• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, September 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ಶಾರ್ಜಾದ ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್‌ ಪರಿಶೀಲನೆ..! ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ

ಪ್ರತಿಧ್ವನಿ by ಪ್ರತಿಧ್ವನಿ
September 17, 2026
in ಇದೀಗ, ಕರ್ನಾಟಕ, ರಾಜಕೀಯ, ವಿಶೇಷ
0
ಶಾರ್ಜಾದ ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್‌ ಪರಿಶೀಲನೆ..! ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ
Share on WhatsAppShare on FacebookShare on Telegram
ADVERTISEMENT

ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸುವುದು ಹಾಗೂ ಆಧುನಿಕ ಸಾರಿಗೆ ತಂತ್ರಜ್ಞಾನಗಳ ಬಳಕೆಯ ಸಾಧ್ಯತೆಯನ್ನು ಪರಿಶೀಲಿಸುವ ಉದ್ದೇಶದಿಂದ ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಶ್ರೀ ಕೆ.ಜೆ. ಜಾರ್ಜ್ ನೇತೃತ್ವದ ಕರ್ನಾಟಕ ಪ್ರವಾಸೋದ್ಯಮ ನಿಯೋಗವು ಶಾರ್ಜಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್ / ಎಲೆವೇಟೆಡ್‌ ಪಾಡ್‌ ಸಾರಿಗೆ ವ್ಯವಸ್ಥೆಯನ್ನು ಪರಿಶೀಲಿಸಿತು.

ನಿಯೋಗವು ವ್ಯವಸ್ಥೆಯ ತಾಂತ್ರಿಕ ವಿನ್ಯಾಸ, ಕಾರ್ಯಾಚರಣಾ ವಿಧಾನ, ಪ್ರಯಾಣಿಕರ ಸಾಗಣೆ ಸಾಮರ್ಥ್ಯ, ಸುರಕ್ಷತಾ ಅಂಶಗಳು ಹಾಗೂ ಕಡಿಮೆ ಭೂಬಳಕೆಯೊಂದಿಗೆ ಸಂಪರ್ಕ ಕಲ್ಪಿಸುವ ಸಾಧ್ಯತೆಗಳ ಕುರಿತು ಮಾಹಿತಿ ಪಡೆದುಕೊಂಡಿತು.

Nikhil Kumaraswamy : ರಾಮನಗರ ಬಿಟ್ಟು ಇನ್ನೆಲ್ಲಿ ಹೋಗೋಕಾಗುತ್ತೆ ಎಂದ ನಿಖಿಲ್..! #ramanagara #election

ಸಾಂಪ್ರದಾಯಿಕ ರಸ್ತೆ ಅಥವಾ ರೈಲು ಮೂಲಸೌಕರ್ಯಕ್ಕೆ ಹೋಲಿಸಿದರೆ, ಈ ಮಾದರಿಯ ಸಾರಿಗೆ ವ್ಯವಸ್ಥೆ ನೆಲಮಟ್ಟದಲ್ಲಿ ಕಡಿಮೆ ಜಾಗವನ್ನು ಬಳಸಿಕೊಂಡು ಎತ್ತರದ ಮಾರ್ಗದ ಮೂಲಕ ಪ್ರಯಾಣಿಕರನ್ನು ಸಾಗಿಸುವ ವ್ಯವಸ್ಥೆಯಾಗಿದೆ. ಪ್ರತ್ಯೇಕ ಪಾಡ್‌ಗಳ ಮೂಲಕ ಸಂಚಾರ ನಡೆಸುವ ಈ ತಂತ್ರಜ್ಞಾನವನ್ನು ಪ್ರವಾಸಿ ತಾಣಗಳ ಒಳಾಂಗಣ ಸಂಪರ್ಕ, ಕೊನೆಯ ಹಂತದ ಸಂಪರ್ಕ ಹಾಗೂ ಸ್ಥಳಾವಕಾಶ ಸೀಮಿತ ಪ್ರದೇಶಗಳಲ್ಲಿ ಬಳಸುವ ಸಾಧ್ಯತೆಗಳ ಕುರಿತು ನಿಯೋಗ ಅಧ್ಯಯನ ನಡೆಸಿತು.

Nikhil Kumaraswamy : ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆಗೆ ನಿಖಿಲ್‌ ಹೇಳಿದ್ದೇನು..! #hdkumaraswamy

ಹಂಪಿಯಂತಹ ವಿಶಾಲ ಪ್ರವಾಸಿ ವಲಯಗಳು, ಬೆಟ್ಟ ಪ್ರದೇಶಗಳು, ನಗರಗಳಿಗೆ ಹೊಂದಿಕೊಂಡಿರುವ ಪ್ರವಾಸಿ ತಾಣಗಳು ಹಾಗೂ ಭೂಸ್ವಾಧೀನಕ್ಕೆ ಅವಕಾಶ ಕಡಿಮೆ ಇರುವ ಪ್ರದೇಶಗಳಲ್ಲಿ ಇಂತಹ ಎಲೆವೇಟೆಡ್‌ ಸಾರಿಗೆ ವ್ಯವಸ್ಥೆಗಳ ಉಪಯುಕ್ತತೆ ಕುರಿತು ಮುಂದಿನ ಹಂತದಲ್ಲಿ ಪರಿಶೀಲನೆ ನಡೆಸಬಹುದಾಗಿದೆ.

Sharanu Salagar : ವೇದಿಕೆ ಮೇಲೆ ಈಶ್ವರ್‌ ಖಂಡ್ರೆ ಬಗ್ಗೆ ಬಿಜೆಪಿ ಶಾಸಕ ಶರಣು ಸಲಗಾರ್‌ ಏನಂದ್ರು.! #eshwarkhandre

ವ್ಯವಸ್ಥೆಯನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಸಚಿವ ಕೆ.ಜೆ. ಜಾರ್ಜ್, “ಪ್ರವಾಸೋದ್ಯಮ ಅಭಿವೃದ್ಧಿ ಎಂದರೆ ಕೇವಲ ತಾಣಗಳ ಅಭಿವೃದ್ಧಿಯಲ್ಲ. ಪ್ರವಾಸಿಗರು ತಾಣವನ್ನು ಸುಲಭವಾಗಿ ತಲುಪುವುದು ಮತ್ತು ತಾಣದೊಳಗೆ ಸುಗಮವಾಗಿ ಸಂಚರಿಸುವುದೂ ಅಷ್ಟೇ ಮುಖ್ಯ. ಜಗತ್ತಿನ ವಿವಿಧ ಭಾಗಗಳಲ್ಲಿ ಬಳಕೆಯಾಗುತ್ತಿರುವ ಹೊಸ ಸಾರಿಗೆ ತಂತ್ರಜ್ಞಾನಗಳನ್ನು ಅಧ್ಯಯನ ಮಾಡಿ, ಕರ್ನಾಟಕದ ಅಗತ್ಯಗಳಿಗೆ ಯಾವ ಮಾದರಿ ಸೂಕ್ತ ಎಂಬುದನ್ನು ಪರಿಶೀಲಿಸುವುದು ನಮ್ಮ ಉದ್ದೇಶವಾಗಿದೆ. ಶಾರ್ಜಾದಲ್ಲಿ ನೋಡಿದ ಈ ವ್ಯವಸ್ಥೆಯ ತಾಂತ್ರಿಕ, ಆರ್ಥಿಕ, ಸುರಕ್ಷತಾ ಹಾಗೂ ಕಾರ್ಯಾಚರಣಾ ಸಾಧ್ಯತೆಗಳನ್ನು ಅಧ್ಯಯನ ಮಾಡಿ, ರಾಜ್ಯದ ಆಯ್ದ ಪ್ರದೇಶಗಳಲ್ಲಿ ಇದರ ಬಳಕೆಗೆ ಇರುವ ಅವಕಾಶಗಳನ್ನು ಪರಿಶೀಲಿಸಲಾಗುವುದು,” ಎಂದು ತಿಳಿಸಿದರು.

DK Shivakumar : ಮಲ್ಲಿಕಾರ್ಜುನ ಖರ್ಗೆ ಅವರನ್ನು ಮರೆಯಬೇಡಿ: ಸಿಎಂ ಡಿಕೆಶಿ..! #mallikarjunkharge #pratidhvani

ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್, ಐಎಎಸ್ ಮಾತನಾಡಿ, “ಕಡಿಮೆ ಭೂಬಳಕೆಯೊಂದಿಗೆ ಸಂಪರ್ಕ ಒದಗಿಸುವ ಇಂತಹ ತಂತ್ರಜ್ಞಾನಗಳು ರಾಜ್ಯದ ಕೆಲವು ಆಯ್ದ ಪ್ರವಾಸಿ ತಾಣಗಳಲ್ಲಿ ಉಪಯುಕ್ತವಾಗಬಹುದಾದ ಸಾಧ್ಯತೆ ಇದೆ. ಮಾನ್ಯ ಪ್ರವಾಸೋದ್ಯಮ ಸಚಿವರ ನಿರ್ದೇಶನದ ಮೇರೆಗೆ ಸ್ಥಳೀಯ ಭೌಗೋಳಿಕ ಪರಿಸ್ಥಿತಿ, ಪ್ರಯಾಣಿಕರ ಪ್ರಮಾಣ, ವೆಚ್ಚ, ನಿರ್ವಹಣೆ ಮತ್ತು ಸುರಕ್ಷತೆ ಸೇರಿದಂತೆ ಎಲ್ಲ ಅಂಶಗಳನ್ನು ಒಳಗೊಂಡ ಸಮಗ್ರ ಸಾಧ್ಯತಾ ಅಧ್ಯಯನ ನಡೆಸಿ, ಅನುಕೂಲಕರ ಸ್ಥಳಗಳನ್ನು ಗುರುತಿಸುವ ಕುರಿತು ಮುಂದಿನ ಕ್ರಮ ಕೈಗೊಳ್ಳಲಾಗುವುದು,” ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆಎಸ್‌ಟಿಡಿಸಿ ಅಧ್ಯಕ್ಷ ಶ್ರೀ ಶ್ರೀನಿವಾಸ್ ಎಂ., ಪ್ರವಾಸೋದ್ಯಮ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್, ಐಎಎಸ್, ಪ್ರವಾಸೋದ್ಯಮ ಇಲಾಖೆ ಆಯುಕ್ತ ಹಾಗೂ ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಶ್ರೀ ಶಿವಪ್ರಸಾದ್ ಪಿ.ಆರ್., ಮತ್ತು ಪ್ರವಾಸೋದ್ಯಮ ಸಚಿವರ ಸಲಹೆಗಾರ ಡಾ. ಸಂತೃಪ್ತ್ ಎಚ್.ವಿ. ಉಪಸ್ಥಿತರಿದ್ದರು.

Jagadish Shetter : Siddaramaiah ಹಾಡಿ ಹೊಗಳಿದ‌ ಜಗದೀಶ್‌ ಶೆಟ್ಟರ್..! | #pratidhvani
Previous Post

ಮಗಳನ್ನ ಶಾಲೆಗೆ ಕರೆದೊಯ್ಯುತ್ತಿದ್ದಾಗಲೇ ಅನಂತ್ ನಾಗ್ ಮೇಲೆ ದಾಳಿ; ಅಂದು ನಡೆದಿದ್ದೇನು?

Next Post

ಕರಾವಳಿ–ಮಲೆನಾಡು ಪ್ರವಾಸೋದ್ಯಮಕ್ಕೆ ಪ್ರತ್ಯೇಕ ನೀತಿ; ಸಚಿವ ಸಂಪುಟದ ಮುಂದೆ ಪ್ರಸ್ತಾವನೆ: ಸಚಿವ ಕೆ.ಜೆ. ಜಾರ್ಜ್‌

Related Posts

ದಾಖಲೆಗಳಿದ್ದರೂ ಕ್ರಮವಿಲ್ಲವೇ? ಕೆಐಎಡಿಬಿ ಪ್ರಕರಣದಲ್ಲಿ ಸಚಿವರ ಮೌನಕ್ಕೆ ಕಾರಣವೇನು?
Top Story

ದಾಖಲೆಗಳಿದ್ದರೂ ಕ್ರಮವಿಲ್ಲವೇ? ಕೆಐಎಡಿಬಿ ಪ್ರಕರಣದಲ್ಲಿ ಸಚಿವರ ಮೌನಕ್ಕೆ ಕಾರಣವೇನು?

by ಪ್ರತಿಧ್ವನಿ
September 17, 2026
0

https://youtu.be/6P5B6pm7W90 ದೇವನಹಳ್ಳಿ: ದೇವನಹಳ್ಳಿ ವಿಶೇಷ ಭೂಸ್ವಾಧೀನ ಕಚೇರಿಯ ಕಾರ್ಯವೈಖರಿ ಕುರಿತು ಈಗಾಗಲೇ ಹಲವು ಆರೋಪಗಳು ಕೇಳಿಬಂದಿವೆ. ವಿಶೇಷ ಭೂಸ್ವಾಧೀನಾಧಿಕಾರಿ ಮಮತಾ ಮತ್ತು ಕೆಐಎಡಿಬಿ ಮ್ಯಾನೇಜರ್ ಮಂಜುನಾಥ್ ಅವರ...

Read moreDetails
ಕರಾವಳಿ–ಮಲೆನಾಡು ಪ್ರವಾಸೋದ್ಯಮಕ್ಕೆ ಪ್ರತ್ಯೇಕ ನೀತಿ; ಸಚಿವ ಸಂಪುಟದ ಮುಂದೆ ಪ್ರಸ್ತಾವನೆ: ಸಚಿವ ಕೆ.ಜೆ. ಜಾರ್ಜ್‌

ಕರಾವಳಿ–ಮಲೆನಾಡು ಪ್ರವಾಸೋದ್ಯಮಕ್ಕೆ ಪ್ರತ್ಯೇಕ ನೀತಿ; ಸಚಿವ ಸಂಪುಟದ ಮುಂದೆ ಪ್ರಸ್ತಾವನೆ: ಸಚಿವ ಕೆ.ಜೆ. ಜಾರ್ಜ್‌

September 17, 2026
ನವೆಂಬರ್ 1ರೊಳಗೆ ಅಕ್ರಮ ಬಂದೂಕು ಒಪ್ಪಿಸಿ; ಇಲ್ಲದಿದ್ದರೆ ಕಠಿಣ ಕ್ರಮ: ಡಿಕೆಶಿ ಎಚ್ಚರಿಕೆ

ಕರ್ನಾಟಕಕ್ಕೆ ಮತ್ತಷ್ಟು ಬರದ ಭೀತಿ; ‘ಕುಡಿಯುವ ನೀರು, ವಿದ್ಯುತ್ ಕೊರತೆಗೆ ಸಿದ್ಧರಾಗಿ’ ಎಂದ ಡಿಕೆಶಿ

September 17, 2026
ಬೆಂಗಳೂರಿನ ಈ ಕಾರ್ಯಕ್ರಮದಲ್ಲಿ ಭಾವುಕರಾದ ನಿರ್ಮಲಾ ಸೀತಾರಾಮನ್; ಕಣ್ಣೀರಿಟ್ಟ ಕೇಂದ್ರ ಸಚಿವೆ

ಬೆಂಗಳೂರಿನ ಈ ಕಾರ್ಯಕ್ರಮದಲ್ಲಿ ಭಾವುಕರಾದ ನಿರ್ಮಲಾ ಸೀತಾರಾಮನ್; ಕಣ್ಣೀರಿಟ್ಟ ಕೇಂದ್ರ ಸಚಿವೆ

September 17, 2026
ಭ್ರಷ್ಟಾಚಾರ – ವ್ಯವಸ್ಥೆಯ ಬೇರುಗಳಲ್ಲಿರುವ ವೈರಾಣು

ಭ್ರಷ್ಟಾಚಾರ – ವ್ಯವಸ್ಥೆಯ ಬೇರುಗಳಲ್ಲಿರುವ ವೈರಾಣು

September 17, 2026
Next Post
ಕರಾವಳಿ–ಮಲೆನಾಡು ಪ್ರವಾಸೋದ್ಯಮಕ್ಕೆ ಪ್ರತ್ಯೇಕ ನೀತಿ; ಸಚಿವ ಸಂಪುಟದ ಮುಂದೆ ಪ್ರಸ್ತಾವನೆ: ಸಚಿವ ಕೆ.ಜೆ. ಜಾರ್ಜ್‌

ಕರಾವಳಿ–ಮಲೆನಾಡು ಪ್ರವಾಸೋದ್ಯಮಕ್ಕೆ ಪ್ರತ್ಯೇಕ ನೀತಿ; ಸಚಿವ ಸಂಪುಟದ ಮುಂದೆ ಪ್ರಸ್ತಾವನೆ: ಸಚಿವ ಕೆ.ಜೆ. ಜಾರ್ಜ್‌

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada