• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಜೆ.ಎಚ್. ಪಟೇಲರ ಚಿಂತನೆಗಳು ಕಾಲಾತೀತವಾಗಿವೆ : ಬಸವರಾಜ ಬೊಮ್ಮಾಯಿ

Any Mind by Any Mind
October 1, 2023
in Top Story, ಇದೀಗ, ಕರ್ನಾಟಕ, ದೇಶ
0
ಜೆ.ಎಚ್. ಪಟೇಲರ ಚಿಂತನೆಗಳು ಕಾಲಾತೀತವಾಗಿವೆ : ಬಸವರಾಜ ಬೊಮ್ಮಾಯಿ
Share on WhatsAppShare on FacebookShare on Telegram

ಬೆಂಗಳೂರು: ಜೆ ಎಚ್. ಪಟೇಲರು ಸ್ಟೇಟ್ಸ್ ಮನ್ ಆಗಿದ್ದರು. ಅವರು ಯಾವಾಗಲೂ ಜನ ಕಲ್ಯಾಣದ ವಿಚಾರ ಮಾಡುತ್ತಿದ್ದರು. ಅವರ ಆಲೋಚನೆಗಳು ಕಾಲಾತೀತವಾಗಿದ್ದು, ಪಟೇಲರ ಆಲೋಚನೆಗಳನ್ನು ಅನುಷ್ಠಾನ ಮಾಡುವ ಮೂಲಕ ರಾಜಕಾರಣದಲ್ಲಿ ಪರಿವರ್ತನೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮಾಯಿ ಅಭಿಪ್ರಾಯ ಪಟ್ಟರು. ಜೆ.ಎಚ್. ಪಟೇಲ್ ಪ್ರತಿಷ್ಠಾನದ ವತಿಯಿಂದ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ ದಿ. ಜೆ.ಎಚ್. ಪಟೇಲ್ ಅವರ 93 ನೇ ಜನ್ಮ ದಿನಾಚರಣೆ ಹಾಗೂ ಕರ್ನಾಟಕ ರಾಜ್ಯದ ಉಜ್ವಲ ಭವಿಷ್ಯಕ್ಕಾಗಿ ಚಿಂತನ ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜೆ ಎಚ್ ಪಟೆಲ್ ಹೀಗಳಿಕೆಗೆ ಹಿಗ್ಗದವರು ತೆಗಳಿಕೆಗೆ ಬಗ್ಗದವರು ಸ್ವಂತ ಚಿಂತನೆ ಮಾಡುವ ಶಕ್ತಿ ಅವರಿಗೆ ಇತ್ತು. ಅವರು ಚಿಂತಕರ ವರ್ಗಕ್ಕೆ ಸೇರಿದ್ದರು. ಅವರಿಗೆ ಎಷ್ಟು ಸ್ಥಿತ ಪ್ರಜ್ಞೆ ಇತ್ತು. ಅವರು ಒಬ್ಬ ನಾಯಕನಾಗಿ ಕಾಡುತ್ತಾರೆ‌. ಮುಂದಾಲೋಚನೆಯಿಂದ ಇರುವವನು ಮಾತ್ರ ನಾಯಕ ಆಗುತ್ತಾನೆ. ನಾನು ಅದರಷ್ಟವಂತ‌ ರಾಜಕಾರಣಿ ನನ್ನ ಬಹಳ ಪ್ರೀತಿ ಮಾಡುತ್ತಿದ್ದರು. ನನ್ನ ಬಸವಣ್ಣ ಅಂತ ಕರೆಯುತ್ತಿದ್ದರು ಎಂದು ಪಟೇಲರೊಂದಿಗಿನ ನೆನಪುಗಳನ್ನು ಮೆಲುಕು ಹಾಕಿದರು. ಅವರೊಂದಿಗೆ ಎಲ್ಲರೂ ಸಂತೋಷದಿಂದ ಕೆಲಸ ಮಾಡುತ್ತಿದ್ದರು. ಅವರು ರಾಜ್ಯದ ಹಿತದೃಷ್ಟಿಯಿಂದ ಯಾವುದನ್ನು ಮಾಡಬೇಕು ಅದನ್ನಷ್ಟೇ ತೆಗೆದುಕೊಳ್ಳುತ್ತಿದ್ದರು. ಯಾರಿಂದ ಏನು ಬರುತ್ತದೆಯೋ ಅದನ್ನು ಮಾತ್ರ ತಗೆದುಕೊಳ್ಳುತ್ತಿದ್ದರು. ಅವರು ಸಾಮಾಜಿಕ ವಿಜ್ಞಾನಿಯಾಗಿದ್ದರು. ಅವರೂ ಸಂತೋಷವಾಗಿರುತ್ತಿದ್ದರು ಎದುರಿಗಿನವರನ್ನೂ ಸಂತೋಷವಾಗಿರುವಂತೆ ನೋಡುತ್ತಿದ್ದರು.

ADVERTISEMENT


ರಾಜಕಾರಣದಲ್ಲಿ ಅತ್ಯಂತ ಧೀಮಂತ ನಾಯಕ ದೇವರಾಜ ಅರಸು, ಅವರ ವಿರುದ್ಧ ಮಾತನಾಡವುದು ಕಷ್ಟ ಇತ್ತು.
ದೇವರಾಜ ಅರಸರು ಪಟೇಲರ ಎದುರು ನಿಮ್ಮ ಸಿಬಿಐನವರು ನಮ್ಮ ತೋಟ, ಮನೆ ಎಲ್ಲ ಕಡೆ ಹುಡುಕಿದರು. ಆದರೂ ಅವರಿಗೆ ಏನೂ ಸಿಗಲಿಲ್ಲ ಅಂದರು. ಆಗ ಜೆ ಎಚ್. ಪಟೇಲರು ಅವರು ದಡ್ಡರಿದ್ದಾರೆ. ನೀ ಎಲ್ಲಿ ಇಟ್ಟಿದ್ದೀಯಾ ಹೇಳಿಬಿಡು ಎಂದು ಪ್ರಶ್ನಿಸಿದ್ದರು.
ಜೆ ಎಚ್. ಪಟೇಲರು ಸ್ಟೇಟ್ಸ್ ಮನ್ ಆಗಿದ್ದರು. ಅವರು ಯಾವಾಗಲೂ ಜನ ಕಲ್ಯಾಣದ ವಿಚಾರ ಮಾಡುತ್ತಿದ್ದರು. ಜೆ.ಎಚ್ ಪಟೇಲರ ಆಲೋಚನೆಗಳನ್ನು ಅನುಷ್ಠಾನ ಮಾಡುವ ಕೆಲಸ ಮಾಡಬೇಕು. ಅನೇಕ ಜನರು ಜಿಲ್ಲೆಗಳ ವಿಭಜನೆ ಮಾಡಲು ವಿರೋಧ ಮಾಡಿದರು. ಆದರೆ, ಆಡಳಿತದ ಅನುಕೂಲಕ್ಕೆ ಹೊಸ ಜಿಲ್ಲೆಗಳ ಅಗತ್ಯವಿದೆ ಎಂದು ಏಳು ಜಿಲ್ಲೆಗಳನ್ನು ಮಾಡಿದರು. ಅವರು ಯಾವುದನ್ನೂ ಹೆಚ್ಚು ಹಚ್ಚಿಕೊಳ್ಳುತ್ತಿರಲಿಲ್ಲ. ಅವರು ಸಿಎಂ ಆಗಿದ್ದಾಗ ಮೂವರು ಸಚಿವರು ತಮ್ಮ ಕೆಲಸ ಮಾಡುವಂತೆ ಒತ್ತಡ ಹಾಕಲು ಕೆಲಸ ಆಗದಿದ್ದರೆ ರಾಜಿನಾಮೆ ನೀಡುವುದಾಗಿ ಹೇಳಿದರು. ಆಗ ಪಟೇಲರು ರಾಜೀನಾಮೆ ತಂದಿದ್ದೀರೊ, ನಾನೇ ಲೆಟರ್ ಹೆಡ್ ಕೊಟ್ಟು ರಾಜಿನಾಮೆ ಪಡೆಯಬೇಕಾ ಎಂದು ಪ್ರಶ್ನಿಸಿದರು ಅದರಿಂದ ಸಚಿವರು ದಿಗಿಲುಗೊಂಡರು ಎಂದು ಹೇಳಿದರು.


ಒಂದು ಸಮೀಕ್ಷೆಯಾಗಿದೆ. ಇಡೀ ಮನುಕುಲದಲ್ಲಿ ವಿಜ್ಞಾನಿಗಳ ಮೆದಲು ಹೆಚ್ಚು ಬಳಕೆಯಾಗಿದೆ. ಆದರೆ, ಈಗ ನಾವು ಸೃಷ್ಠಿ ಮಾಡಿರುವ ಎಐ ನಮ್ಮೊಂದಿಗೆ ಸ್ಪರ್ಧೆ ಮಾಡುವ ಕಾಲ ಬಂದಿದೆ. ಮನುಷ್ಯನ ಚಿಂತನೆ ಯಾವಾಗ ನಿಲ್ಲುತ್ತದೆಯೋ ಆಗ ಮನುಕುಲದ ನಾಶವಾಗುತ್ತದೆ. ರಾಜಕಾರಣ ಬದಲಾಗಬೇಕಾದರೆ ಜನ ಬದಲಾಗಬೇಕು.ಜನರ ಆಸೆ ಆಕಾಂಕ್ಷೆಗಳು ಬದಲಾಗಬೇಕು ಎಂದರು. ತತ್ವಜ್ಞಾನಿ ಸಾಕ್ರೆಟಿಸ್ ಗೆ ಎರಡರಲ್ಲಿ ಒಂದು ಆಯ್ಕೆ ನೀಡಲಾಗಿತ್ತು. ನೀನು ಸಾಯಬೇಕಾ ಅಥವಾ ನಿನ್ನ ವಿಚಾರಗಳು ಸಾಯಬೇಕಾ ಅಂತ ಕೇಳಿದರು. ಸಾಕ್ರಟೀಸ್ ತಾನು ಸತ್ತು ತನ್ನ ವಿಚಾರಗಳನ್ನು ಜೀವಂತ ಉಳಿಯುವಂತೆ ಮಾಡಿದರು. ಅದೇ ರೀತಿ ಜೆ.ಎಚ್. ಪಟೇಲರ ವಿಚಾರಗಳು ಜೀವಂತವಾಗಿವೆ. ಪಟೇಲರ ಚಿಂತನೆಗಳು ಕಾಲಾತೀತವಾಗಿವೆ. ವಿವೇಕಾನಂದರು ಒಂದು ಮಾತು ಹೇಳಿದ್ದರು. ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕುವವನು ಸಾಧಕ ಅಂತ ಹೇಳಿದ್ದರು. ಅಂತಹ ಸಾಧಕರು ಜೆ.ಎಚ್. ಪಟೇಲರು ಎಂದು ಹೇಳಿದರು. ಈ ಸಂದರ್ಭದಲ್ಲಿ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್. ಶಂಕರ್, ಜೆ.ಎಚ್. ಪಟೇಲರ ಪುತ್ರರಾದ ಟಿ.ಜೆ ಪಟೇಲ್, ಮಹಿಮ ಪಟೇಲ್ ಮತ್ತಿತರರು ಹಾಜರಿದ್ದರು.

Tags: BJPಬಿಜೆಪಿ
Previous Post

ನಾಡಿನ ನೀರಾವರಿ ಸಮಸ್ಯೆಗೆ ಫುಲ್‌ ಸ್ಟಾಪ್‌ ಇಡೋದೆ ನನ್ನ ಧ್ಯೇಯ: HDK

Next Post

ಕಾವೇರಿ ವಿವಾದಕ್ಕೆ ಅಂತಿಮ ತೆರೆ ಎಳೆಯಲು ನಾಲ್ಕು ರಾಜ್ಯಗಳ ಜತೆ ಚರ್ಚಿಸಿ ಸಂಕಷ್ಟ ಸೂತ್ರ ರೂಪಿಸಬೇಕು: ಎಸ್.ಎಂ ಕೃಷ್ಣ

Related Posts

ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ
ಕರ್ನಾಟಕ

ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ

by ಪ್ರತಿಧ್ವನಿ
April 14, 2026
0

ವಿಜಯಪುರ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಳವಾಗುತ್ತಿರುವ ನಡುವೆ, ಒಂದೇ ದಿನದಲ್ಲಿ ಎರಡು ಭೀಕರ ಘಟನೆಗಳು ಬೆಳಕಿಗೆ ಬಂದಿವೆ. ಜಿಲ್ಲೆಯ ಹೊರವಲಯದ ಅಲಿಯಾಬಾದ್ ಬಳಿ ಗುಂಡಿನ ಸದ್ದು ಕೇಳಿಸಿಕೊಂಡಿದ್ದು,...

Read moreDetails
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

April 14, 2026
Next Post
ಕಾವೇರಿ ವಿವಾದಕ್ಕೆ ಅಂತಿಮ ತೆರೆ ಎಳೆಯಲು ನಾಲ್ಕು ರಾಜ್ಯಗಳ ಜತೆ ಚರ್ಚಿಸಿ ಸಂಕಷ್ಟ ಸೂತ್ರ ರೂಪಿಸಬೇಕು: ಎಸ್.ಎಂ ಕೃಷ್ಣ

ಕಾವೇರಿ ವಿವಾದಕ್ಕೆ ಅಂತಿಮ ತೆರೆ ಎಳೆಯಲು ನಾಲ್ಕು ರಾಜ್ಯಗಳ ಜತೆ ಚರ್ಚಿಸಿ ಸಂಕಷ್ಟ ಸೂತ್ರ ರೂಪಿಸಬೇಕು: ಎಸ್.ಎಂ ಕೃಷ್ಣ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada