ಚಂದ್ರಯಾನ 3 ನೌಕೆಯಿಂದ ಬೇರ್ಪಟ್ಟಿರುವ ಲ್ಯಾಂಡರ್‌ನಲ್ಲಿ ಇರಿಸಲಾದ ಕ್ಯಾಮರಾದಿಂದ ಚಂದ್ರನ ಮೇಲ್ಮೈ ಮೇಲೆ ತೆಗೆದ ಚಿತ್ರ ಹಾಗೂ ವಿಡಿಯೊಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಶುಕ್ರವಾರ (ಆಗಸ್ಟ್ 18) ಬಿಡುಗಡೆ ಮಾಡಿದೆ.
ಲ್ಯಾಂಡರ್ ತೆಗೆದ ಚಂದ್ರನ ಮೇಲ್ಮೈ ಮೇಲಿನ ಚಿತ್ರ ಹಾಗೂ ವಿಡಿಯೊಗಳನ್ನು ಇಸ್ರೊ ತಂಡ ತನ್ನ ಅಧಿಕೃತ ಎಕ್ಸ್ ತಾಣದಲ್ಲಿ ಹಂಚಿಕೊಂಡಿದೆ. ಚಂದ್ರಯಾನ 3ರ ಬಾಹ್ಯಾಕಾಶ ನೌಕೆಯಿಂದ ಲ್ಯಾಂಡರ್ ಗುರುವಾರ ಬೇರ್ಪಟ್ಟಿತ್ತು.
ಚಿತ್ರಗಳಲ್ಲಿ ಚಂದ್ರನ ಮೇಲೆ ಮೇಲೆ ಇರುವ ಕುಳಿಗಳ ಗುರುತುಗಳನ್ನು ಕಾಣಬಹುದಾಗಿದೆ.
ಈ ಸುದ್ದಿ ಓದಿದ್ದೀರಾ? ಇಂದು ಬಿಜೆಪಿ ಚುನಾವಣಾ ಸಮಿತಿ ಸಭೆ | ಪಂಚರಾಜ್ಯಗಳ ಚುನಾವಣಾ ತಂತ್ರ ಚರ್ಚೆ ಸಾಧ್ಯತೆ
ಈ ಫೊಟೊಗಳು ಆಗಸ್ಟ್ 15 ರಂದು ಸೆರೆಯಾಗಿವೆ ಹಾಗೂ ವಿಡಿಯೊಗಳು ಚಂದ್ರಯಾನ 3ರ ನೌಕೆಯಿಂದ ಲ್ಯಾಂಡರ್ ಬೇರ್ಪಟ್ಟ ಬಳಿಕ ಅಂದರೆ ಆಗಸ್ಟ್ 17ರಂದು ಸೆರೆಯಾಗಿವೆ ಎಂದು ಇಸ್ರೊ ಎಕ್ಸ್‌ನಲ್ಲಿ ಟ್ವೀಟ್ ಮೂಲಕ ಹೇಳಿದೆ.
ಚಂದ್ರಯಾನ 3 ನೌಕೆಯ ಲ್ಯಾಂಡರ್ (ವಿಕ್ರಮ್) ಮತ್ತು ರೋವರ್ (ಪ್ರಗ್ಯಾನ್) ಶುಕ್ರವಾರ ಚಂದ್ರನ ಮೇಲ್ಮೈಗೆ ಇನ್ನಷ್ಟು ಹತ್ತಿರವಾಗಲಿವೆ. ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ಸಾಧ್ಯತೆ ಇದೆ ಎಂದು ಇಸ್ರೊ ಹೇಳಿದೆ.