• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, August 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಲಿಂಗಾಯತರನ್ನು ಮತಕ್ಕಾಗಿ ಮಾತ್ರ ಬಳಕೆ ಮಾಡ್ತಿದ್ಯಾ ಬಿಜೆಪಿ ಹೈಕಮಾಂಡ್​ ?

Any Mind by Any Mind
December 15, 2022
in ಕರ್ನಾಟಕ, ರಾಜಕೀಯ
0
ಲಿಂಗಾಯತರನ್ನು ಮತಕ್ಕಾಗಿ ಮಾತ್ರ ಬಳಕೆ ಮಾಡ್ತಿದ್ಯಾ ಬಿಜೆಪಿ ಹೈಕಮಾಂಡ್​ ?
Share on WhatsAppShare on FacebookShare on Telegram

ರಾಜ್ಯದಲ್ಲಿ ಲಿಂಗಾಯತ ಸಮುದಾಯವನ್ನು ಬತ್ತಳಿಕೆಯನ್ನಾಗಿ ಮಾಡಿಕೊಂಡು ಅಧಿಕಾರ ಅನುಭವಿಸಿದ ಪಕ್ಷ ಎಂದರೆ ಬಿಜೆಪಿ ಎಂದು ಧೈರ್ಯವಾಗಿ ಹೇಳಬಹುದು. ಆದರೆ ಅದೇ ಬಿಜೆಪಿಗೆ ಇದೀಗ ಲಿಂಗಾಯತರನ್ನು ಕಂಡರೆ ಅಷ್ಟಕ್ಕೆ ಅಷ್ಟೆ ಎನ್ನುವಂತಾಗಿದೆ. 75 ವರ್ಷ ದಾಟಿದ ಮೇಲೂ ಅಧಿಕಾರ ನಡೆಸಲು ಅವಕಾಶ ಕೊಟ್ಟಿದ್ದ ಬಿಜೆಪಿ, ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಇಳಿಸುವಾಗ ತುಸು ಖಾರವಾಗಿಯೇ ನಡೆದುಕೊಂಡಿತ್ತು. ಬಹಿರಂಗವಾಗಿ ಏನನ್ನೂ ಹೇಳಿಕೊಳ್ಳಲಾಗದ ಯಡಿಯೂರಪ್ಪ, ವಿಧಾನಸೌಧದ ಬ್ಯಾಂಕ್ವೆಟ್​ ಹಾಲ್​ನಲ್ಲಿ ಕಣ್ಣೀರು ಸುರಿಸಿ ರಾಜೀನಾಮೆ ವಿಚಾರ ಘೋಷಣೆ ಮಾಡಿದ್ದರು. ಆ ಬಳಿಕ ಯಡಿಯೂರಪ್ಪ ಅವರನ್ನು ನೆಪಮಾತ್ರಕ್ಕೆ ಬಿಜೆಪಿ ಬಳಸಿಕೊಳ್ಳುತ್ತಿದ್ಯಾ ಅನ್ನೋ ಅನುಮಾನ ಲಿಂಗಾಯತ ಸಮುದಾಯದಲ್ಲೇ ಮೂಡುವಂತಾಗಿದೆ. 

ADVERTISEMENT

ಯಡಿಯೂರಪ್ಪ ಹಿಂದೆ ಗನ್​ಮ್ಯಾನ್​​ ವೇಷದಲ್ಲಿ ಇರೋದ್ಯಾರು..? 

ಯಡಿಯೂರಪ್ಪ ಯಾವುದನ್ನೂ ಬಹಿರಂಗವಾಗಿ ಹೇಳದೆ ಇರಲು ಕಾರಣವನ್ನು ಕಾಂಗ್ರೆಸ್​ ನಾಯಕ ಲಕ್ಷ್ಮಣ್ ಬಿಚ್ಚಿಟ್ಟಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಹಿಂದೆ ಗನ್ ಮ್ಯಾನ್ ವೇಷದಲ್ಲಿ ಒಬ್ಬರು ಇಡಿ ಅಧಿಕಾರಿ ಇರ್ತಾರೆ. ಯಡಿಯೂರಪ್ಪ ಅವರು ಎಲ್ಲೇ ಇರಲಿ ಅಲ್ಲಿ ಇಡಿ ಅಧಿಕಾರಿ ಹಾಜರಿ ಇರ್ತಾರೆ. ಗನ್ ಮ್ಯಾನ್ ಧಿರಿಸಿನಲ್ಲೇ ಅವರು ಇರ್ತಾರೆ, ಅವರೇ ಯಡಿಯೂರಪ್ಪ ಅವರ ಬಾಯಿಂದ ಹೇಳಿಕೆ ಕೊಡಿಸ್ತಾರೆ ಎಂದಿದ್ದಾರೆ. ಯಡಿಯೂರಪ್ಪ ಅವರ ಪ್ರತಿ ‌ಭಾಷಣದ ವೇಳೆ ಅವರು ಇರ್ತಾರೆ. ಅವರು ಯಾರು ಅಂತ ನಾನು‌ ತೋರಿಸ್ತೇನೆ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಅದೇ ಕಾರಣಕ್ಕೆ ಯಡಿಯೂರಪ್ಪ ಬಿಜೆಪಿ ಬೆಳವಣಿಗೆ ಬಗ್ಗೆ ಏನನ್ನೂ ‌ಮಾತನಾಡಲ್ಲ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಗಂಭೀರವಾದ ಆರೋಪ ಮಾಡಿದ್ದಾರೆ. 

ಜೆಪಿ ನಡ್ಡಾ ಕಾರ್ಯಕ್ರಮಕ್ಕೆ BSYಗೆ ಆಹ್ವಾನವೇ ಇರಲಿಲ್ಲ..!

ಕಾಂಗ್ರೆಸ್​ ವಕ್ತಾರ ಲಕ್ಷ್ಮಣ್​ ಅವರ ಆರೋಪ ಸತ್ಯವೋ ಅಲ್ಲವೋ ಅನ್ನೋದನ್ನು ಸ್ವತಃ ಬಿ.ಎಸ್​ವ ಯಡಿಯೂರಪ್ಪ ಬಹಿರಂಗ ಮಾಡಬೇಕಿದೆ. ಒಂದು ವೇಳೆ ಆ ರೀತಿ ಯಡಿಯೂರಪ್ಪ ಅವರನ್ನು ಬಿಜೆಪಿ ಕಟ್ಟಿಹಾಕಿದ್ರೆ ಇದು ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಂತೆ ಆಗುತ್ತದೆ. ಆದರೆ ಇವತ್ತು ಕೊಪ್ಪಳದಲ್ಲಿ ಬಿಜೆಪಿ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಆಗಮಿಸಿದ್ದು, ಮಾಜಿ ಸಿಎಂ ಯಡಿಯೂರಪ್ಪಗೆ ಆಹ್ವಾನವೇ ಇರಲಿಲ್ಲ. ಕೊನೇ ಕ್ಷಣದಲ್ಲಿ ಬಿಜೆಪಿ ವಿಧಾನಪರಿಷತ್​ ಸದಸ್ಯ ಎನ್​. ರವಿಕುಮಾರ್​​ ಕಾವೇರಿ ನಿವಾಸಕ್ಕೆ ತೆರಳಿ ಆಹ್ವಾನ ನೀಡಿದ್ದಾರೆ. ಜೆಪಿ ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗು ಬಿಜೆಪಿ ರಾಜ್ಯ ಅಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ಗೆ ಮಾತ್ರವೇ ಆಹ್ವಾನ ನೀಡಲಾಗಿತ್ತು. ಲಿಂಗಾಯತ ಮತಗಳು ಕೈತಪ್ಪುವ ಆತಂಕದಲ್ಲಿ ಕೊನೆ ಕ್ಷಣದಲ್ಲಿ ಕರೆಸಿಕೊಳ್ಳಲಾಗ್ತಿದೆ ಎನ್ನಲಾಗಿದೆ. 

ಮತಕ್ಕಾಗಿ ಮಾತ್ರವೇ ಯಡಿಯೂರಪ್ಪ ಅವರನ್ನು ಬಳಸ್ತಿದೆಯಾ ಬಿಜೆಪಿ..?

ಯಡಿಯೂರಪ್ಪ ಬಗ್ಗೆ ಬಿಜೆಪಿಯಲ್ಲಿ ಕಿಂಚಿತ್ತು ಗೌರವವಿಲ್ಲ, ಆದರೆ ಯಡಿಯೂರಪ್ಪ ಬಿಜೆಪಿ ಬಿಟ್ಟು ಬೇರೆ ಪಕ್ಷ ಕಟ್ಟುವಂತಿಲ್ಲ ಜೊತೆಗೆ ಬೇರೆ ಪಕ್ಷ ಸೇರಲೂ ಬಾರದು ಅನ್ನೋದು ಬಿಜೆಪಿ ರಾಷ್ಟ್ರೀಯ ನಾಯಕರ ಲೆಕ್ಕಾಚಾರ. ಇದೇ ಕಾರಣದಿಂದ ಹಾವು ಸಾಯಬಾರದು ಕೋಲು ಮುರಿಯಬಾರದು ಅನ್ನೋ ಸೂತ್ರ ಅಳವಡಿಸಿಕೊಂಡಿರುವ ಬಿಜೆಪಿ ಹೈಕಮಾಂಡ್​, ಯಡಿಯೂರಪ್ಪ ಅವರನ್ನು ಸಂಸದೀಯ ಮಂಡಳಿ ಸದಸ್ಯರನ್ನಾಗಿ ಮಾಡುವಂತೆ ಮಾಡಿದ್ದಾರೆ. ಆದರೆ ಎಲ್ಲಿಯೂ ಯಡಿಯೂರಪ್ಪ ಅವರ ಮಾತು ನಡೆಯುವುದಿಲ್ಲ, ಇದೊಂದು ಚುನಾವಣೆಯನ್ನು ಯಡಿಯೂರಪ್ಪ ಮುಖ ತೋರಿಸಿಕೊಂಡು ಲಿಂಗಾಯತರ ಮತಗಳನ್ನು ಪಡೆಯುವುದು ಬಿಜೆಪಿ ಅಷ್ಟೆ ಎನ್ನಲಾಗ್ತಿದೆ. ಇದೊಂದು ಚುನಾವಣೆ ಕಳೆದರೆ ಯಡಿಯೂರಪ್ಪ ದಾರಿ ಬೇರೆ, ಬಿಜೆಪಿ ದಾರಿಯೂ ಬೇರೆ ಅನ್ನೋ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿವೆ. 

ವಿಜಯೇಂದ್ರ ಸ್ಪರ್ಧೆ ಬಗ್ಗೆಯೂ ನೋ ಕಮೆಂಟ್ಸ್​..!

ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕೆ ಇಳಿದಿದ್ದ ಯಡಿಯೂರಪ್ಪ ಶಿಕಾರಿಪುರದಲ್ಲಿ ಕೆರೆಯೊಂದಕ್ಕೆ ಬಾಗಿನ ಅರ್ಪಿಸಲು ತೆರಳಿದ್ದರು. ಈ ವೇಳೆ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಹೀಗಾಗಿ ನನ್ನ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧೆ ಮಾಡಲಿದ್ದಾರೆ ಎಂದಿದ್ದರು. ಇದೊಂದು ಸಹಜವಾದ ಪುತ್ರ ಪ್ರೇಮ ಎನ್ನಬಹುದು. ಆದರೆ ಅದನ್ನೂ ಸಹಿಸದ ಬಿಜೆಪಿ ಹೈಕಮಾಂಡ್​, ಒಂದೇ ದಿನದಲ್ಲಿ ಹೇಳಿಕೆ ಹಿಂಪಡೆಯುವಂತೆ ಮಾಡಿತ್ತು. ಹೇಳಿಕೆ ಕೊಟ್ಟ ಮಾರನೆ ದಿನವೇ ಮರು ಹೇಳಿಕೆ ನೀಡಿದ್ದ ಯಡಿಯೂರಪ್ಪ, ನನ್ನ ಆಸೆಯನ್ನು ನಾನು ಹೇಳಿದ್ದೆ, ಆದರೆ ಬಿಜೆಪಿ ಹೈಕಮಾಂಡ್​ ಎಲ್ಲಿಂದ ಸ್ಪರ್ಧೆ ಮಾಡಬೇಕು ಎನ್ನುತ್ತದೆಯೋ ಅಲ್ಲಿಂದಲೇ ಸ್ಪರ್ಧೆ ಮಾಡಲಿದ್ದಾರೆ ಎಂದಿದ್ದರು. ಇದೊಂದು ಹೇಳಿಕೆ, ಯಡಿಯೂರಪ್ಪ ಬಿಜೆಪಿಯಲ್ಲಿ ಎಷ್ಟು ಸ್ವತಂತ್ರರಾಗಿದ್ದಾರೆ ಎನ್ನುವುದನ್ನು ಸಾರಿ ಸಾರಿ ಹೇಳುತ್ತಿದೆ ಅಲ್ಲವೇ..? 

ಕೃಷ್ಣಮಣಿ

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

Vishal Exclusive Video : ಕನ್ನಡದಲ್ಲಿ ಮಾತನಾಡುವುದಕ್ಕೆ ಆಸೆ ಇದೆ ಆದರೆ… ಕ್ಷಮಿಸಿ | Pratidhvani

Next Post

ಶ್ರದ್ದಾ ವಾಲ್ಕರ್‌ ಹತ್ಯೆ ಪ್ರಕರಣ; ಪೊಲೀಸರ ಕೈ ಸೇರಿದ DNA ವರದಿ

Related Posts

ಎಲ್ಲವೂ ಸರಿ ಇದೆಯೇ ʼSIRʼ? ಕರ್ನಾಟಕದ ಪ್ರಶ್ನೆ
Top Story

ಎಲ್ಲವೂ ಸರಿ ಇದೆಯೇ ʼSIRʼ? ಕರ್ನಾಟಕದ ಪ್ರಶ್ನೆ

by ನಾ ದಿವಾಕರ
August 29, 2026
0

ಭಾರತೀಯ ಪ್ರಜಾತಂತ್ರ ಎಲ್ಲಿಂದ ಎಲ್ಲಿಗೆ ಬಂದು ತಲುಪಿದೆ ? ವಸಾಹತು ಆಳ್ವಿಕೆಯಲ್ಲಿ , 1947ರ ಹೊಸ್ತಿಲಲ್ಲೂ ಸಹ ಶೇಕಡಾ 13ರಷ್ಟು ಭಾರತೀಯರು ಮಾತ್ರ ಮತದಾನದ ಹಕ್ಕು ಹೊಂದಿದ್ದರು....

Read moreDetails
‘RSS ಬಗ್ಗೆ ಆಗ ವಿಷಕಾರಿ ಎಂದಿದ್ದರು, ಈಗ ಏಕಾಏಕಿ ಪ್ರೀತಿ ಏಕೆ?’: ಕುಮಾರಸ್ವಾಮಿಗೆ KPCC ಪ್ರಶ್ನೆ

‘RSS ಬಗ್ಗೆ ಆಗ ವಿಷಕಾರಿ ಎಂದಿದ್ದರು, ಈಗ ಏಕಾಏಕಿ ಪ್ರೀತಿ ಏಕೆ?’: ಕುಮಾರಸ್ವಾಮಿಗೆ KPCC ಪ್ರಶ್ನೆ

August 28, 2026
ಫಲಿಸಿದ ವಿಪಕ್ಷಗಳ ಅಸ್ತ್ರ: ಕಣ್ಣೀರು ಹಾಕುತ್ತಲೇ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ

ಫಲಿಸಿದ ವಿಪಕ್ಷಗಳ ಅಸ್ತ್ರ: ಕಣ್ಣೀರು ಹಾಕುತ್ತಲೇ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ

August 28, 2026
ಕರ್ನಾಟಕ ಪೊಲೀಸರಿಗೆ ಸಿಹಿಸುದ್ದಿ: ಸಂಕಷ್ಟ ಭತ್ಯೆ ಶೇ.50ರಷ್ಟು ಹೆಚ್ಚಳಕ್ಕೆ ಸಿಎಂ ಭರವಸೆ

ಕರ್ನಾಟಕ ಪೊಲೀಸರಿಗೆ ಸಿಹಿಸುದ್ದಿ: ಸಂಕಷ್ಟ ಭತ್ಯೆ ಶೇ.50ರಷ್ಟು ಹೆಚ್ಚಳಕ್ಕೆ ಸಿಎಂ ಭರವಸೆ

August 28, 2026
OMR ಶೀಟ್ ತಿದ್ದುಪಡಿ, ಸಿಸಿಟಿವಿ ಹಾಳು..ಅಕ್ರಮ ನೇಮಕಾತಿ ವಿರುದ್ಧ ಯುವ ಜನತೆ ಬೀದಿಗಿಳಿಯಿರಿ: ಕುಮಾರಸ್ವಾಮಿ

OMR ಶೀಟ್ ತಿದ್ದುಪಡಿ, ಸಿಸಿಟಿವಿ ಹಾಳು..ಅಕ್ರಮ ನೇಮಕಾತಿ ವಿರುದ್ಧ ಯುವ ಜನತೆ ಬೀದಿಗಿಳಿಯಿರಿ: ಕುಮಾರಸ್ವಾಮಿ

August 28, 2026
Next Post
ಮೆಹ್ರೌಲಿ ಹತ್ಯೆ; ಸಿಟ್ಟಿನಲ್ಲಿ ಆಕೆಯನ್ನು ಕೊಂದೆ ಎಂದ ಪ್ರಿಯಕರ ಅಫ್ತಾಬ್‌

ಶ್ರದ್ದಾ ವಾಲ್ಕರ್‌ ಹತ್ಯೆ ಪ್ರಕರಣ; ಪೊಲೀಸರ ಕೈ ಸೇರಿದ DNA ವರದಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada