ದೇಶದಲ್ಲಿ ಐಪಿಎಲ್ ಪೀವರ್ ತುಸು ಹೆಚ್ಚಾದಂತೆ ಕಾಣುತ್ತಿದೆ. ಈ ಮಧ್ಯೆ ಶಿವಮೊಗ್ಗದಲ್ಲಿ ಅಭಿಮಾನಿಯೊಬ್ಬರು ತಮ್ಮ RCB ಮೇಲಿನ ಪ್ರೀತಿಗೆ ವಿಂಟೇಜ್ ಕಾರ್ಗೆ ಹೊಸ ಸ್ವರೂಪ ನೀಡಿ ಸುದ್ದಿಯಲ್ಲಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಸಂತೋಷ್ ಸದ್ಗುರು ಎಂಬುವವರು ತಮ್ಮ ಹಳೆಯ ಫಿಯೆಟ್ ಕಾರ್ಗೆ ಹೊಸ ಬಣ್ಣದ ಸ್ವರೂಪ ನೀಡುವ ಮೂಲಕ ಬೆಂಗಳೂರು ತಂಡದ ಮೇಲಿನ ತಮ್ಮ ಪ್ರೀತಿಯನ್ನು ತೋರ್ಪಡಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಆರ್ಸಿಬಿ ಅಭಿಮಾನಿಗಳನ್ನು ಬಿಟ್ಟು ಬಿಡದೆ ಕಾಡುತ್ತಿರುವ ಏಕೈಕ ಬಾಧೆ ಎಂದರೆ ಅದು ಕಪ್ ಗೆಲ್ಲದಿರುವುದು. ಪ್ರತಿ ಭಾರಿಯೂ ತಂಡ ಗೆಲಲ್ಲಿ ಸೋಲಲ್ಲಿ ಈ ಸಲ ಕಪ್ ನಮ್ದೆ ಎಂಬ ಘೋಷವಾಕ್ಯವನ್ನು ಕ್ರೀಡಾಂಗಣದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪಟಿಸುತ್ತಿರುತ್ತಾರೆ. ಅದೇ ರೀತಿ ಸದ್ಗುರು ತಮ್ಮ ಕಾರಿನ ಮೇಲೆ ಈ ಸಲ ಕಪ್ ನಮ್ದೆ ಎಂದು ಬರೆಸಿದ್ದಾರೆ.
ಇನ್ನು ಈ ಕಾರು ಹೆಚ್ಚು ಆಕರ್ಷಿತವಾಗಿರುವುದು ನಮ್ಮ ಕನ್ನಡ ಚಿತ್ರರಂಗದ ಪ್ರಮುಖ ನಟರ ಚಿತ್ರವನ್ನು ಕಾರಿನ ಮೇಲೆ ಹಾಕಿಸುವುದು. ವರನಟ ಡಾ | ರಾಜ್ಕುಮಾರ್, ಡಾ | ವಿಷ್ಣುವರ್ಧನ್, ಡಾ | ಪುನೀತ್ ರಾಜಕುಮಾರ್ ರವರ ಚಿತ್ರಗಳನ್ನು ಕಾರಿನ ಮೇಲೆ ಹಾಕಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸದ್ಗುರು, ಕಳೆದ ವರ್ಷ ತಮ್ಮ ಹಳೆಯ ಬಜಾಜ್ ಸ್ಕೂಟರ್ಗೆ ಈ ರೀತಿ ಮೊದಲು ಮಾಡಿಸಿದ್ದೆ ಈ ವರ್ಷ ಕಾರಿಗೆ ಮಾಡಿಸಿದ್ದೇನೆ. ಮೊದ ಮೊದಲು ಇದನ್ನು ಗಮನಿಸಿದ ನನ್ನ ಕುಟುಂಬ ಸದಸ್ಯರೆಲ್ಲರೂ ನಿನ್ನಗೆ ಏನಾದರೂ ತಲೆ ಕೆಟ್ಟಿಧ್ಯಾ ಅಂತ ಬೈದರು ನಂತರ ಆರ್ಸಿಬಿ ತಂಡದ ಮೇಲಿನ ನನ್ನ ಪ್ರೀತಿಯನ್ನು ಅವರು ಆರ್ಥೈಸಿಕೊಂಡರು ಈ ವರ್ಷ ನಮ್ಮ ಬೆಂಗಳೂರು ತಂಡ ಎಲ್ಲಾ ಪಂದ್ಯಗಳಲ್ಲಿ ಗೆದ್ದು ಕಪ್ಪನ್ನು ತರುತ್ತದೆ ಎಂಬ ಆತ್ಮವಿಶ್ವಾಸವನ್ನು ವ್ಯಕ್ತ್ಪಡಿಸಿದ್ದಾರೆ.