• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ಅಮೆರಿಕ ವಿರುದ್ಧ ಭಾರತಕ್ಕೆ ಜಯ; ಸೂಪರ್ 8ಕ್ಕೆ ಪ್ರವೇಶ

ಪ್ರತಿಧ್ವನಿ by ಪ್ರತಿಧ್ವನಿ
June 13, 2024
in ಇದೀಗ, ಕರ್ನಾಟಕ
0
ಅಮೆರಿಕ ವಿರುದ್ಧ ಭಾರತಕ್ಕೆ ಜಯ; ಸೂಪರ್ 8ಕ್ಕೆ ಪ್ರವೇಶ
Share on WhatsAppShare on FacebookShare on Telegram

ವಿಶ್ವಕಪ್ ನ ಪಂದ್ಯದಲ್ಲಿ ಭಾರತ ತಂಡ ಅಮೆರಿಕ ವಿರುದ್ಧ ಗೆದ್ದಿದೆ. ಆತಿಥೇಯ ಅಮೆರಿಕ ತಂಡವನ್ನು (IND vs USA) 7 ವಿಕೆಟ್‌ ಗಳಿಂದ ಮಣಿಸಿ ಸೂಪರ್ 8 ಸುತ್ತಿಗೆ ಪ್ರವೇಶಿಸಿದೆ.

ADVERTISEMENT

ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಮೆರಿಕ 20 ಓವರ್‌ಗಳಲ್ಲಿ ಎಂಟು ವಿಕೆಟ್‌ ಕಳೆದುಕೊಂಡು 110 ರನ್ ಗಳಿಸಿತ್ತು. ಸವಾಲು ಬೆನ್ನಟ್ಟಿದ್ದ ಭಾರತ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಆದರೂ ಭಾರತ ತಂಡ 18.2 ಓವರ್‌ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಸೂರ್ಯಕುಮಾರ್ ಯಾದವ್ (Suryakumar Yadav) ಮತ್ತು ಶಿವಂ ದುಬೆ (Shivam Dube) ತಂಡವನ್ನು ದಡ ಸೇರಿಸಿದರು. ಈ ಜೋಡಿ 4 ನೇ ವಿಕೆಟ್ಗೆ 72 ರನ್ ಗಳ ಕಾಣಿಕೆ ನೀಡಿತು.

ಭಾರತದ ವಿರುದ್ಧ ಅಮೆರಿಕದ ಹೋರಾಟ ನಿಜಕ್ಕೂ ಆಶ್ಚರ್ಯ ಎಂಬುವಂತೆಯೇ ಇತ್ತು. ಅಲ್ಪ ಟಾರ್ಗೆಟ್ ನೀಡಿಯೂ ಗೆಲುವಿಗಾಗಿ ಅಮೆರಿಕ ಹೋರಾಟ ನಡೆಸಿತು. ಸ್ಟಾರ್ ಆಟಗಾರರೇ ಹೊಂದಿರುವ ಟೀಂ ಇಂಡಿಯಾವನ್ನು ಅಮೆರಿಕ ವೇಗಿಗಳು ಕಟ್ಟಿಹಾಕಿದ್ದು ನಿಜಕ್ಕೂ ಮೆಚ್ಚುವಂತಿತ್ತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಮೆರಿಕಕ್ಕೆ ವೇಗದ ಬೌಲರ್ ಅರ್ಶ್‌ದೀಪ್ ಸಿಂಗ್ ಶಾಕ್ ನೀಡಿದರು. ಮೊದಲ ಓವರ್‌ ನಲ್ಲೇ ಡಬಲ್ ಹೊಡೆತ ನೀಡಿದರು. ಇದರಿಂದ ತಂಡವು ಕೊನೆಯವರೆಗೂ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಅಮೆರಿಕ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 110 ರನ್ ಗಳಿಸಿತು. ತಂಡದ ಪರ ಸ್ಟೀವನ್ ಟೇಲರ್ 24 ರನ್ ಹಾಗೂ ನಿತೀಶ್ ಕುಮಾರ್ 27 ರನ್, ಆರನ್ ಜೋನ್ಸ್ 11, ಕೋರಿ ಆಂಡರ್ಸನ್ 15, ಹರ್ಮೀತ್ ಸಿಂಗ್ 10, ವ್ಯಾನ್ ಶಾಲ್ಕ್‌ವಿಕ್ 11 ರನ್ ಗಳಿಸಿದರು. ಭಾರತದ ಪರ ಅರ್ಷದೀಪ್ ಸಿಂಗ್ 4 ಓವರ್‌ಗಳಲ್ಲಿ 9 ರನ್‌ ನೀಡಿ 4 ವಿಕೆಟ್ ಪಡೆದರು.

111 ರನ್ ಗಳ ಗುರಿ ಬೆನ್ನಟ್ಟಿದ್ದ ಭಾರತಕ್ಕೂ ಅಮೆರಿಕ ಆರಂಬಿಕ ಆಘಾತ ನೀಡಿ ಸೇಡು ತೀರಿಸಿಕೊಂಡಿತು. ಭಾರತೀಯದವರೇ ಆಗಿರುವ ಸೌರಭ್ ನೇತ್ರವಾಲ್ಕರ್ ಅವರು ವಿರಾಟ್ ಕೊಹ್ಲಿಯನ್ನು ಡಕ್ ಔಟ್ ಮಾಡಿದರು. 3 ರನ್ ಗಳಿಸಿದ್ದ ರೋಹಿತ್ ಶರ್ಮಾ ಅವರನ್ನು ಔಟ್ ಮಾಡಿದರು. ರಿಷಬ್ ಪಂತ್ ಮತ್ತು ಸೂರ್ಯಕುಮಾರ್ ಯಾದವ್ ಮೂರನೇ ವಿಕೆಟ್‌ಗೆ 29 ರನ್‌ ಗಳಿಸಿದರು. ರಿಷಬ್ ಔಟ್ ಆಗುತ್ತಿದ್ದಂತೆ ಯಾದವ್ ಹಾಗೂ ದುಬೆ ಗೆಲುವಿನ ದಡ ಸೇರಿಸಿದರು.
ಯಾದವ್ 49 ಎಸೆತಗಳಲ್ಲಿ 50 ರನ್, ಶಿವಂ 35 ಅಜೇಯ 31 ರನ್ ಗಳಿಸಿದರು.

Tags: AmericaCricketIndiaShivam dubeT20yadav
Previous Post

ಅಮೆರಿಕ ವಿರುದ್ಧ ಎರಡೆರಡು ದಾಖಲೆ ಬರೆದ ಅರ್ಷದೀಪ್ ಸಿಂಗ್

Next Post

ರೈತರ ಕಬ್ಬಿನ ಬಿಲ್ ಬಾಳಿಸಿಕೊಂಡಿರುವ ಕಂಪನಿಗಳು; ಕಂಗಾಲು

Related Posts

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ
ಕರ್ನಾಟಕ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

by ಪ್ರತಿಧ್ವನಿ
April 24, 2026
0

ಬೆಂಗಳೂರು: ನಗರದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಪಾಲಿಕೆಗಳ ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ವಂಚನೆ ಯತ್ನ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ...

Read moreDetails
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

April 23, 2026
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

April 23, 2026
ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಜಿಲ್ಲಾವಾರು ವಿವರ ಇಲ್ಲಿದೆ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಜಿಲ್ಲಾವಾರು ವಿವರ ಇಲ್ಲಿದೆ

April 23, 2026
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
Next Post
ರೈತರ ಕಬ್ಬಿನ ಬಿಲ್ ಬಾಳಿಸಿಕೊಂಡಿರುವ ಕಂಪನಿಗಳು; ಕಂಗಾಲು

ರೈತರ ಕಬ್ಬಿನ ಬಿಲ್ ಬಾಳಿಸಿಕೊಂಡಿರುವ ಕಂಪನಿಗಳು; ಕಂಗಾಲು

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada