ಕರೋನಾ 4ನೇ ಅಲೆ ಆತಂಕದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಸಭೆ ಕರೆದಿದ್ದಾರೆ.
ಹೌದು ಇಂದು ಸೋಮವಾರ ಮಧ್ಯಾಹ್ನ 12.30ಕ್ಕೆ ಕರೋನ ನಾಲ್ಕನೇ ಅಲೆ ಕುರಿತು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಿಗದಿಯಾಗಿದೆ. ಸಚಿವರಾದ ಆರ್.ಅಶೋಕ್, ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಡಾ.ಕೆ.ಸುಧಾಕರ್, ತಾಂತ್ರಿಕ ತಜ್ಞರ ಸಲಹಾ ಸಮಿತಿ ಅಧ್ಯಕ್ಷರು, ಸದಸ್ಯರು, ವಿವಿಧ ಇಲಾಖೆಗಳ ಉನ್ನತಾಧಿಕಾರಿಗಳು ಭಾಗವಹಿಸಲಿದ್ದಾರೆ.

ವಿವಿಧ ರಾಜ್ಯಗಳಲ್ಲಿ ಹರಡಿರುವ ಸೋಂಕು ಪ್ರಮಾಣ, ರಾಜ್ಯದ ಪರಿಸ್ಥಿತಿ ಅವಲೋಕನ, ತಜ್ಞರು ನೀಡಿದ ಎಚ್ಚರಿಕೆ, ಕೇಂದ್ರ ಸರ್ಕಾರದ ಸೂಚನೆ, ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಪ್ರಕಾರ ಕೈಗೊಂಡ ಕ್ರಮಗಳ ಅನುಷ್ಠಾನ ಇತ್ಯಾದಿ ಅಂಶಗಳನ್ನು ಸಿಎಂ ಬೊಮ್ಮಾಯಿ ಅವಲೋಕಿಸಿ ಮುಂದಿನ ಕ್ರಮಗಳ ಬಗ್ಗೆ ತೀರ್ಮಾನಿಸಲಿದ್ದಾರೆ ಎನ್ನಲಾಗಿದೆ.