನಿಕ್ಸ್ ಮತ್ತು ಸೆಮಿಕಂಡಕ್ಟರ್‌ಗಳು, ರಕ್ಷಣಾ ಮತ್ತು ಬಾಹ್ಯಾಕಾಶ ತಂತ್ರಜ್ಞಾನ, ಫಿನ್‌ಟೆಕ್ ಮತ್ತು ಎವಿಜಿಸಿಯ ಸಿಇಒಗಳು, ಸಂಸ್ಥಾಪಕರು ಮತ್ತು ನಾವೀನ್ಯಕಾರರು ಈ ಸಂವಾದದಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಉದ್ಯಮದ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳು ಮತ್ತು ಅವಲೋಕನಗಳಿಗೆ ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ & ಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಅರ್ಥಪೂರ್ಣವಾದ ಪ್ರತಿಕ್ರಿಯೆಗಳನ್ನು ನೀಡಿದರು.

ಹೊಸ ಹೊಸ ದೃಷ್ಟಿಕೋನ, ವಿಸ್ತೃತ ಪ್ರಮಾಣ ಮತ್ತು ಜಾಗತಿಕ ದೃಷ್ಟಿಕೋನದೊಂದಿಗೆ ಬಿಟಿಎಸ್ 2025 ಭಾರತ ಮತ್ತು ಜಗತ್ತಿಗೆ ತಂತ್ರಜ್ಞಾನ, ನಾವೀನ್ಯತೆ ಮತ್ತು ಸುಸ್ಥಿರ ಅಭಿವೃದ್ಧಿಯ ಭವಿಷ್ಯವನ್ನು ರೂಪಿಸುವಲ್ಲಿ ಕರ್ನಾಟಕದ ನಾಯಕತ್ವವನ್ನು ಮತ್ತಷ್ಟು ಬಲಪಡಿಸಲು ಸಜ್ಜಾಗಿದೆ ಎಂದು ಅವರು ತಿಳಿಸಿದರು.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, “ಭಾರತದ ಬೆಳವಣಿಗೆಯ ಯಶೋಗಾಥೆಯಲ್ಲಿ ಕರ್ನಾಟಕ ನಿರಂತರವಾಗಿ ಸಕ್ರಿಯ ಪಾಲ್ಗೊಳ್ಳುವ ಮೂಲಕ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಈ ವಿಚಾರದಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ. 1997 ರಲ್ಲಿ ಭಾರತದ ಮೊದಲ ಐಟಿ ನೀತಿಯನ್ನು ಜಾರಿಗೆ ತರುವುದರಿಂದ ಹಿಡಿದು 2024 ರಲ್ಲಿ ಕ್ವಾಂಟಮ್ ತಂತ್ರಜ್ಞಾನ ರೋಡ್‌ಮ್ಯಾಪ್ ಅನ್ನು ಪರಿಚಯಿಸುವ ಮೂಲಕ ಈ ಕ್ಷೇತ್ರದಲ್ಲಿ ಇಂತಹ ದಿಟ್ಟ ಹೆಜ್ಜೆ ಇಟ್ಟ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ನಾವು ನಿರಂತರವಾಗಿ ಭವಿಷ್ಯದ ಬೆಳವಣಿಗೆಯನ್ನು ನಿರೀಕ್ಷಿಸಿದ್ದೇವೆ ಮತ್ತು ಅದಕ್ಕೆ ತಕ್ಕಂತೆ ನೀತಿಗಳನ್ನು ಸಿದ್ಧಪಡಿಸಿದ್ದೇವೆ. ಭಾರತದ ಸಾಫ್ಟ್ವೇರ್ ರಫ್ತಿನ ಶೇ.44 ರಷ್ಟು ನಮ್ಮ ಪಾಲಿದ್ದು, 18,300 ಕ್ಕೂ ಹೆಚ್ಚು ಸ್ಟಾರ್ಟಪ್‌ಗಳು, 875+ ಜಾಗತಿಕ ಸಾಮರ್ಥ್ಯ ಕೇಂದ್ರಗಳು ಮತ್ತು ದೇಶದ ಸುಮಾರು ಅರ್ಧದಷ್ಟು ಎಐ ಪ್ರತಿಭೆಗಳೊಂದಿಗೆ ನಾವು ಕೇವಲ ಉದಯೋನ್ಮುಖ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿಲ್ಲ. ಇದರ ಬದಲಿಗೆ ಅವುಗಳನ್ನು ವ್ಯಾಖ್ಯಾನಿಸುತ್ತಿದ್ದೇವೆ. ನಾವೀನ್ಯತೆ, ಪ್ರತಿಭೆ ಮತ್ತು ತಂತ್ರಜ್ಞಾನದಲ್ಲಿನ ನಾಯಕತ್ವಕ್ಕಾಗಿ ಜಗತ್ತು ನೋಡುವ ಸ್ಥಳವಾಗಿ ಕರ್ನಾಟಕವನ್ನು ಮಾಡುವುದು ನಮ್ಮ ಧ್ಯೇಯವಾಗಿದೆ’’ ಎಂದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ, `ನಾವು ಎಲ್ಲರನ್ನೂ ಒಳಗೊಳ್ಳುವಿಕೆ, ಸಬಲೀಕರಣ ಮತ್ತು ಹಂಚಿಕೆಯ ಸಮೃದ್ಧಿಯಲ್ಲಿ ನೆಲೆಯೂರಿರುವ ಕರ್ನಾಟಕವನ್ನು ನಿರ್ಮಾಣ ಮಾಡುತ್ತಿದ್ದೇವೆ. ನೀತಿಗಳನ್ನೂ ಮೀರಿದ ನಮ್ಮ ಗಮನ ನಂಬಿಕೆ, ಸಹಯೋಗ ಮತ್ತು ನೈಜ ಫಲಿತಾಂಶಗಳ ಮೇಲಿದೆ. ನಮ್ಮ ಮೆಟ್ರೋ ಮತ್ತು ಉಪನಗರ ರೈಲು ವಿಸ್ತರಣೆಯಿಂದ ಹಿಡಿದು ಎಲಿವೇಟೆಡ್ ಕಾರಿಡಾರ್‌ಗಳು ಮತ್ತು ಬೆಂಗಳೂರು ಬ್ಯುಸಿನೆಸ್ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸುವುದರತ್ತ ನಮ್ಮ ಚಿತ್ತ ಹರಿದಿದೆ. ವ್ಯಾಪಾರ ಮಾಡಲು ಸುಲಭವಾದ ಸುಧಾರಣೆಗಳು ಮತ್ತು ಕೌಶಲ್ಯ ಉಪಕ್ರಮಗಳ ಜೊತೆಗೆ ಜನರನ್ನು ಉದ್ದೇಶಗಳಿಗೆ ಸಂಪರ್ಕಿಸುವುದು ಮತ್ತು ಬೆಂಗಳೂರು ನಗರವನ್ನು ವಿಶ್ವ ಮಟ್ಟದಲ್ಲಿ ಅತ್ಯುತ್ತಮ ವಾಸಯೋಗ್ಯ ನಗರವನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದೇವೆ. ಈ ಮೂಲಕ ಕರ್ನಾಟಕವನ್ನು ಪ್ರತಿಭೆ, ಹೂಡಿಕೆ ಮತ್ತು ನಾವೀನ್ಯತೆಯಲ್ಲಿ ಜಾಗತಿಕ ಕೇಂದ್ರವನ್ನಾಗಿಸುವುದು ನಮ್ಮ ಪ್ರಮುಖ ಧ್ಯೇಯ ಮತ್ತು ಗುರಿಯಾಗಿದೆ’’ ಎಂದು ಅಭಿಪ್ರಾಯಪಟ್ಟರು.

CM Siddaramaiah :  ಸದನದಲ್ಲಿ ಸಿಎಂ ಸಿದ್ದರಾಮಯ್ಯ ಆರ್ ಅಶೋಕ್ ಮಾತುಗಳು #pratidhvani

ಕರ್ನಾಟಕ ಸರ್ಕಾರದ ಐಟಿ & ಎಲೆಕ್ಟಾçನಿಕ್ಸ್ ವಿಷನ್ ಗ್ರೂಪ್‌ನ ಅಧ್ಯಕ್ಷ ಎಸ್.ಗೋಪಾಲಕೃಷ್ಣನ್ (ಕ್ರಿಸ್), ಸ್ಟಾರ್ಟಪ್ಸ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಸ್ಪೇಸ್ ವಿಷನ್ ಗ್ರೂಪ್ ಅಧ್ಯಕ್ಷ ಡಾ.ಎ.ಎಸ್.ಕಿರಣ್ ಕುಮಾರ್ ಸೇರಿದಂತೆ ವಿವಿಧ ವಿಷನ್ ಗ್ರೂಪ್‌ಗಳ ಮುಖ್ಯಸ್ಥರು ಈ ಸಂದರ್ಭದಲ್ಲಿ ಮಾತನಾಡಿ ಪ್ರಸ್ತುತ ವಿವಿಧ ವಲಯಗಳ ಲ್ಯಾಂಡ್‌ಸ್ಕೇಪ್, ಅವಕಾಶಗಳು ಮತ್ತು ಕಾರ್ಯತಂತ್ರದ ನಿರ್ದೇಶನಗಳ ಕುರಿತು ಮೌಲ್ಯಯುತವಾದ ಒಳನೋಟಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕಿಯೋನಿಕ್ಸ್ ಅಧ್ಯಕ್ಷರಾದ ಶರತ್ ಕುಮಾರ್ ಬಚ್ಚೇಗೌಡ ಮತ್ತು ಕೆಡಿಇಎಂ ಅಧ್ಯಕ್ಷರಾದ ಬಿವಿ ನಾಯ್ದು ಉಪಸ್ಥಿತರಿದ್ದರು. ಈ ಸಂವಾದಕ್ಕೂ ಮುನ್ನ ಕರ್ನಾಟಕ ಸರ್ಕಾರದ ಎಲೆಕ್ಟಾçನಿಕ್ಸ್, ಐಟಿ, ಬಿಟಿ ಮತ್ತು ಎಸ್&ಟಿ ಕಾರ್ಯದರ್ಶಿ ಡಾ.ಏಕ್‌ರೂಪ್ ಕೌರ್, ಐಎಎಸ್ ಅವರು ಕಳೆದ ವರ್ಷ ಮುಖ್ಯಮಂತ್ರಿಗಳು ನಡೆಸಿದ ಉಪಹಾರ ಸಂವಾದದಲ್ಲಿನ ಚರ್ಚೆಗಳ ಕುರಿತಾದಕ್ರಮ ತೆಗೆದುಕೊಂಡ ವರದಿ’ಯನ್ನು ಮಂಡಿಸಿದರು. ಈ ವರದಿಯು ಕರ್ನಾಟಕ ಸರ್ಕಾರವು ಉದ್ಯಮದೊಂದಿಗೆ ನಿರಂತರವಾಗಿ ತೊಡಗಿಸಿಕೊಳ್ಳುವಿಕೆಯೊಂದಿಗೆ ಪಾರದರ್ಶಕ, ರಚನಾತ್ಮಕ ಮತ್ತು ಫಲಿತಾಂಶ ಆಧಾರಿತ ಸಹಯೋಗದ ಬಗ್ಗೆ ಹೊಂದಿರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.


ಇದೇ ವೇಳೆ, ಡಾ.ಕೌರ್ ಅವರು, ಬೆಂಗಳೂರು ಟೆಕ್ ಶೃಂಗಸಭೆ 2025 ರ ಸಮಗ್ರ ಚಿತ್ರಣವನ್ನು ವಿವರಿಸಿದರು. ಈ ವರ್ಷದ ಆವೃತ್ತಿಯ ದೃಷ್ಟಿಕೋನದ ಬಗ್ಗೆ ವಿವರಿಸಿದ ಅವರು, ಕಾರ್ಯಕ್ರಮದ ಸ್ವರೂಪ, ವ್ಯಾಪ್ತಿ ಮತ್ತು ಜಾಗತಿಕ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಹಲವಾರು ಹೊಸ ಉಪಕ್ರಮಗಳ ಬಗ್ಗೆಯೂ ವಿವರಣೆ ನೀಡಿದರು.
ಕರ್ನಾಟಕ ಸರ್ಕಾರದ ಎಲೆಕ್ಟಾçನಿಕ್ಸ್, ಐಟಿ ಮತ್ತು ಬಿಟಿ ಇಲಾಖೆಯು ಕರ್ನಾಟಕದಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು (ಜಿಸಿಸಿ) ಪ್ರೋತ್ಸಾಹಿಸಲು ಮೀಸಲಾಗಿರುವ ಸುಲಭ ವ್ಯವಹಾರ ಕೋಶವಾದ ಕ್ಯಾಟಲಿಸ್ಟ್ ಅನ್ನು ಆರಂಭಿಸುವುದಾಗಿ ಘೋಷಣೆ ಮಾಡಲಾಯಿತು. ಈ ಉಪಕ್ರಮವು ರಾಜ್ಯದ ಜಿಸಿಸಿ ನೀತಿ 2024-2029 ರೊಂದಿಗೆ ಹೊಂದಿಕೊಂಡಿದ್ದು, ಹೊಸ ಹೂಡಿಕೆಗಳನ್ನು ಆಕರ್ಷಿಸುವ ಮತ್ತು ಸುಗಮಗೊಳಿಸುವ, ಸೆಟಪ್ ಪ್ರಕ್ರಿಯೆಗಳನ್ನು ವೇಗಗೊಳಿಸುವ ಮತ್ತು ವಿಶಾಲವಾದ ನಾವೀನ್ಯತೆ ಪರಿಸರ ವ್ಯವಸ್ಥೆಯೊಂದಿಗೆ ಜಿಸಿಸಿಗಳ ಸಹಯೋಗವನ್ನು ಗಾಢವಾಗಿಸುವ ಗುರಿಯನ್ನು ಹೊಂದಿದೆ.
ನವೆಂಬರ್ ತಿಂಗಳು ಸಮೀಪಿಸುತ್ತಿರುವಂತೆಯೇ ಬೆಂಗಳೂರು ಮತ್ತೊಮ್ಮೆ ತಂತ್ರಜ್ಞಾನದ ಜಗತ್ತನ್ನು ಸ್ವಾಗತಿಸಲು ಸಜ್ಜಾಗಿದೆ. ನಮ್ಮ ನಾಳೆಯನ್ನು ರೂಪಿಸುವ ಆಲೋಚನೆಗಳನ್ನು ಮಾಡುವ ತಜ್ಞರು, ನಾವೀನ್ಯಕಾರರು ಮತ್ತು ನಾಯಕರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಲಿದ್ದಾರೆ.

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಸಚಿವ ಸ್ಥಾನಕ್ಕೆ ಕೆಎನ್‌ ರಾಜಣ್ಣ ರಾಜೀನಾಮೆ

Next Post

ಬಾಳೆಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ 299 ಯೂರಿಯಾ ತುಂಬಿದ್ದ ಲಾರಿ ವಶ.

Related Posts

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!
Top Story

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

by ಪ್ರತಿಧ್ವನಿ
April 22, 2026
0

ಮುಂಬೈ : ಟ್ರಾಪೀಕ್‌ ಕಿರಿ ಕಿರಿ ಅನುಭವಿಸಿದ ಮಹಿಳೆಯೊಬ್ಬಳು ಪೊಲೀಸ್‌ ಅಧಿಕಾರಿ ಹಾಗೂ ಇಲ್ಲಿನ ಸಚಿವರಿಗೆ ಖಡಕ್‌ ಕ್ಲಾಸ್‌ ತೆಗೆದುಕೊಂಡ ಘಟನೆ ನಡೆದಿದೆ. ಮಂಗಳವಾರ ವರ್ಲಿ ಪ್ರದೇಶದಲ್ಲಿ...

Read moreDetails
ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?

ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?

April 22, 2026
ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

April 22, 2026
ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

April 22, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

April 21, 2026
Next Post
ಬಾಳೆಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ 299 ಯೂರಿಯಾ ತುಂಬಿದ್ದ ಲಾರಿ ವಶ.

ಬಾಳೆಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ 299 ಯೂರಿಯಾ ತುಂಬಿದ್ದ ಲಾರಿ ವಶ.

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada