• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೆಳಗಿಳಿಯಲಿದ್ದಾರೆಯೇ ಸಿಟಿ ರವಿ.!?

Any Mind by Any Mind
June 29, 2023
in ಇದೀಗ, ಕರ್ನಾಟಕ, ರಾಜಕೀಯ
0
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೆಳಗಿಳಿಯಲಿದ್ದಾರೆಯೇ ಸಿಟಿ ರವಿ.!?
Share on WhatsAppShare on FacebookShare on Telegram

ADVERTISEMENT

ಹೌದು..  ಇಂತದ್ದೊಂದು ಪ್ರಶ್ನೆ ಕಳೆದ ಹಲವು ವಾರಗಳಿಂದ ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿದೆ ಇದಕ್ಕೆ ಪ್ರಮುಖ ಕಾರಣ ಅಂದ್ರೆ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲು ಅಂತ ಹೇಳಲಾಗುತ್ತದೆ. ಈಗಾಗಲೇ ಬಿಜೆಪಿಯ ಒಳಗೆ ಆಂತರಿಕ ಕಚ್ಚಾಟಗಳು ಹೆಚ್ಚಾಗಿವೆ ಎಂಬ ವರದಿಗಳು ಬರುತ್ತಿವೆ ಇದರ ನಡುವೆ ಇದೀಗ ಕೆಲ ಕಾರ್ಯಕರ್ತರು ಪಕ್ಷದ ಕೆಲ ನಾಯಕರನ್ನ ಪ್ರಮುಖ ಸ್ಥಾನಗಳಿಂದ ಕೆಳಗಿಳಿಸುವಂತೆ ಒತ್ತಾಯವನ್ನ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅದರಲ್ಲೂ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸಬೇಕು ಎಂಬ ಒತ್ತಡ ಒಂದು ಕಡೆಯಲ್ಲಿ ಕೇಳಿ ಬಂದರೆ, ಮತ್ತೊಂದು ಕಡೆಯಲ್ಲಿ ಸಿ.ಟಿ ರವಿ ಅವರನ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೆಳಗಿಳಿಸಬೇಕು ಅಂತ ಪಕ್ಷದ ಕಾರ್ಯಕರ್ತರು ಒತ್ತಡವನ್ನ ಹೇರುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತವೆ. ಇದಕ್ಕೆ ಹಲವು ಕಾರಣಗಳನ್ನ ನೀಡಲಾಗುತ್ತಿದೆ ಆದ್ರು ಸಾಕಷ್ಟು ಮಂದಿ ಹೇಳುತ್ತಿರುವುದು ಸಿ.ಟಿ ರವಿ ಅವರ ವಿವಾದಾತ್ಮಕ ಹೇಳಿಕೆಗಳು ಪಕ್ಷದ ವರ್ಚಸ್ಸಿಗೆ ಧಕ್ಕೆಯನ್ನು ತರುತ್ತೇವೆ ಎಂಬುದು.

ಆದರೆ ಇದನ್ನ ಹೊರತುಪಡಿಸಿ ಸಾಕಷ್ಟು ಮಂದಿ ಬಿಜೆಪಿಯ ಕಾರ್ಯಕರ್ತರಿಂದ ಬರುತ್ತಿರುವ ಅಭಿಪ್ರಾಯವೆಂದರೆ ಸಿ.ಟಿ ರವಿ ಸೇರಿದ ಹಾಗೆ ಈಗ ಪಕ್ಷದಲ್ಲಿ ಉನ್ನತ ಸ್ಥಾನದಲ್ಲಿ ಇರುವಂತಹ ಬಹುತೇಕ ನಾಯಕರು ಕಾರ್ಯಕರ್ತರ ಮಾತಿಗೆ ಬೆಲೆ ಕೊಡುತ್ತಿಲ್ಲ ಕಾರ್ಯಕರ್ತರನ್ನ ದುಡಿಸಿಕೊಳ್ಳುತ್ತಾರೆ ಹೊರತು ಅವರನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳುತ್ತಿಲ್ಲ, ಕಾರ್ಯಕರ್ತರ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಒದಗಿಸುವಲ್ಲಿಯೂ ಕೂಡ ಪಕ್ಷದ ಪ್ರಮುಖ ನಾಯಕರು ಕಾರ್ಯವನ್ನು ನಿರ್ವಹಿಸಿಲ್ಲ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಹೀಗಾಗಿ ಸಿ.ಟಿ ರವಿ, ಸಂಸದ ನಳಿನ್ ಕುಮಾರ್ ಕಟೀಲ್, ಡಿ.ವಿ. ಸದಾನಂದ ಗೌಡ ಸೇರಿದ ಹಾಗೆ ಪಕ್ಷದ ಹಲವು ನಾಯಕರಿಗೆ ಮುಂದಿನ ಬಾರಿ ಟಿಕೆಟ್ ಹಾಗೂ ಪ್ರಮುಖ ಸ್ಥಾನಗಳನ್ನು ಕೊಡಬಾರದು ಎಂಬ ಒತ್ತಾಯಗಳು ಕೇಳಿ ಬರುತ್ತಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಬಿಜೆಪಿ ಹೈಕಮಾಂಡ್ ಯಾವ ರೀತಿಯಾದ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಅನ್ನೋದನ್ನ ಕಾದು ನೋಡಬೇಕಾಗಿದೆ

Tags: BJPctravidv sadananda gowdaNalin Kumar Kateelನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ಇಂದು ಮತ್ತು ನಾಳೆ ಹಿಂಸಾಚಾರ ಪೀಡಿತ ಮಣಿಪುರಕ್ಕೆ ರಾಹುಲ್ ಗಾಂಧಿ ಭೇಟಿ

Next Post

ಬಿಬಿಎಂಪಿ ಮುಖ್ಯ ಅಭಿಯಂತರ ವರ್ಗಾವಣೆಗೆ ಸಿಎಂ ಸೂಚನೆ; ಅಧಿಕೃತ ಆದೇಶ ಪ್ರಕಟ

Related Posts

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ
ರಾಜಕೀಯ

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

by ಪ್ರತಿಧ್ವನಿ
April 28, 2026
0

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡುವ ಮಹತ್ವದ ನಿರ್ಧಾರಕ್ಕೆ ಅನುಗುಣವಾಗಿ, ಉಚ್ಚ ನ್ಯಾಯಾಲಯದ ಆದೇಶದಂತೆ ಸರ್ಕಾರಿ ಹುದ್ದೆಗಳ ನೇಮಕಾತಿಯನ್ನು ಮುಂದುವರಿಸಲು ರಾಜ್ಯ ಸರ್ಕಾರವು ಏಪ್ರಿಲ್ 27, 2026ರಂದು ಆದೇಶ...

Read moreDetails
ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

April 28, 2026
ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

April 28, 2026
ಬಂಗಾಳ ರಾಜಕೀಯದಲ್ಲಿ ತೀವ್ರ ಪೈಪೋಟಿ: ಮಮತಾ ವಿರುದ್ಧ ರಾಹುಲ್ ಗುಡುಗು, ಮೈತ್ರಿಗೆ ಶಾಕ್?

ಬಂಗಾಳ ರಾಜಕೀಯದಲ್ಲಿ ತೀವ್ರ ಪೈಪೋಟಿ: ಮಮತಾ ವಿರುದ್ಧ ರಾಹುಲ್ ಗುಡುಗು, ಮೈತ್ರಿಗೆ ಶಾಕ್?

April 28, 2026
ಬಂಗಾಳ ಅಸ್ಮಿತೆ ವಿರುದ್ಧ ಬಿಜೆಪಿ ಸವಾಲು: ಗೆಲುವಿಗೆ ತಂತ್ರವೇ? ಕುತಂತ್ರವೇ?

ಬಂಗಾಳ ಅಸ್ಮಿತೆ ವಿರುದ್ಧ ಬಿಜೆಪಿ ಸವಾಲು: ಗೆಲುವಿಗೆ ತಂತ್ರವೇ? ಕುತಂತ್ರವೇ?

April 27, 2026
Next Post
ಬಿಬಿಎಂಪಿ ಮುಖ್ಯ ಅಭಿಯಂತರ ವರ್ಗಾವಣೆಗೆ ಸಿಎಂ ಸೂಚನೆ; ಅಧಿಕೃತ ಆದೇಶ ಪ್ರಕಟ

ಬಿಬಿಎಂಪಿ ಮುಖ್ಯ ಅಭಿಯಂತರ ವರ್ಗಾವಣೆಗೆ ಸಿಎಂ ಸೂಚನೆ; ಅಧಿಕೃತ ಆದೇಶ ಪ್ರಕಟ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada