ಕೋವಿಡ್‌ನ ಎರಡನೇ ಅಲೆಯು ಭಾರತದಲ್ಲಿ ಇಷ್ಟು ಅಗಾಧವಾಗಿ ಹಬ್ಬಲು ಮೊದಲ ಅಲೆಯ ನಂತರ ಭಾರತದ ನಾಯಕರಲ್ಲಿನ ದೂರದೃಷ್ಟಿಯ ಮತ್ತು ನಾಯಕತ್ವದ ಕೊರತೆಯನ್ನು ಬಹಿರಂಗ ಪಡಿಸಿದೆ ಎಂದು ಆರ್‌ಬಿಐ ಮಾಜಿ ಗವರ್ನರ್ ರಘುರಾಂ ರಾಜನ್ ಅಭಿಪ್ರಾಯ ಪಟ್ಟಿದ್ದಾರೆ.
“ನೀವು ಜಾಗರೂಕರಾಗಿದ್ದರೆ ನೀವು ದೂರದೃಷ್ಟಿ ಉಳ್ಳವಾಗಿದ್ದರೆ ಅದು ಇನ್ನೂ ಮುಗಿದಿಲ್ಲ ಎಂಬುವುದನ್ನು ನೀವು ಗುರುತಿಸಬೇಕಾಗಿತ್ತು ”ಎಂದು ಕ್ಯಾಥ್ಲೀನ್ ಹೇಸ್ ಅವರೊಂದಿಗಿನ ಬ್ಲೂಮ್‌ಬರ್ಗ್ ಟೆಲಿವಿಷನ್ ಸಂದರ್ಶನದಲ್ಲಿ ರಾಜನ್ ಮಂಗಳವಾರ ಹೇಳಿದರು. “ಪ್ರಪಂಚದ ಉಳಿದ ಭಾಗಗಳಲ್ಲಿ ಏನಾಗುತ್ತಿದೆ ಎಂಬುವುದರ ಬಗ್ಗೆ ಗಮನ ಕೊಟ್ಟಿದ್ದಾರೆ. ಉದಾಹರಣೆ ಬ್ರೆಜಿಲ್ನಲ್ಲಿ ವೈರಸ್ ಮರಳಿ ಬರುತ್ತದೆ ಮತ್ತು ಹೆಚ್ಚು ಶಕ್ತಿಯುತ ರೂಪದಲ್ಲಿ ಕಂಡುಬರುತ್ತದೆ ಎಂದು ಮೊದಲೇ ನಿರೀಕ್ಷಿಸಲಾಗಿತ್ತು” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಕೋವಿಡ್ -19 ಪ್ರಕರಣಗಳ ಭೀಕರತೆಯಿಂದ ಭಾರತವು ಬಳಲುತ್ತಿದೆ. ಭಾನುವಾರ ದಾಖಲೆ ಪ್ರಮಾಣದ ಸಾವುಗಳು ವರದಿಯಯಾಗಿವೆ. ಪ್ರತಿದಿನ 350,000 ಕ್ಕಿಂತ ಹೆಚ್ಚಿನ ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಹರಡುವಿಕೆಯನ್ನು ತಡೆಯಲು ಕಟ್ಟುನಿಟ್ಟಾದ ಲಾಕ್‌ಡೌನ್ ಹೇರಲು ಒತ್ತಡ ಹಾಕಲಾಗುತ್ತಿದೆ. ಕಳೆದ ವರ್ಷ ಇದೇ ರೀತಿಯ ಕಾರ್ಯತಂತ್ರದಿಂದ ಆರ್ಥಿಕ ವಿನಾಶದ ಸಂಭವಿಸಿದ್ದರಿಂದ ಸರ್ಕಾರವು ಈವರೆಗೆ ಲಾಕ್‌ಡೌನ್ ತಪ್ಪಿಸುತ್ತಿದೆ.
“ಕಳೆದ ವರ್ಷ ಪ್ರಕರಣಗಳ ಕುಸಿತದ ನಂತರ ‘ವೈರಸ್ ನಮಗೆ ನೀಡಬಹುದಾದ ಕೆಟ್ಟ ಹೊಡೆತ’ವನ್ನು ನಾವು ಸಹಿಸಿಕೊಂಡಿದ್ದೇವೆ ಮತ್ತು ಈಗ ತೆರೆದುಕೊಳ್ಳುವ ಸಮಯ ಬಂದಿದೆ ಎಂಬಂತಿದ್ದ ಅಕಾಲ ತೃಪ್ತಿಯೇ ನಮ್ಮನ್ನು ಈಗ ಬಳಲಿಸುತ್ತಿದೆ” ಎಂದು ಮಾಜಿ ಇಂಟರ್ನ್ಯಾಷನಲ್ ಹಣಕಾಸು ನಿಧಿಯ ಮುಖ್ಯ ಅರ್ಥಶಾಸ್ತ್ರಜ್ಞ ಮತ್ತು ಈಗ ಚಿಕಾಗೊ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ರಾಜನ್ ಹೇಳಿದರು .
ಸೋಂಕಿನ ಮೊದಲ ಅಲೆಯ ವಿರುದ್ಧ ಭಾರತದ ಯಶಸ್ಸು ತನ್ನ ಜನಸಂಖ್ಯೆಗೆ ಬೇಕಾದ ಲಸಿಕೆಗಳನ್ನು ತ್ವರಿತವಾಗಿ ಸಿದ್ಧಪಡಿಸದಿರಲು ಕಾರಣವಾಯಿತು ಎಂದು ಅವರು ಹೇಳಿದರು. “ನಮಗೆ ಸಮಯವಿದೆ ಎಂಬ ಅರ್ಥದಲ್ಲಿರಬಹುದು ಅಥವಾ ನಾವು ವೈರಸ್‌ನೊಂದಿಗೆ ವ್ಯವಹರಿಸಿದ್ದರಿಂದ ನಾವು ಲಸಿಕೆಯನ್ನು ನಿಧಾನವಾಗಿ ತಯಾರಿಸಬಹುದು ಎಂದು ಭಾವಿಸಿದ್ದಿರಬಹುದು ”ಎಂದು ಅವರು ಹೇಳಿದರು. ಸರ್ಕಾರವು ಈಗ ಎಮರ್ಜೆನ್ಸಿ ಮೋಡ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದೂ ಅವರು ಹೇಳಿದರು.
2013 ರಿಂದ 2016 ರವರೆಗೆ ರಿಸರ್ವ್ ಬ್ಯಾಂಕ್‌ನ ನೇತೃತ್ವವನ್ನು ರಾಜನ್ ವಹಿಸಿದ್ದಾಗ ಹಣದುಬ್ಬರ ಒತ್ತಡಗಳ ನಡುವೆಯೂ ಆರ್ಥಿಕತೆಯನ್ನು ಬೆಂಬಲಿಸಲು ಸಾಧ್ಯವಾದಷ್ಟು ಪ್ರಯತ್ನಿಸಿತ್ತು ಎಂಬುವುದನ್ನು ನಾವು ಇಲ್ಲಿ ಸ್ಮರಿಸಬಹುದು.
ಆರ್‌ಬಿಐಗೆ ನೇತೃತ್ವ ವಹಿಸಿದ್ದಾಗ ರಾಜನ್ ಅವರು ಬೃಹತ್ ಪರಿಮಾಣಾತ್ಮಕ ಸರಾಗಗೊಳಿಸುವ ಕಾರ್ಯಕ್ರಮಗಳನ್ನು ಟೀಕಿಸುತ್ತಿದ್ದರು ಮತ್ತು ಸಂಭಾವ್ಯ ಬಿಗಿಗೊಳಿಸುವಿಕೆಯ ನಡುವೆ ಅಂತರರಾಷ್ಟ್ರೀಯ ಸಮನ್ವಯದ ಕೊರತೆಯು ಮಾರುಕಟ್ಟೆಯ ಚಂಚಲತೆಗೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದರು. ಅವರು ಎಚ್ವರಿಸಿದಂತೆಯೇ ಕೋವಿಡ್ ಕಾಲಕ್ಕೂ ಮೊದಲು ಮಾರುಕಟ್ಟೆಯಲ್ಲಾದ ಚಂಚಲತೆಯು ವಿಶ್ವದ ಆರ್ಥಿಕತೆಗೆ ಬಹುದೊಡ್ಡ ಹೊಡೆತ ನೀಡಿತ್ತು.