• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಇಸ್ರೇಲ್‌ ಕ್ಷಿಪಣಿ ದಾಳಿಗೆ ಇರಾನ್‌ ನಾಯಕ ಖಮೇನಿ ಮನೆ ಧ್ವಂಸ..?

ಇಸ್ರೇಲ್‌ ಭೀಕರ ದಾಳಿಗೆ ತತ್ತರಿಸಿದ ಮುಸ್ಲಿಂ ರಾಷ್ಟ್ರ, ಸರ್ವೊಚ್ಚ ನಾಯಕ ಖಮೇನಿ ಮನೆ ಮೇಲೆ ಕ್ಷಿಪಣಿ ದಾಳಿಯ ದಾಖಲೆ ಬಿಡುಗಡೆ ಮಾಡಿದ ಸೇನೆ..

ಪ್ರತಿಧ್ವನಿ by ಪ್ರತಿಧ್ವನಿ
February 28, 2026
in Top Story, ದೇಶ, ರಾಜಕೀಯ, ವಿದೇಶ
0
ಇಸ್ರೇಲ್‌ ಕ್ಷಿಪಣಿ ದಾಳಿಗೆ ಇರಾನ್‌ ನಾಯಕ ಖಮೇನಿ ಮನೆ ಧ್ವಂಸ..?
Share on WhatsAppShare on FacebookShare on Telegram

ನವದೆಹಲಿ : ಇಸ್ರೇಲ್, ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷವೂ ತೀವ್ರ ಸ್ವರೂಪ ಪಡೆದುಕೊಂಡಿದೆ. ಈಗಾಗಲೇ ಇರಾನ್‌ ಮೇಲೆ ದಾಳಿ ನಡೆಸಿರುವ ಇಸ್ರೇಲ್‌ ನೂರಾರು ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ್ದಾಗಿ ಹೇಳಿದೆ. ಈ ಕುರಿತು ಇಸ್ರೇಲ್‌ ಸೇನೆಯು ಫೋಟೋ ಹಾಗೂ ವಿಡಿಯೋಗಳನ್ನು ಬಹಿರಂಗಗೊಳಿಸಿದ್ದು, ಇದಕ್ಕೆ ಇರಾನ್‌ ಕೂಡ ಬಲವಾದ ಪ್ರತೀಕಾರದ ಪ್ರತಿಜ್ಞೆ ಮಾಡಿದೆ.

ADVERTISEMENT
ASHA Workers Protest :  ಆಶಾ ಕಾರ್ಯಕರ್ತರನ್ನ ಯಾಕೆ ಕೆಲ್ಸ ದಿಂದ ತೆಗಿತಾರೆ #pratidhvani #ashaworkersprotest

ಇನ್ನೂ ಇಸ್ರೇಲ್‌ನ ಭೀಕರ ಅಟ್ಯಾಕ್‌ಗೆ ಇರಾನ್‌ನಲ್ಲಿರುವ ಮಿನಾಬ್‌ನ ಶಾಲೆಯೊಂದರ ಅಮಾಯಕ 57 ವಿದ್ಯಾರ್ಥಿನಿಯರ ಬಲಿಯಾಗಿದೆ ಎಂದು ವರದಿಗಳಾಗುತ್ತಿವೆ.

ಇಸ್ರೇಲ್ ರಕ್ಷಣಾ ಪಡೆಗಳು ರಿಲೀಸ್‌ ಮಾಡಿರುವ 15 ಸೆಕೆಂಡ್‌ಗಳ ವೀಡಿಯೋದಲ್ಲಿ ಕಪ್ಪು-ಬಿಳುಪಿನ ಬಣ್ಣ ಕಾಣಿಸಿಕೊಂಡಿದೆ. ಇದು ಬೆಟ್ಟದ ಪ್ರದೇಶದಲ್ಲಿ ಸಂಭವಿಸಿದ ಸರಣಿ ಸ್ಫೋಟಗಳನ್ನು ತೋರಿಸುತ್ತದೆ, ಅಲ್ಲದೆ ಇದು ಅಮೆರಿಕದೊಂದಿಗೆ ಇರಾನ್‌ ಮೇಲೆ ನಡೆಸಿರುವ ಜಂಟಿ ಕಾರ್ಯಾಚರಣೆಯ ಭಾಗವಾಗಿದೆ ಎಂದು ಇಸ್ರೇಲಿ ಸೇನೆ ಹೇಳಿದೆ.

ಇದನ್ನೂ ಓದಿ : ಸಿದ್ದರಾಮಯ್ಯ ಡಿಕೆಶಿಗೆ ಪಂಗನಾಮ ಹಾಕೋದು ಗ್ಯಾರಂಟಿ: ಆರ್.ಅಶೋಕ್ ವ್ಯಂಗ್ಯ

ಐಡಿಎಫ್‌ (Israel Defense Forces) ಪ್ರಕಾರ, ಈ ದೃಶ್ಯಾವಳಿಗಳು ಇರಾನ್‌ನಾದ್ಯಂತ ಮಿಲಿಟರಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ನಡಸಿರುವ ದಾಳಿಯ ಭೀಕರತೆಯನ್ನು ಕಟ್ಟಿಕೊಡುತ್ತವೆ. ವೀಡಿಯೊದಲ್ಲಿ ದಾಳಿಯ ನಿಖರವಾದ ಸ್ಥಳಗಳನ್ನು ಬಹಿರಂಗಪಡಿಸಲಾಗಿಲ್ಲವಾದರೂ, ಇಸ್ರೇಲಿ ಸೇನೆಯು ಕಾರ್ಯಾಚರಣೆಯಲ್ಲಿ ಇರಾನ್‌ ಪ್ರಮುಖ ಸ್ಥಳಗಳ ಮೇಲೂ ಅಟ್ಯಾಕ್‌ ಮಾಡಲಾಗಿದೆ ಎಂದು ತಿಳಿಸಿದ್ದು, ಇದು ದೊಡ್ಡ ಮತ್ತು ಸಂಘಟಿತ ಕಾರ್ಯಾಚರಣೆಯನ್ನು ತಿಳಿಸುತ್ತಿದೆ ಎಂದು ಸೇನೆಯ ಮಾಹಿತಿಯಾಗಿದೆ.

What we don't know about the Israel-Iran war - ABC News

ಅದೇ ಸಮಯದಲ್ಲಿ, ಇರಾನ್‌ ರಾಜಧಾನಿ ಟೆಹ್ರಾನ್‌ನಲ್ಲಿರುವ ಅಯತೊಲ್ಲಾ ಅಲಿ ಖಮೇನಿಯವರ ವಸತಿ ಕಾಂಪೌಂಡ್ ಬಳಿ ಹಾನಿಯನ್ನು ತೋರಿಸುತ್ತಿರುವ ಉಪಗ್ರಹ ಚಿತ್ರವೊಂದನ್ನೂ ಸಹ ಇಸ್ರೇಲ್‌ ಹಂಚಿಕೊಂಡಿದೆ. ಅದರಲ್ಲಿ ಖಮೇನಿಯ ವಸತಿ ಗೃಹದೊಳಗೂ ಹಾನಿಯಾಗಿರುವುದು ಕಂಡು ಬಂದಿದೆ. ಇದರಲ್ಲಿ ಮನೆಯು ಧ್ವಂಸವಾಗಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

Khamenei's compound destroyed by Israel | The Jerusalem Postಹಾನಿಗೊಳಗಾಗಿರುವ ಖಮೇಮಿ ಮನೆಯ ಕಾಂಪೌಂಡ್…

ಪುಡಿಮಾಡುತ್ತೇವೆ : ಘೋರ ಪರಿಣಾಮದ ಪ್ರತಿಜ್ಞೆ ಮಾಡಿ ಇರಾನ್….

‌ಅಮೆರಿಕ ಹಾಗೂ ಇಸ್ರೇಲ್‌ ಜಂಟಿ ದಾಳಿಗೆ ಕೆಂಡವಾಗಿರುವ ಇರಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ, ಅಮೆರಿಕ-ಇಸ್ರೇಲ್ ಜಂಟಿ ದಾಳಿಗಳಿಗೆ “ಘೋರ ಪ್ರತಿಕ್ರಿಯೆ” ನೀಡುವುದಾಗಿ ಎಚ್ಚರಿಸಿದ್ದು, ಪುಡಿ ಪುಡಿ ಮಾಡುವುದಾಗಿ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೆ ಆಪರೇಷನ್ ರೋರಿಂಗ್ ಲಯನ್ ಮತ್ತು ಎಪಿಕ್ ಫ್ಯೂರಿ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಯು ಮುಖ್ಯವಾಗಿ ಇರಾನ್‌ನ ಕ್ಷಿಪಣಿ ಉತ್ಪಾದನಾ ಘಟಕಗಳು, ಮಿಲಿಟರಿ ತಾಣಗಳು ಮತ್ತು ಸರ್ವೋಚ್ಚ ನಾಯಕ ಖಮೇನಿ ಕಚೇರಿಗೆ ಸಮೀಪವಿರುವ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿದೆ ಎಂದು ವರದಿಗಳು ತಿಳಿಸಿವೆ.

ಇರಾನ್‌ನಲ್ಲಿ ಉಭಯ ದೇಶಗಳ ಜಂಟಿ ಕಾರ್ಯಾಚರಣೆಯ ಸಾಕ್ಷಿಯನ್ನು ಹೇಳುವ, ವಿಡಿಯೋಗಳು ಈಗ ಹೊರಬರುತ್ತಿವೆ, ಅದರಲ್ಲಿ‌ ಇರಾನ್‌ನ ಪ್ರತೀಕಾರದ ಬೆದರಿಕೆಗಳು ತೀವ್ರಗೊಳ್ಳುತ್ತಿರುವುದರಿಂದ, ಪರಿಸ್ಥಿತಿ ಇನ್ನೂ ಉದ್ವಿಗ್ನತೆಯನ್ನು ಪಡೆದುಕೊಳ್ಳಲಿದೆ. ಮಿಲಿಟರಿ ದಾಳಿಗಳು ಮುಂದುವರಿದಂತೆ ಮುಂದಿನ ದಿನಗಳಲ್ಲಿ ಯುದ್ದೋನ್ಮಾದ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಯಿದೆ. ಇರಾನ್‌ನಾದ್ಯಂತ ವ್ಯಾಪಕ ಸ್ಫೋಟಗಳು ಸಂಭವಿಸಿರುವ ವರದಿಗಳು ಬಂದ ನಂತರ ಇಸ್ರೇಲ್‌ ಬಿಡುಗಡೆಗೊಳಿಸಿರುವ ಮೊದಲ ಅಧಿಕೃತ ಮಾಹಿತಿಯಾಗಿದೆ.

Tags: Aytullah ali KhameniDonald Trumpinternational newsiran israel war newsIran Supreme LeaderIran under ThreatIsrael Defence ForceIsrael Defence SystemIsrael iran conflictsIsrael launches Strike on IranIsraeli Prime Minister Benjamin Netanyahunational newsPratidhvaniTeharanworld war 3
Previous Post

ಧಗಧಗನೆ ಹೊತ್ತಿ ಉರಿದ ದುರ್ಗಾಂಬಾ ಬಸ್ ಸಂಪೂರ್ಣ ಭಸ್ಮ!

Next Post

ಈ ದಿನಾಂಕದಿಂದ ಭಾರತ-ನೇಪಾಳ ಗಡಿ ಬಂದ್: ಕಾರಣವೇನು

Related Posts

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-
Top Story

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

by ಪ್ರತಿಧ್ವನಿ
April 21, 2026
0

ವಿಶೇಷ ಲೇಖನ : ನಾ. ದಿವಾಕರ್‌.. (ಡಾ ಬಾಬು ಜಗಜೀವನ್ರಾಮ್ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣ ಕೇಂದ್ರ ಹಾಗೂ ಪರಿಶಿಷ್ಟ ಜಾತಿ/ಪಂಗಡ ವಿಶೇಷ ಘಟಕ ಮೈಸೂರು ವಿಶ್ವವಿದ್ಯಾನಿಲಯ...

Read moreDetails
“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

April 21, 2026
ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್‌ : SSLC ಹಿಂದಿ ಗ್ರೇಡ್‌ ವಿವಾದಕ್ಕೆ ನ್ಯಾಯಾಲಯ ಹೇಳಿದ್ದೇನು..?

ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್‌ : SSLC ಹಿಂದಿ ಗ್ರೇಡ್‌ ವಿವಾದಕ್ಕೆ ನ್ಯಾಯಾಲಯ ಹೇಳಿದ್ದೇನು..?

April 21, 2026
ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

April 21, 2026
ಕುಮಾರಸ್ವಾಮಿ ದೊಡ್ಡ ವ್ಯಕ್ತಿ ಇರಬಹುದು, ಆದ್ರೆ ನನಗೂ ಸಣ್ಣ ಅನುಭವವಿದೆ : ಹೆಚ್‌ಡಿಕೆಗೆ ಡಿಕೆಶಿ ಡಿಚ್ಚಿ..

ಕುಮಾರಸ್ವಾಮಿ ದೊಡ್ಡ ವ್ಯಕ್ತಿ ಇರಬಹುದು, ಆದ್ರೆ ನನಗೂ ಸಣ್ಣ ಅನುಭವವಿದೆ : ಹೆಚ್‌ಡಿಕೆಗೆ ಡಿಕೆಶಿ ಡಿಚ್ಚಿ..

April 21, 2026
Next Post
ಈ ದಿನಾಂಕದಿಂದ ಭಾರತ-ನೇಪಾಳ ಗಡಿ ಬಂದ್: ಕಾರಣವೇನು

ಈ ದಿನಾಂಕದಿಂದ ಭಾರತ-ನೇಪಾಳ ಗಡಿ ಬಂದ್: ಕಾರಣವೇನು

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada