ರಾಜ್ಯ ಬಿಜೆಪಿಯಲ್ಲಿ (Bjp) ದಿನೇ ದಿನೇ ಬಣ ಬಡೆದಾಟ ಮುಂದುವರೆದಿದೆ. ವಕ್ಫ್ ಬೋರ್ಡ್ (Waqf board) ಭೂಕಬಳಿಕೆ ವಿರುದ್ಧ ಬಿಜೆಪಿ ರೆಬಲ್ (Bjp rebels) ನಾಯಕರು ಹೋರಾಟ ಮಾಡ್ತಿದ್ದು, ಕುಂದಾನಗರಿ ಬೆಳಗಾವಿಯಲ್ಲೂ ಹೋರಾಟ ಮಾಡೋದಕ್ಕೆ ತಯಾರಿ ನಡೆಸಿದ್ದಾರೆ.
ನಾಳೆ (ಡಿಸೆಂಬರ್ 1 ರಂದು) ಬೆಳಗಾವಿಯ ಗಾಂಧಿ ಭವನದಲ್ಲಿ ಸಮಾವೇಶ ನಡೆಯಲಿದ್ದು, ಬಿಜೆಪಿ ರೆಬಲ್ ನಾಯಕರು ಭಾಗಿಯಾಗಲಿದ್ದಾರೆ. ಇನ್ನು ಬೆಳಗಾವಿ ಖಾಸಗಿ ಹೋಟೆಲ್‌ನಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh jarakiholi) ನೇತೃತ್ವದಲ್ಲಿ, ಸಮಾವೇಶದ ಪೂರ್ವಭಾವಿ ಸಭೆಯನ್ನ ಕೂಡ ನಡೆಸಲಾಗಿದೆ.
ಆದ್ರೆ ಈ ಮಧ್ಯೆ ಇತ್ತ ಬಿಜೆಪಿ ಹೈಕಮಾಂಡ್ ಈ ನಾಯಕರುಗಳಿಗೆ ಬುಲಾವ್ ನೀಡಿರುವ ಹಿನ್ನೆಲೆಯಲ್ಲಿ ಬಿಜೆಪಿ ರೆಬಲ್ ನಾಯಕರು ಇವತ್ತು ದೆಹಲಿಗೆ ತೆರಳೋ ಸಾಧ್ಯತೆಯಿದೆ.