ರಾಜ್ಯದಲ್ಲಿ ಸದ್ಯ ಜೆಡಿಎಸ್‌ನ (Jds) ಸದ್ಯದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ದಳಪತಿಗಳ ನಡೆಗೆ ಪಕ್ಷದ ಹಿರಿಯ ನಾಯಕ ಜಿ.ಟಿ.ದೇವೇಗೌಡರ (GT devegoeda) ರೀತಿಯಲ್ಲಿ ಹಲವಾರು ಜೆಡಿಎಸ್ ಶಾಸಕರ ಅಸಮಾಧಾನರಾಗಿದ್ದಾರೆ ಅಂತ ಹೇಳಲಾಗ್ತಿದೆ.
ಈ ಬಗ್ಗೆ ಯಾವುದೇ ನಾಯಕರು ಬಹಿರಂಗವಾಗಿ ಮಾತನಾಡಿಲ್ಲವಾದರೂ, ತಮ್ಮ ತಮ್ಮ ಆಪ್ತರ ಬಳಿ ದಳಪತಿ ನಡೆ ಬಗ್ಗೆ ಬೇಸರ ಹೊರಹಾಕ್ತಿದ್ದಾರೆ ಎನ್ನಲಾಗ್ತಿದೆ.
ಹೀಗಾಗಿ ಇದೇ ವಿಚಾರಗಳನ್ನ ಇಟ್ಟುಕೊಂಡು ಚನ್ನಪಟ್ಟಣ ಶಾಸಕ ಸಿ.ಪಿ ಯೋಗೇಶ್ವರ್ (Cp Yogeshwar), ಜೆಡಿಎಸ್ ಶಾಸಕರನ್ನ ಆಪರೇಷನ್ ಹಸ್ತ ಮಾಡುವುದಾಗಿ ಹೇಳಿಕೆ ನೀಡಿರಬಹುದು ಎಂಬ ಚರ್ಚೆ ನಡೀತಿದೆ.
ಹೀಗಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಶಾಸಕರು ಜೆಡಿಎಸ್‌ನಿಂದ ದೂರ ಉಳಿಯುವ ಆತಂಕ ಎದುರಾಗಿದ್ದು, ಅಸಮಾಧಾನ ಸ್ಫೋಟಗೊಳ್ಳುವ ಸಾಧ್ಯತೆಯಿದೆ.