• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ʼಇಬ್ಬರು ಮಲಯಾಳಿ ತಾಲಿಬಾನಿಗಳಿರಬೇಕುʼ ಎಂದ ಶಶಿ ತರೂರ್: ʼನೀವು ಕೇರಳದ ಸಂಸದ ಎನ್ನುವುದನ್ನು ಮರೆಯಬೇಡಿʼ ಎಂದ ನೆಟ್ಟಿಗರು!

ಪ್ರತಿಧ್ವನಿ by ಪ್ರತಿಧ್ವನಿ
August 17, 2021
in ದೇಶ
0
ʼಇಬ್ಬರು ಮಲಯಾಳಿ ತಾಲಿಬಾನಿಗಳಿರಬೇಕುʼ ಎಂದ ಶಶಿ ತರೂರ್: ʼನೀವು ಕೇರಳದ ಸಂಸದ ಎನ್ನುವುದನ್ನು ಮರೆಯಬೇಡಿʼ ಎಂದ ನೆಟ್ಟಿಗರು!
Share on WhatsAppShare on FacebookShare on Telegram

ಅಫ್ಘನ್‌ ಅನ್ನು ತಮ್ಮ ಕೈವಶ ಪಡೆದುಕೊಂಡ ತಾಲಿಬಾನಿಗಳು ವಿಜಯೋತ್ಸವ ನಡೆಸುವ ವಿಡಿಯೋವೊಂದನ್ನು ಕೇರಳದ ತಿರುವಂತಪುರಂ ಸಂಸದ ಶಶಿ ತರೂರ್‌ ಹಂಚಿಕೊಂಡಿದ್ದು, ಅಲ್ಲಿಬ್ಬರು ಮಲಯಾಳಿ ತಾಲಿಬಾನಿಗಳಿರಬೇಕು ಎಂದು ಹೇಳಿದ್ದಾರೆ.

ADVERTISEMENT

ವಿಡಿಯೋದಲ್ಲಿ ಇಬ್ಬರು ಮಲಯಾಳಂ ಮಾತನಾಡಿದಂತೆ ತೋರುತ್ತದೆ. ಅದೇ ಆಧಾರದ ಮೇಲೆ ಅಲ್ಲಿಬ್ಬರು ಮಳೆಯಾಳಿಗಳಿರಬೇಕು ಎಂದು ತರೂರ್‌ ಟ್ವೀಟಿಸಿದ್ದಾರೆ.

“ಸಂಸಾರಿಕಟ್ಟೆ” (ಮಾತನಾಡಲಿ) ಎಂಬ ಶಬ್ದ ವಿಡಿಯೋದ ನಡುವಲ್ಲಿ ಅಸ್ಪಷ್ಟವಾಗಿ ಕೇಳಿ ಬರುತ್ತದೆ. ಆದರೆ, ಅದು ಮಲಯಾಳಂ ಭಾಷಿಕರೇ ಮಾತನಾಡಿದ್ದಾರೆಯೇ ಅಥವಾ ಮಳೆಯಾಲಂ ಪದಕ್ಕೆ ಹೋಲಿಕೆಯಾಗುವ ಬೇರೆ ಭಾಷೆಯ ಪದವೇ ಎಂಬುವುದು ಸ್ಪಷ್ಟವಾಗಿಲ್ಲ.

It sounds as if there are at least two Malayali Taliban here — one who says “samsarikkette” around the 8-second mark & another who understands him! https://t.co/SSdrhTLsBG

— Shashi Tharoor (@ShashiTharoor) August 17, 2021

ಪತ್ರಕರ್ತ ರಮೀಝ್‌ ಹಂಚಿಕೊಂಡಿರುವ ವಿಡಿಯೋವನ್ನು ತರೂರ್‌ ರಿಟ್ವೀಟ್‌ ಮಾಡಿದ್ದು, ‘ಇಲ್ಲಿ ಕನಿಷ್ಠ ಇಬ್ಬರು ಮಲಯಾಳಿ ತಾಲಿಬಾನ್‌ಗಳಿರುವಂತೆ ತೋರುತ್ತಿದೆ. ವಿಡಿಯೊದ 8 ನೇ ಸೆಕೆಂಡ್‌ನಲ್ಲಿ ವ್ಯಕ್ತಿಯೊಬ್ಬರು ‘ಸಂಸಾರಿಕಟ್ಟೆ’ (ಮಾತಾಡಲಿ)’ ಎಂದು ಹೇಳುತ್ತಾರೆ. ಇನ್ನೊಬ್ಬರು ಅದನ್ನು ಅರ್ಥ ಮಾಡಿಕೊಂಡಂತೆ ಕಾಣುತ್ತಿದೆ, ಎಂದು ಬರೆದಿದ್ದಾರೆ.

ಅದಕ್ಕೆ ಸ್ಪಷ್ಟನೆ ನೀಡಿರುವ ರಮೀಝ್‌, ʼತಾಲಿಬಾನ್‌ನ ರ‍್ಯಾಂಕ್‌ನಲ್ಲಿ ಮತ್ತು ಫೈಲ್‌ನಲ್ಲಿ ಯಾವುದೇ ಕೇರಳ ಮೂಲದವರಿಲ್ಲ, ಅವರು ಜಬುಲ್ ಪ್ರಾಂತ್ಯದ ಬಲೂಚ್ ಪ್ರದೇಶದವರಾಗಿದ್ದು, ಅವರು ಬ್ರಾಹ್ವಿ ಭಾಷೆಯನ್ನು ಮಾತನಾಡುತ್ತಿದ್ದಾರೆ. ಆಪ್ರಾಂತ್ಯದಲ್ಲಿ ಬ್ರಾಹ್ವಿ ಭಾಷೆಯನ್ನು ವ್ಯಾಪಕವಾಗಿ ಮಾತನಾಡುತ್ತಾರೆ, ಇದು ದಾರ್ವಿಡಿಯನ್ ಭಾಷೆ ತೆಲುಗು ತಮಿಳು ಮಲಯಾಳಂ ಇತ್ಯಾದಿಗಳನ್ನು ಹೋಲುತ್ತದೆ.ʼ ಎಂದು ಹೇಳಿದ್ದಾರೆ.

https://twitter.com/RamizReports/status/1427506740468363275

ಬ್ರಾಹ್ವಿ ಭಾಷೆ ದ್ರಾವಿಡಿಯನ್‌ ಭಾಷೆಗಳಿಗೆ ಹೋಲುವುದರ ಕುರಿತು ಈ ಹಿಂದೆಯೇ ಹಲವು ಸಂಗತಿಗಳು ಹೊರ ಬಿದ್ದಿದ್ದವು. ಬ್ರಾಹ್ವಿ ಭಾಷೆಯ ಹಲವು ಪದಗಳು ತಮಿಳಿನ ಪದಗಳಿಗೆ ಹೋಲಿಕೆಯಾಗುವುದರ ಕುರಿತು Brahui TV ಎಂಬ ಯುಟ್ಯೂಬ್‌ ಚಾನೆಲ್‌ 2018 ರಲ್ಲಿ ವಿಡಿಯೋ ಪ್ರಸಾರ ಮಾಡಿತ್ತು.

Are There Similarities in Brahui and Tamil language? An Interview with a Sri Lankan Tamil |  English

ಇನ್ನು ತರೂರ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ದಿ ನ್ಯೂಸ್‌ ಮಿನಿಟ್‌ ಪತ್ರಕರ್ತ ಕೋರಾ ಅಬ್ರಹಾಂ ಎಂಬವರು, ‘ಕೇರಳದ ಕೆಲ ಮಂದಿ ಜಿಹಾದಿ ಗುಂಪುಗಳನ್ನು ಸೇರುತ್ತಿರುವುದರಿಂದ ಬಲಪಂಥೀಯ ಗುಂಪುಗಳು ಕೇರಳ ವಿರುದ್ಧ ದ್ವೇಷಪೂರಿತ ಅಪಪ್ರಚಾರ ನಡೆಸುತ್ತಿವೆ. ಇಂಥಹ ಹೊತ್ತಿನಲ್ಲಿ ಹೀಗೆ ಟ್ವೀಟ್‌ ಮಾಡುವುದು ಅತ್ಯಂತ ಸಮಸ್ಯಾತ್ಮಕ. ನೀವು ಕೇರಳ ರಾಜಧಾನಿಯ ಸಂಸದರು ಎಂಬುದರ ಅರಿವು ಇದ್ದರೆ ಒಳಿತು,‘ ಎಂದು ತರೂರ್‌ಗೆ ಉತ್ತರ ನೀಡಿದ್ದಾರೆ.

This is highly problematic. Making statements like this especially when the Right Wing eco system is going on a hate campaign against Kerala regarding people joining jihadist groups. And you being an MP from Kerala's capital should be knowing better.

— Korah Abraham (@thekorahabraham) August 17, 2021

ಬ್ರಾಹ್ವಿ  ಭಾಷೆಯಲ್ಲಿ ಇದೇ ಶಬ್ದಕ್ಕೆ ಹೋಲಿಕೆಯಾಗುವ ಪದವನ್ನು ತಾಳೆ ಮಾಡಿರುವುದರಲ್ಲಿ (سما تننگ, Sama Tinning) ಎಂಬ ಪದವನ್ನು ಅವರು ಬಳಸಿರುವ ಸಾಧ್ಯತೆ ಹೆಚ್ಚಿದೆ. ಯಾಕೆಂದರೆ ಈ ಶಬ್ದವು ʼಎಬ್ಬಿಸುʼ ಎಂಬರ್ಥವನ್ನು ನೀಡುತ್ತದೆ. ನೆಲದಲ್ಲಿ ಕೂತಿದ್ದ ವ್ಯಕ್ತಿಯನ್ನು ಎಬ್ಬಿಸಲು ಹೇಳಿರಬಹುದೆಂದು ಇದರ ಆಧಾರದಲ್ಲಿ ಅಂದಾಜಿಸಬಹುದು. ಇದನ್ನೇ ಹೋಲುವ ಇನ್ನೊಂದು ಶಬ್ದವು (سرمننگ, Ser Manning) ʼತೃಪ್ತಿʼ ಎಂಬರ್ಥವನ್ನೂ ನೀಡುತ್ತದೆ. ಕಾಬೂಲ್‌ ಪ್ರವೇಶಿಸಿದ ತೃಪ್ತಿಯನ್ನು ವ್ಯಕ್ತಪಡಿಸಿದ ಸಾಧ್ಯತೆಯೂ ಇದೆ. ಅದಾಗ್ಯೂ, ಆ ಶಬ್ದ ನಿಜಾರ್ಥ ಇನ್ನೂ ನಿಖರವಾಗಿಲ್ಲ. ತರೂರ್ ಒಬ್ಬ ಸಂಸದರಾಗಿ ಯಾವುದೇ ಆಧಾರವಿಲ್ಲದೆ ಬೀಸು ಹೇಳಿಕೆ ನೀಡಿರುವುದು ಸಾಕಷ್ಟು ಚರ್ಚೆಯನ್ನುಂಟು ಮಾಡಿದೆ.

Tags: ಶಶಿ ತರೂರ್
Previous Post

ಅಫ್ಘಾನಿಸ್ಥಾನವನ್ನು ತಾಲಿಬಾನ್‌ ಕೈವಶ ಮಾಡಿದ್ದು ಹೇಗೆ ? ʼತಾಲಿಬಾನ್‌ ಚರಿತ್ರೆ ʼ

Next Post

ತಾಲಿಬಾನಿಗಳು ಮೋಜು-ಮಸ್ತಿ ಮಾಡುತ್ತಿರುವ ವೀಡಿಯೋಗಳು ವೈರಲ್‌

Related Posts

ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?
Top Story

ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

by ಪ್ರತಿಧ್ವನಿ
April 29, 2026
0

ಲಕ್ನೋ: ಉತ್ತರ ಪ್ರದೇಶದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್  ಉತ್ತರ ಪ್ರದೇಶದ ಶಾಸಕಿ ಹಾಗೂ...

Read moreDetails
“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

April 29, 2026
ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

April 29, 2026
ತೀವ್ರ ಜಿದ್ದಾ ಜಿದ್ದಿನ ಬಂಗಾಳದ ಫೈಟ್‌ : ಎರಡನೇ ಹಂತದ ಮತದಾನಕ್ಕೆ ಏನೆಲ್ಲ ವ್ಯವಸ್ಥೆ, ಹೇಗಿದೆ ಭದ್ರತೆ..?

ತೀವ್ರ ಜಿದ್ದಾ ಜಿದ್ದಿನ ಬಂಗಾಳದ ಫೈಟ್‌ : ಎರಡನೇ ಹಂತದ ಮತದಾನಕ್ಕೆ ಏನೆಲ್ಲ ವ್ಯವಸ್ಥೆ, ಹೇಗಿದೆ ಭದ್ರತೆ..?

April 29, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
Next Post

ತಾಲಿಬಾನಿಗಳು ಮೋಜು-ಮಸ್ತಿ ಮಾಡುತ್ತಿರುವ ವೀಡಿಯೋಗಳು ವೈರಲ್‌

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada