
ವಿಜಯಾನಂದ ಕಾಶಪ್ಪನವರ್ ಸೇರಿದಂತೆ ಜಯಮೃತ್ಯುಂಜಯ ಶ್ರೀಗಳ ಬಗ್ಗೆ ನೇರ ವಾಗ್ದಾಳಿ ಮಾಡಿದ ಬಳಿಕ ಬಾಗಲಕೋಟೆಯಲ್ಲಿ ಪಂಚಮಸಾಲಿ ಸಾಮಾಜದ ಕೂಡಲಸಂಗಮ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದ್ದಾರೆ. ಲಿಂಗಾಯತ ಪಂಚಮಸಾಲಿ ಸಮಾಜ, ಜಗತ್ತಿನಾದ್ಯಂತ ಒಗ್ಗಟ್ಟಾಗಿದೆ ಅಂದ್ರೆ, ಅದಕ್ಕೆ ಕಾರಣ ಸಮಾಜಕ್ಕೆ 2ಎ ಮೀಸಲಾತಿ ಹೋರಾಟ. ನಮ್ಮ ಉದ್ದೇಶ ಸಮಾಜಕ್ಕೆ ನ್ಯಾಯ ಕೊಡಿಸುವಂತಹದ್ದು. ಕೂಡಲ ಸಂಗಮ ಬಯಲು ಜಾಗದಲ್ಲಿ ಪೀಠ ಆರಂಭವಾಯಿತು. ಭಕ್ತರ ಹೃದಯ ಪೀಠವೇ ನಮ್ಮ ಸಿಂಹಾಸನ. ಸಂಘಟನೆ ಮಾಡುವ ಸಂದರ್ಭದಲ್ಲಿ, ಕೆಲವು ಶಿಶ್ಯರು ಗೊಂದಲದ ಹೇಳಿಕೆಗಳನ್ನ ಕೊಡ್ತಿದ್ದಾರೆ. ಅವರೆಲ್ಲ ನಮ್ಮವರೇ, ನಾನು ಅವ್ರ ವಿರೋಧ ಮಾಡಲ್ಲ. ಅವ್ರ ಟೀಕೆ ಟಿಪ್ಪಣಿಗಳನ್ನ ಸ್ವಾಗತಿಸ್ತೇನೆ ಎಂದಿದ್ದಾರೆ.

ಬಸವಣ್ಣನವರ ತತ್ವದಂತೆ ನಿದಿಸುವವರು ನಮ್ಮವರೇ, ಹೊಗಳುವವರು ನಮ್ಮವರೇ. ಕೆಲವು ಅಜ್ಞಾನ ಹಾಗೂ ಆಸೆ ಆಮಿಷಗಳಿಗೆ ಒಳಪಟ್ಟು ಟೀಕೆ ಟಿಪ್ಪಣಿಗಳನ್ನ ಮಾಡ್ತಾರೆ. ಸಮಾಜದ ಯಾವುದೇ ವ್ಯಕ್ತಿ ನಾನು ಧ್ವನಿ ಎತ್ತುತ್ತೇನೆ. ಯಾರನ್ನೋ ಮಂತ್ರಿ ಮಾಡಲು, ಶಾಸಕರನ್ನ ಮಾಡಲು ಶ್ರೀ ಪೀಠಗಳನ್ನ ಕಟ್ಟಿದ್ದಲ್ಲ. ನಾನು ಯಾವುದೇ ಭೌತಿಕತೆಗೆ ಒಳಗಾಗಿಲ್ಲ. ಮನಸ್ಸುಗಳನ್ನ ಕಟ್ಟುವಂತಹ ಕೆಲಸ ಮಾಡಿರುವೆ. ಜನ್ರನ್ನ ಕಟ್ಟುವಂತಹ ಕೆಲಸ ಮಾಡಿದ್ದೇನೆ. ಜೀವದ ಉಸಿರಿರೋವರೆಗೂ ದುಡಿದ್ದೇನೆ, ನಾನು ಸಮಾಜಕ್ಕೆ ಅರ್ಪಣೆ ಆಗಿದ್ದೇನೆ. ಇವತ್ತು ಬಯಲಲ್ಲೇ ಇದ್ದು, ಸಮಾಜ ಸಂಘಟನೆ ಮಾಡ್ತಿದ್ದೇನೆ. ಆಸ್ತಿ ಹಾಗೂ ಅಂತಸ್ಥು ಯಾವುದೂ ನನಗೆ ಮುಖ್ಯ ಅಲ್ಲ ಎಂದಿದ್ದಾರೆ.
ನನ್ನ ಸಮಾಜದ ಕಟ್ಟ ಕಡೆಯ ವ್ಯಕ್ತಿ, ಯಾವ ರೀತಿ ಸಲಹೆ ಕೊಡ್ತಾನೋ, ಆ ರೀತಿ ನಡೆಯುತ್ತೇನೆ. ಎಲ್ಲ ಮಠ ಮಂದಿರಗಳನ್ನ ಗೊಂದಲಗಳಿರೋದು ಸಹಜ. ಎಷ್ಟೇ ನೋವಾದ್ರೂ, ಷಡ್ಯಂತ್ರವಾದ್ರೂ ಸಹಿಸಿಕೊಂಡು ಬಂದಿದ್ದೇನೆ. ಭಕ್ತರ ಸೇವೆ, ಭಕ್ತರ ಹೃದಯದ ಮೇಲೆ ನಂಬಿಕೆ ಇಟ್ಟಿದ್ದೇನೆ. ನನಗೆ ಸಮಾಜದ ಹಿತಾಸಕ್ತಿ ಮುಖ್ಯ ಎಂದಿದ್ದಾರೆ. ಕೂಡಲ ಸಂಗಮ ಶ್ರೀ ವಿರುದ್ಧ ವಿಜಯಾನಂದ ಕಾಶಪ್ಪನವರ್ ಆರೋಪ ವಿಚಾರದ ಬಗ್ಗೆ ಮಾತನಾಡಿ, ಯಾರೇ ಟೀಕೆ ಮಾಡಿದ್ದಾರೆ ಅವ್ರೆಲ್ಲರೂ ನಮ್ಮವರೇ, ಅವ್ರಿಗೆ ದೇವರು ಸದ್ಬುದ್ದಿ ಕೊಡಲಿ. ಎಲ್ಲ ಗೊಂದಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ, ಎಪ್ರಿಲ್ 20 ರಂದು, ಕೂಡಲಸಂಗಮದಲ್ಲಿ ರಾಜ್ಯ ಪಂಚಮಸಾಲಿ ಸಮಾಜದ ರಾಜ್ಯ ಮಟ್ಟದ ಸಭೆ ಕರೆಯಲಾಗಿದೆ ಎಂದಿದ್ದಾರೆ.

ಮೀಸಲಾತಿ ಹೋರಾಟವನ್ನ ಮತ್ತೆ ಯಾವ ಅಂಶಗಳನ್ನ ಇಟ್ಕೊಂಡು ಮುನ್ನೆಡೆಯಬೇಕು ಎಂಬ ಸಭೆ ಕರೆಯಲಾಗಿದೆ. ಗೊಂದಲಗಳಾದ್ರೂ, ಸಮಾಜದ ಋಣ ತೀರಿಸುವ ಕೆಲಸ ಮಾಡ್ತೇನೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ನಿರ್ಧಾರದಂತೆ ನಡೆಯುತ್ತೇನೆ. ಅಜ್ಞಾನಕ್ಕೆ ಒಳಪಟ್ಟಂತ ಹೇಳಿಕೆಗಳಿಗೆ ಸ್ಪಂದಿಸಲ್ಲ. ಯಾರು ಎಷ್ಟು ದೊಡ್ಡವರಾಗಿದ್ದಾರೋ, ಅವ್ರ ಮನಸ್ಸಿಗೆ ಪ್ರಶ್ನೆ ಮಾಡಿಕೊಂಡರೆ ಸಾಕು. ಇವೆಲ್ಲವನ್ನ ಸಹಿಸಿಕೊಂಡು ನಾನು ಬೀದಿಗೆ ಬಂದು ಪಾದಯಾತ್ರೆ ಮಾಡಿದೆ. ನನಗೆ ಅರಮನೆಯಂತಹ ಮಠ ಕಟ್ಟುವ ಉದ್ದೇಶ ನನಗಿಲ್ಲ. ಭಕ್ತರು ಕೊಡುವ ಕೈತುತ್ತು ನನಗದೇ ಮಹಾ ಪ್ರಸಾದ. ಏಪ್ರಿಲ್ 20ರ ಸಭೆಗೆ ಟ್ರಸ್ಟ್ ಪದಾದಿಕಾರಿಗಳು, ಮುಖಂಡರು, ವಕೀಲರ ಸಂಘಟನೆ, ಭಕ್ತ ಗಣ ಮಾಜಿ ಹಾಲಿ ಶಾಸಕ ಸಚಿವರಿಗೆ ಸಭೆಗೆ ಬರಲು ವಿನಂತಿ ಮಾಡಿದ್ದೇನೆ. ಭಿನ್ನಾಭಿಪ್ರಾಯ ಮಾಡುವ ಕೆಲಸ ಬೇಡ ಎಂದು ಭಕ್ತರಿಗೆ ಮನವಿ ಮಾಡ್ತೇನೆ ಎಂದಿದ್ದಾರೆ.