ಮಂಡ್ಯ: ಕರ್ನಾಟಕವನ್ನು ಕಾಂಗ್ರೆಸ್ ಸರ್ಕಾರ ದಿವಾಳಿ ಮಾಡಿದ್ದಾರೆ. ಅಧಿಕಾರಕ್ಕಾಗಿ ಹೊಡೆದಾಡುತ್ತಿರುವ ಸರ್ಕಾರ ಅದು ಎಂದು ವಿಪಕ್ಷ ನಾಯಕ ಆರ್.ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮಂತ್ರಿಗಳು ಹಣ ಸಂಗ್ರಹ ಮಾಡುತ್ತಿರುವ ಏಜೆಂಟ್ಗಳು. ರಾಹುಲ್ ಗಾಂಧಿಗೆ ಎಟಿಎಂ ಆಗಿದ್ದಾರೆ. ಇದರ ವಿರುದ್ದ ಹೋರಾಟ ಮಾಡುತ್ತೇವೆ.ಕಾಂಗ್ರೆಸ್ ಮಾಡಿದ ಪಾಪದಿಂದ ರಾಜ್ಯಕ್ಕೆ ಈ ರೀತಿಯ ಪರಿಸ್ಥಿತಿ ಬಂದಿದೆ. ಬಿಜೆಪಿಗಿಂತ ಮೂರು ಪಟ್ಟು ಹೆಚ್ಚಿನ ಪರ್ಸೆಂಟೆಜ್ ಭ್ರಷ್ಟಾಚಾರ ಆರೋಪ ಕಾಂಗ್ರೆಸ್ ಮೇಲಿದೆ ಎಂದು ಆರೋಪಿಸಿದರು.

ಬಜೆಟ್ನಲ್ಲಿ ಕಳೆದ ಮೂರು ವರ್ಷದಲ್ಲಿ ಏನು ಘೋಷಣೆ ಮಾಡಿದ್ದಾರೆ ಅದರ ಬಗ್ಗೆ ಚರ್ಚೆ ಮಾಡುತ್ತೇವೆ. ಅಧಿವೇಶನದಲ್ಲಿ ಸರ್ಕಾರದ ಮುಖಕ್ಕೆ ಮಂಗಳಾರತಿ ಮಾಡುತ್ತೇವೆ. ನಮ್ಮ ಹೋರಾಟಕ್ಕೆ ಸರ್ಕಾರ ಹೆದರಿ ಉದ್ಯೋಗದ ಬಗ್ಗೆ ಘೋಷಣೆ ಮಾಡಿದ್ದಾರೆ. 65 ಸಾವಿರ ಉದ್ಯೋಗದ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಖುರ್ಚಿ ಬಿಡುವ ರಾಮಯ್ಯ ಅಲ್ಲ.ಸರ್ಕಾರ ಸತ್ತೋಗಿದೆ ಹೆಣ ಹೊರಲು ಡಿಕೆ ಮುಂದೆ ಬರ್ತಿನಿ ಅಂತಿದ್ದಾರೆ. ಸಿದ್ದರಾಮಯ್ಯ-ಡಿಕೆಶಿ ಗಲಾಟೆಯಲ್ಲಿ ಯಾವತ್ತೋ ಸರ್ಕಾರ ಬಿದ್ದುಹೋಗಬೇಕಿತ್ತು. ಎಂಎಲ್ಎಗಳು ಕಾಯುತ್ತಿದ್ದಾರೆ. ಸಿದ್ದರಾಮಯ್ಯ ಬಾಯಿ ಬಿಡ್ತಿಲ್ಲ. ಸಿದ್ದರಾಮಯ್ಯ ಡಿ.ಕೆ ಶಿವಕುಮಾರ್ಗೆ ಪಂಗನಾಮ ಹಾಕೋದು ಗ್ಯಾರಂಟಿ ಎಂದು ಕಾಂಗ್ರೆಸ್ ಸರ್ಕಾರ ವಿರುದ್ಧ ವ್ಯಂಗ್ಯವಾಡಿದರು.







