ಹೌದು.. ಇಂತದ್ದೊಂದು ಪ್ರಶ್ನೆ ಕಳೆದ ಹಲವು ವಾರಗಳಿಂದ ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿದೆ ಇದಕ್ಕೆ ಪ್ರಮುಖ ಕಾರಣ ಅಂದ್ರೆ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲು ಅಂತ ಹೇಳಲಾಗುತ್ತದೆ. ಈಗಾಗಲೇ ಬಿಜೆಪಿಯ ಒಳಗೆ ಆಂತರಿಕ ಕಚ್ಚಾಟಗಳು ಹೆಚ್ಚಾಗಿವೆ ಎಂಬ ವರದಿಗಳು ಬರುತ್ತಿವೆ ಇದರ ನಡುವೆ ಇದೀಗ ಕೆಲ ಕಾರ್ಯಕರ್ತರು ಪಕ್ಷದ ಕೆಲ ನಾಯಕರನ್ನ ಪ್ರಮುಖ ಸ್ಥಾನಗಳಿಂದ ಕೆಳಗಿಳಿಸುವಂತೆ ಒತ್ತಾಯವನ್ನ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅದರಲ್ಲೂ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸಬೇಕು ಎಂಬ ಒತ್ತಡ ಒಂದು ಕಡೆಯಲ್ಲಿ ಕೇಳಿ ಬಂದರೆ, ಮತ್ತೊಂದು ಕಡೆಯಲ್ಲಿ ಸಿ.ಟಿ ರವಿ ಅವರನ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೆಳಗಿಳಿಸಬೇಕು ಅಂತ ಪಕ್ಷದ ಕಾರ್ಯಕರ್ತರು ಒತ್ತಡವನ್ನ ಹೇರುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತವೆ. ಇದಕ್ಕೆ ಹಲವು ಕಾರಣಗಳನ್ನ ನೀಡಲಾಗುತ್ತಿದೆ ಆದ್ರು ಸಾಕಷ್ಟು ಮಂದಿ ಹೇಳುತ್ತಿರುವುದು ಸಿ.ಟಿ ರವಿ ಅವರ ವಿವಾದಾತ್ಮಕ ಹೇಳಿಕೆಗಳು ಪಕ್ಷದ ವರ್ಚಸ್ಸಿಗೆ ಧಕ್ಕೆಯನ್ನು ತರುತ್ತೇವೆ ಎಂಬುದು.
ಆದರೆ ಇದನ್ನ ಹೊರತುಪಡಿಸಿ ಸಾಕಷ್ಟು ಮಂದಿ ಬಿಜೆಪಿಯ ಕಾರ್ಯಕರ್ತರಿಂದ ಬರುತ್ತಿರುವ ಅಭಿಪ್ರಾಯವೆಂದರೆ ಸಿ.ಟಿ ರವಿ ಸೇರಿದ ಹಾಗೆ ಈಗ ಪಕ್ಷದಲ್ಲಿ ಉನ್ನತ ಸ್ಥಾನದಲ್ಲಿ ಇರುವಂತಹ ಬಹುತೇಕ ನಾಯಕರು ಕಾರ್ಯಕರ್ತರ ಮಾತಿಗೆ ಬೆಲೆ ಕೊಡುತ್ತಿಲ್ಲ ಕಾರ್ಯಕರ್ತರನ್ನ ದುಡಿಸಿಕೊಳ್ಳುತ್ತಾರೆ ಹೊರತು ಅವರನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳುತ್ತಿಲ್ಲ, ಕಾರ್ಯಕರ್ತರ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಒದಗಿಸುವಲ್ಲಿಯೂ ಕೂಡ ಪಕ್ಷದ ಪ್ರಮುಖ ನಾಯಕರು ಕಾರ್ಯವನ್ನು ನಿರ್ವಹಿಸಿಲ್ಲ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಹೀಗಾಗಿ ಸಿ.ಟಿ ರವಿ, ಸಂಸದ ನಳಿನ್ ಕುಮಾರ್ ಕಟೀಲ್, ಡಿ.ವಿ. ಸದಾನಂದ ಗೌಡ ಸೇರಿದ ಹಾಗೆ ಪಕ್ಷದ ಹಲವು ನಾಯಕರಿಗೆ ಮುಂದಿನ ಬಾರಿ ಟಿಕೆಟ್ ಹಾಗೂ ಪ್ರಮುಖ ಸ್ಥಾನಗಳನ್ನು ಕೊಡಬಾರದು ಎಂಬ ಒತ್ತಾಯಗಳು ಕೇಳಿ ಬರುತ್ತಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಬಿಜೆಪಿ ಹೈಕಮಾಂಡ್ ಯಾವ ರೀತಿಯಾದ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಅನ್ನೋದನ್ನ ಕಾದು ನೋಡಬೇಕಾಗಿದೆ