ಮೆನೆ ಕೆಲಸದವರಿಗೆ ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ಉಚ್ಚಾಟಿತ ಬಿಜೆಪಿ ನಾಯಕಿಯನ್ನು ಜಾರ್ಖಂಡ್ನ ರಾಂಚಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಸೀಮಾ ಪಾತ್ರ ಸದ್ಯ ಬಂಧಿತ ಬಿಜೆಪಿ ನಾಯಕಿ ಮಂಗಳವಾರ ಇವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಚಿತ್ರಹಿಂಸೆ ನೀಡಿರುವುದಾಗಿ ಆರೋಪಿಸಿ ಸಂತ್ರಸ್ತ ವಿಡಿಯೋ ಮಾಡಿ ಆರೋಪಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು.
ವಿಚಾರ ಬೆಳಕಿಗೆ ಬರುತ್ತಿದ್ದಂತೆ ಸೀಮಾರನ್ನು ಪಕ್ಷದಿಂದ ಉಚ್ಚಾಟಿಸಿ ಆದೇಶ ಹೊರಡಿಸಲಾಗಿದೆ ಮತ್ತು ಕಠಿಣ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಲಾಗಿದೆ.
ಸಂತ್ರಸ್ತ ಮಹಿಳೆ ಸುನೀತಾ(29) ವಿಡಿಯೋದಲ್ಲಿ ತಮ್ಮ ಮಾಲಕಿ ವಿನಾಕಾರಣ ತಮ್ಮ ಮೇಲೆ ಹಲ್ಲೆ ನಡೆಸುತ್ತಿದ್ದರು ಮತ್ತು ಮನೆಯಲ್ಲಿ ಕೂಡಿ ಹಾಕಿ ಚಿತ್ರ ಹಿಂಸೆ ನೀಡುತ್ತಿದ್ದರು.
ಸೀಮಾರವರು ನನ್ನ ಮೇಲೆ ಕಬ್ಬಿಣದ ರಾಡ್ ಹಾಗೂ ಕಾವಲಿಯಿಂದ ಪದೇ ಪದೇ ಹಲ್ಲೆ ಮಾಡಿದ್ದಾರೆ. ಅವರ ಮೂತ್ರವನ್ನ ಕುಡಿಯುವಂತೆ ಬಲವಂತ ಮಾಡಿದ್ದರು ಮತ್ತು ರಾಡ್ನಿಂದ ಹೊಡೆದು ನನ್ನ ಹಲ್ಲನ್ನು ಮುರಿದಿದ್ದಾರೆ ಎಂದು ಆರೋಪಿಸಿದ್ದಾರೆ.
ಸೀಮಾರ ಪುತ್ರ ಆಯುಷ್ಮಾನ್ ಮತ್ತು ಅವರ ಸ್ನೇಹಿತರೊಬ್ಬರು ತಮ್ಮನ್ನು ಮನೆಯಿಂದ ಹೊರಬರಲು ಸಹಾಯ ಮಾಡಿದ್ದರು . ಸಂತ್ರಸ್ತ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಜೇಂದ್ರ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ದಾಖಲಿಸಲಾಗಿದೆ.