ಬಾಲಿವುಡ್ ನಟ ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ ಅಪ್ರಾಪ್ತ ಸೇರಿದಂತೆ ಇಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಸಲ್ಮಾನ್ ಖಾನ್ ಅವರನ್ನು ಎಲಿಮಿನೇಟ್ (ತೆಗೆದುಹಾಕುವುದು) ಎಂಬ ಹೆಸರಿನಲ್ಲಿ ಹತ್ಯೆಗೆ ರೂಪಿಸಲಾಗಿದ್ದ ಸಂಚನ್ನು ಭೇದಿಸಿದ ದೆಹಲಿಯ ವಿಶೇಷ ತನಿಖಾ ದಳದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಅಪ್ರಾಪ್ತ ಯುವಕ ಹಾಗೂ ಅರ್ಷದೀಪ್ ಸಿಂಗ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆಗಸ್ಟ್ 4ರಂದು ಹರಿಯಾಣದಲ್ಲಿ ಪತ್ತೆಯಾದ ಸ್ಫೋಟಕ (ಐಇಡಿ) ಪ್ರಕರಣದ ತನಿಖೆ ವೇಳೆ ಈ ಇಬ್ಬರು ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿರುವುದು ಬೆಳಕಿಗೆ ಬಂದಿದೆ.

ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಶ್ನೋಯಿ ಮತ್ತು ಜಗ್ಗು ಭಗವಾನ್ ಪೂರಿಯಾ ಸಲ್ಮಾನ್ ಖಾನ್ ಹತ್ಯೆಗೆ ಅಪ್ರಾಪ್ತ ಯುವಕ, ಪ್ರಸ್ತುತ ನಾಪತ್ತೆಯಾಗಿರುವ ದೀಪಕ್ ಸುರಕ್ ಪುರ್ ಮತ್ತು ಜೈಲಿನಲ್ಲಿರುವ ಮೋನು ಡಗಾರ್ ಗೆ ಸುಪಾರಿ ನೀಡಲಾಗಿತ್ತು.






