ಬೌಲರ್ ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಲಕ್ನೋ ಸೂಪರ್ ಗೈಂಟ್ಸ್ 20 ರನ್ ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಪ್ಲೇ ಆಫ್ ಗೆ ಮತ್ತಷ್ಟು ಸಮೀಪವಾಯಿತು.
ಪುಣೆಯಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಲಕ್ನೋ ಸೂಪರ್ ಗೈಂಟ್ಸ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 153 ರನ್ ಗಳಿಸಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಪಂಜಾಬ್ ಕಿಂಗ್ಸ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 133 ರನ್ ಗಳಿಸಲಷ್ಟೇ ಶಕ್ತವಾಯಿತು,

ಪಂಜಾಬ್ ಪರ ನಾಯಕ ಮಯಾಂಕ್ ಅಗರ್ ವಾಲ್ (25), ಜಾನ್ ಬೇರ್ ಸ್ಟೊ (32), ಲಿಯಾಮ್ ಲಿವಿಂಗ್ ಸ್ಟೋನ್ (18) ಮತ್ತು ರಿಷಿ ಧವನ್ (ಅಜೇಯ 21) ಹೋರಾಟ ನಡೆಸಿದ್ದು ಸಾಕಾಗಲಿಲ್ಲ.
ಪಂಜಾಬ್ ಪರ ಬಿಗು ದಾಳಿ ನಡೆಸಿದ ಮೊಹಸಿನ್ ಖಾನ್ 3 ವಿಕೆಟ್ ಕಿತ್ತರೆ, ದುಷ್ಮಂತ ಚಾಮೀರ ಮತ್ತು ಕೃನಾಲ್ ಪಾಂಡ್ಯ ತಲಾ 2 ವಿಕೆಟ್ ಗಳಿಸಿದರು.













