• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, July 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಹಿಂದಿ ಹೇರಿಕೆ ವಿರುದ್ಧ ಕರವೇಯಿಂದ #ಹಿಂದಿಹೇರಿಕೆನಿಲ್ಲಿಸಿ ಅಭಿಯಾನ

Any Mind by Any Mind
September 12, 2021
in ಕರ್ನಾಟಕ
0
ಹಿಂದಿ ಹೇರಿಕೆ ವಿರುದ್ಧ ಕರವೇಯಿಂದ #ಹಿಂದಿಹೇರಿಕೆನಿಲ್ಲಿಸಿ ಅಭಿಯಾನ
Share on WhatsAppShare on FacebookShare on Telegram

ಹಿಂದಿಯನ್ನು ಹಿಂದಿಯೇತರ ಭಾಷಿಕ ಸಮುದಾಯಗಳ ಮೇಲೆ ಹೇರುವ ಒಕ್ಕೂಟ ಸರ್ಕಾರದ ದುರುದ್ದೇಶಗಳನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ ಸೆಪ್ಟೆಂಬರ್ 14ರಂದು ಬೆಳಿಗ್ಗೆ ಹತ್ತು ಗಂಟೆಯಿಂದ ರಾತ್ರಿ ಹತ್ತು ಗಂಟೆಯವರೆಗೆ #StopHindiImposition ಮತ್ತು #ಹಿಂದಿಹೇರಿಕೆನಿಲ್ಲಿಸಿ ಎಂಬ ಟ್ವಿಟರ್ ಅಭಿಯಾನ ಹಮ್ಮಿಕೊಂಡಿದೆ.

ADVERTISEMENT

ಹಿಂದಿ ದಿವಸ, ಹಿಂದಿ ಸಪ್ತಾಹ, ಹಿಂದಿ ಪಕ್ವಾಡಾ ಇತ್ಯಾದಿ ಹೆಸರುಗಳಲ್ಲಿ ನಮ್ಮೆಲ್ಲರ ತೆರಿಗೆ ಹಣವನ್ನು ಬಳಸಿ ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿ ಹೇರಲಾಗುತ್ತಿದೆ. ಇದನ್ನು ಖಂಡಿಸಿ, ಎಲ್ಲ ಕನ್ನಡಿಗರು #StopHindiImposition ಮತ್ತು #ಹಿಂದಿಹೇರಿಕೆನಿಲ್ಲಿಸಿ ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡುವಂತೆ ಕರವೇ ಕೋರಿಕೊಂಡಿದೆ.

ಬಹುಭಾಷೆಗಳನ್ನು ಆಡುವ ಜನರ ನಾಡಾದ ಭಾರತವು ವಿವಿಧತೆಯಲ್ಲಿ ಏಕತೆಯನ್ನು ಪ್ರತಿಪಾದಿಸುತ್ತದೆ. ಆದರೆ ಇಡೀ ದೇಶಕ್ಕೆ ಒಂದೇ ಭಾಷೆಯಿರಬೇಕು ಎಂಬ ಕುತ್ಸಿತ ಮನಸ್ಥಿತಿಯವರಿಂದಾಗಿ ಹಿಂದಿಹೇರಿಕೆ ಎಗ್ಗಿಲ್ಲದೆ ಸಾಗುತ್ತಿದೆ. ಹಿಂದಿಹೇರಿಕೆಯು ಕೇವಲ ಭಾಷೆಯ ಹೇರಿಕೆಯ ವಿಷಯ ಮಾತ್ರವಲ್ಲ. ಇದು ಕನ್ನಡಿಗರೂ ಸೇರಿದಂತೆ ದೇಶದ ಇತರ ಭಾಷಿಕರ ಉದ್ಯೋಗಗಳನ್ನು ಕಿತ್ತುಕೊಳ್ಳುತ್ತಿದೆ. ಇತರ ಭಾಷಾ ಸಮುದಾಯಗಳ ಸಂಸ್ಕೃತಿ, ಪರಂಪರೆಯನ್ನು ನಗಣ್ಯಗೊಳಿಸುತ್ತಿದೆ. ಇತರ ಭಾಷಿಕರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿ ಮಾಡುತ್ತಿದೆ ಎಂದು ಕರವೇ ಹೇಳಿದೆ.

ಸಮಸ್ತ ಕನ್ನಡಿಗರು, ವಿವಿಧ ಕ್ಷೇತ್ರಗಳ ಗಣ್ಯರು ಸೆಪ್ಟೆಂಬರ್ 14 ರಂದು ಟ್ವಿಟರ್, ಫೇಸ್ ಬುಕ್, ಇನ್ಸ್ಟಾ ಗ್ರಾಂ, ವಾಟ್ಸಾಪ್, ಕ್ಲಬ್ ಹೌಸ್ ಸೇರಿದಂತೆ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿ ದಿವಸ ಆಚರಣೆ ವಿರುದ್ಧ ಧ್ವನಿ ಎತ್ತಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಮನವಿ ಮಾಡುತ್ತದೆ. ( 7/7)

— ನಾರಾಯಣಗೌಡ್ರು.ಟಿ.ಎ | ‌Narayanagowdru T.A. (@narayanagowdru) September 12, 2021

ನಾವು ಯಾವ ಭಾಷೆಯ ಅಥವಾ ಭಾಷಿಕರ ವಿರೋಧಿಗಳಲ್ಲ. ಆದರೆ ಸರ್ಕಾರವೇ ಒಂದು ಭಾಷೆಯನ್ನು, ನಮ್ಮದೇ ತೆರಿಗೆ ಹಣ ಬಳಸಿ, ವ್ಯವಸ್ಥಿತವಾಗಿ ನಮ್ಮ ಮೇಲೆ ಹೇರುವುದನ್ನು ಸಹಿಸುವುದು ಸಾಧ್ಯವಿಲ್ಲ. ಹಿಂದಿ ಹೇರಿಕೆಯು ದೇಶದ ಐಕ್ಯತೆಯನ್ನು ಒಡೆಯುತ್ತಿದೆ ಎಂಬುದನ್ನು ಒಕ್ಕೂಟ ಸರ್ಕಾರ ಈಗಲಾದರೂ ಅರ್ಥ ಮಾಡಿಕೊಳ್ಳಬೇಕು.  ಸೆಪ್ಟೆಂಬರ್ 14ರಂದು ರಾಜ್ಯದ ಎಲ್ಲ ಜಿಲ್ಲೆ, ತಾಲ್ಲೂಕು, ಹೋಬಳಿ ಕೇಂದ್ರಗಳಲ್ಲಿ ಸಾವಿರಾರು ಬ್ಯಾಂಕ್ ಗಳ ಮುಂಭಾಗ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ಸ್ಥಳೀಯ ಶಾಸಕರು, ಸಂಸದರಿಗೆ ಆಗ್ರಹ ಪತ್ರಗಳನ್ನು ನೀಡಲಿದ್ದಾರೆ ಎಂದು ಕರವೇ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಸಮಸ್ತ ಕನ್ನಡಿಗರು, ವಿವಿಧ ಕ್ಷೇತ್ರಗಳ ಗಣ್ಯರು ಸೆಪ್ಟೆಂಬರ್ 14 ರಂದು ಟ್ವಿಟರ್, ಫೇಸ್ ಬುಕ್, ಇನ್ಸ್ಟಾ ಗ್ರಾಂ, ವಾಟ್ಸಾಪ್, ಕ್ಲಬ್ ಹೌಸ್ ಸೇರಿದಂತೆ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿ ದಿವಸ ಆಚರಣೆ ವಿರುದ್ಧ ಧ್ವನಿ ಎತ್ತಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಮನವಿ ಮಾಡಿದೆ.

Tags: #StopHindiImposition#ಹಿಂದಿಹೇರಿಕೆನಿಲ್ಲಿಸಿಕರವೇಕರ್ನಾಟಕ ರಕ್ಷಣಾ ವೇದಿಕೆ ಸೆಪ್ಟೆಂಬರ್ 14ರಂದು ಬೆಳಿಗ್ಗೆ ಹತ್ತು ಗಂಟೆಯಿಂದ ರಾತ್ರಿ ಹತ್ತು ಗಂಟೆಯವರೆಗೆ #StopHindiImposition ಮತ್ತು #ಹಿಂದಿಹೇರಿಕೆನಿಲ್ಲಿಸಿ ಎಂಬ ಟ್ವಿಟರ್ ಅಭಿಯಾನ ಹಮ್ಮಿಕೊಂಡಿದೆ.ಹಿಂದಿ ಹೇರಿಕೆಹಿಂದಿಯನ್ನು ಹಿಂದಿಯೇತರ ಭಾಷಿಕ ಸಮುದಾಯಗಳ ಮೇಲೆ ಹೇರುವ ಒಕ್ಕೂಟ ಸರ್ಕಾರದ ದುರುದ್ದೇಶಗಳನ್ನು ಖಂಡಿಸಿ
Previous Post

ಚರ್ಚ್-ಮಸೀದಿಗಳನ್ನು ಒಡೆಯಬಹುದು, ಅವುಗಳನ್ನು ದೇವಸ್ಥಾನದೊಂದಿಗೆ ಹೋಲಿಸಬೇಡಿ –ಪ್ರತಾಪ್ ಸಿಂಹ

Next Post

ಕೇರಳದ ಕಣ್ಣೂರು ವಿವಿಯಲ್ಲಿ ಸಾವರ್ಕರ್ & ಗೋಳ್ವಾಲ್ಕರ್ ಬಗ್ಗೆ ಪಠ್ಯ ಕ್ರಮ: ಕೇಸರೀಕರಣ ಆಗುತ್ತಿದೆಯೇ ದೇವರ ನಾಡು.!?

Related Posts

ಹ್ಯಾಟ್ರಿಕ್ ಹೀರೋ ಜನ್ಮದಿನ: ಶಿವಣ್ಣನ ಅಭಿಮಾನಿಗಳಿಗೆ ‘ಹೆಲ್ತ್ ಕಾರ್ಡ್’ ಜೊತೆ 4 ಚಿತ್ರಗಳ ಭರ್ಜರಿ ಅಪ್ಡೇಟ್!
Top Story

ಹ್ಯಾಟ್ರಿಕ್ ಹೀರೋ ಜನ್ಮದಿನ: ಶಿವಣ್ಣನ ಅಭಿಮಾನಿಗಳಿಗೆ ‘ಹೆಲ್ತ್ ಕಾರ್ಡ್’ ಜೊತೆ 4 ಚಿತ್ರಗಳ ಭರ್ಜರಿ ಅಪ್ಡೇಟ್!

by ಪ್ರತಿಧ್ವನಿ
July 12, 2026
0

‘ಹ್ಯಾಟ್ರಿಕ್ ಹೀರೋ’ ಡಾ. ಶಿವರಾಜ್‌ಕುಮಾರ್ ಅವರ 64ನೇ ಜನ್ಮದಿನದ ಅಂಗವಾಗಿ ಅಭಿಮಾನಿಗಳಿಗೆ ಹಾಗೂ ಸಿನಿಪ್ರೇಕ್ಷಕರಿಗೆ ಅಭೂತಪೂರ್ವ ಕೊಡುಗೆಗಳ ಮಹಾಪೂರವೇ ಹರಿದುಬಂದಿದೆ. ಒಂದು ಕಡೆ ಜನಸಾಮಾನ್ಯರ ಆರೋಗ್ಯ ಭದ್ರತೆಗಾಗಿ...

Read moreDetails
ಮೈಸೂರಿನಲ್ಲಿ ಉಳಿಯುವುದು ಎಸ್.ಜಾನಕಿಯವರ ಕೊನೆ ಆಸೆ: ಸಿಎಂ ಡಿ.ಕೆ ಶಿವಕುಮಾರ್

ಮೈಸೂರಿನಲ್ಲಿ ಉಳಿಯುವುದು ಎಸ್.ಜಾನಕಿಯವರ ಕೊನೆ ಆಸೆ: ಸಿಎಂ ಡಿ.ಕೆ ಶಿವಕುಮಾರ್

July 12, 2026
30 ದಿನಗಳು..50ಕ್ಕೂ ಹೆಚ್ಚು ನಿರ್ಧಾರಗಳು: ಹೇಗಿತ್ತು ಡಿ.ಕೆ ಶಿವಕುಮಾರ್ ಸರ್ಕಾರದ ಮೊದಲ ತಿಂಗಳು..?

ಬೆಂಗಳೂರು ದಕ್ಷಿಣದಲ್ಲೇ ಎರಡನೇ ವಿಮಾನ ನಿಲ್ದಾಣ: ಸಿಎಂ ಡಿ.ಕೆ ಶಿವಕುಮಾರ್

July 12, 2026
ಶಿವಣ್ಣ ಹುಟ್ಟುಹಬ್ಬಕ್ಕೆ ಬಿಗ್ ಅಪ್ಡೇಟ್‌: ಆರ್.ಚಂದ್ರು ಜೊತೆ ಹೊಸ ಸಿನಿಮಾ ಫಿಕ್ಸ್

ಶಿವಣ್ಣ ಹುಟ್ಟುಹಬ್ಬಕ್ಕೆ ಬಿಗ್ ಅಪ್ಡೇಟ್‌: ಆರ್.ಚಂದ್ರು ಜೊತೆ ಹೊಸ ಸಿನಿಮಾ ಫಿಕ್ಸ್

July 12, 2026
ಚಿಲ್ಲರೆ ಇಲ್ಲ ಎಂದ ಸಚಿವರನ್ನೇ ಬಸ್‌ನಿಂದ ಕೆಳಗಿಳಿಯಲು ಹೇಳಿದ BMTC ಕಂಡಕ್ಟರ್‌

ಚಿಲ್ಲರೆ ಇಲ್ಲ ಎಂದ ಸಚಿವರನ್ನೇ ಬಸ್‌ನಿಂದ ಕೆಳಗಿಳಿಯಲು ಹೇಳಿದ BMTC ಕಂಡಕ್ಟರ್‌

July 12, 2026
Next Post
ಕೇರಳದ ಕಣ್ಣೂರು ವಿವಿಯಲ್ಲಿ ಸಾವರ್ಕರ್ & ಗೋಳ್ವಾಲ್ಕರ್ ಬಗ್ಗೆ ಪಠ್ಯ ಕ್ರಮ: ಕೇಸರೀಕರಣ ಆಗುತ್ತಿದೆಯೇ ದೇವರ ನಾಡು.!?

ಕೇರಳದ ಕಣ್ಣೂರು ವಿವಿಯಲ್ಲಿ ಸಾವರ್ಕರ್ & ಗೋಳ್ವಾಲ್ಕರ್ ಬಗ್ಗೆ ಪಠ್ಯ ಕ್ರಮ: ಕೇಸರೀಕರಣ ಆಗುತ್ತಿದೆಯೇ ದೇವರ ನಾಡು.!?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada