ಬೆಂಗಳೂರು: ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣ ದೇಶದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪ್ರಜ್ವಲ್ ತಲೆ ಮರೆಸಿಕೊಂಡಿದ್ದಾರೆ.
ಏ. 29 ರಂದು ಪ್ರಜ್ವಲ್ ರೇವಣ್ಣ (Prajwal Revanna) ವಿದೇಶಕ್ಕೆ ಹಾರಿದ್ದಾರೆ. ಆದರೆ ಇದುವರೆಗೂ ಸಹ ಎಲ್ಲಿದ್ದಾರೆ ಎಂಬುವುದೇ ನಿಖರವಾಗಿ ತಿಳಿಯುತ್ತಿಲ್ಲ. ಪ್ರಜ್ವಲ್ಗಾಗಿ ಎಸ್ಐಟಿ (SIT) ಅಧಿಕಾರಿಗಳು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಗೃಹ ಸಚಿವ ಡಾ. ಜಿ ಪರಮೇಶ್ವರ್ (Dr. G Parameshwar), ಪ್ರಜ್ವಲ್ ರೇವಣ್ಣ ಪ್ರಮುಖ ಆರೋಪಿ. ದೇಶ ಬಿಟ್ಟು ಹೋಗಿದ್ದಾರೆ. ಹಾಸನ ಜಿಲ್ಲೆಯ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಎಸ್ಐಟಿ ಗಂಭಿರವಾಗಿ ಪರಿಗಣಿಸಿದೆ. ವಾಪಸ್ ಕರೆತರಲು ಸಿಬಿಐಗೆ ಬ್ಲೂ ಕಾರ್ನರ್ ನೋಟಿಸ್ ನೀಡಬೇಕೆಂದು ಎಸ್ಐಟಿಯವರು ಮನವಿ ಮಾಡಿದ್ದರು. ಸಿಬಿಐ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದೆ. 197 ದೇಶಗಳಲ್ಲಿ ಇಂಟರ್ ಪೋಲ್ ನಿಂದ ಬ್ಲೂ ಕಾರ್ನರ್ ನೋಟಿಸ್ ಹೋಗಿದೆ ಎಂದು ಹೇಳಿದ್ದಾರೆ.