ಕಳೆದ 24 ಗಂಟೆಯಲ್ಲಿ ದೇಶದಲ್ಲಿ 7,231 ಹೊಸ ಕೋವಿಡ್ ಸೋಂಕುಗಳು ವರದಿಯಾಗುವುದರೊಂದಿಗೆ, ಭಾರತದ COVID-19 ಸಂಖ್ಯೆ 4,44,28,393 ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 64,667 ಇದೆ ಎಂದು ಇಂದು ನವೀಕರಿಸಿದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.

ಕಳೆದ 24 ಗಂಟೆಯಲ್ಲಿ ದೇಶದಲ್ಲಿ 45 ಸಾವುಗಳು ದಾಖಲಾಗಿದ್ದು, ಒಟ್ಟು ಸಾವಿಗೀಢಾದವರ ಸಂಖ್ಯೆ 5,27,874 ಕ್ಕೆ ಏರಿದೆ. ಚೇತರಿಸಿಕೊಂಡವರ ಸಂಖ್ಯೆ 4,38,35,852 ಕ್ಕೆ ಏರಿದೆ.






