ಗೌಪ್ಯತಾ ನೀತಿ ವಿವಾದ: ಏಳು ದಿನಗಳೊಳಗೆ ಉತ್ತರಿಸುವಂತೆ ವಾಟ್ಸಪ್ ‌ಗೆ MeitY ನೋಟಿಸ್

ಗೌಪ್ಯತಾ ನೀತಿಯ ಬಗೆಗಿನ ತನ್ನ ವಿವಾದಾತ್ಮಕ ಅಪ್ಡೇಷನ್ ನ ಬಗ್ಗೆ ಏಳು ದಿನಗಳೊಳಗೆ ಪ್ರತಿಕ್ರಿಯೆ ನೀಡುವಂತೆ ಕೋರಿ ಕೇಂದ್ರ ಸರ್ಕಾರ ವಾಟ್ಸಪ್ ‌ಗೆ ನೋಟಿಸ್ ಜಾರಿ ಮಾಡಿದೆ. ಅಲ್ಲದೆ ಫೇಸ್‌ಬುಕ್‌ ಒಡೆತನದ ಈ ಸಂಸ್ಥೆಗೆ ತೃಪ್ತಿದಾಯಕವಲ್ಲದ ಪ್ರತಿಕ್ರಿಯೆ ನೀಡಿದರೆ ಸೂಕ್ತ ಕಾನೂನು ಕ್ರಮ ಎದುರಿಸಬೇಕಾಗಬಹುದು ಎಂದು ಎಚ್ಚರಿಕೆಯನ್ನೂ ನೀಡಿದೆ.

ಮೇ 18 ರಂದು ಕಳುಹಿಸಿದ ನೋಟಿಸ್‌ನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ (MeitY) ಮೇ 15 ರ ಅನುಷ್ಠಾನದ ಗಡುವನ್ನು ಮುಂದೂಡುವುದು “ಭಾರತೀಯರ ಗೌಪ್ಯತೆ, ಡಾಟಾ ಸುರಕ್ಷತೆ ಮತ್ತು ಭಾರತೀಯ ಬಳಕೆದಾರರ  ಆಯ್ಕೆಯ ಮೌಲ್ಯಗಳನ್ನು ಗೌರವಿಸುವುದರಿಂದ”  ತಪ್ಪಿಸುವುದಲ್ಲ ಎಂದು ತಿಳಿಸಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ತನ್ನ ಗೌಪ್ಯತೆ ನೀತಿ 2021 ಅನ್ನು ಹಿಂತೆಗೆದುಕೊಳ್ಳುವಂತೆ ನಿರ್ದೇಶಿಸುವ ನೋಟೀಸು ಬದಲಾವಣೆಗಳು ಮತ್ತು ಅವುಗಳನ್ನು ಪರಿಚಯಿಸುವ ವಿಧಾನವು ‘ಮಾಹಿತಿಯ ಗೌಪ್ಯತೆ, ದತ್ತಾಂಶ ಸುರಕ್ಷತೆ ಮತ್ತು ಭಾರತೀಯ ಬಳಕೆದಾರರಿಗೆ ಬಳಕೆದಾರರ ಆಯ್ಕೆಯ ಪವಿತ್ರ ಮೌಲ್ಯಗಳನ್ನು ಹಾಳು ಮಾಡುತ್ತದೆ ಮತ್ತು ಭಾರತೀಯ ನಾಗರಿಕರ ಹಕ್ಕುಗಳು ಮತ್ತು ಹಿತಾಸಕ್ತಿಗಳಿಗೆ ಹಾನಿ ಮಾಡುತ್ತದೆ’ ಎಂದು ಆತಂಕ ವ್ಯಕ್ತಪಡಿಸುತ್ತದೆ.

ವಾಟ್ಸಾಪ್ ನವೀಕರೃತ ಗೌಪ್ಯತಾ ನೀತಿಯು ಅಸ್ತಿತ್ವದಲ್ಲಿರುವ ಭಾರತೀಯ ಕಾನೂನುಗಳು ಮತ್ತು ಹಲವಾರು ನಿಯಮಗಳನ್ನು,  ನಿಬಂಧನೆಗಳನ್ನು ಉಲ್ಲಂಘಿಸುತ್ತದೆ ಎಂಬುದನ್ನು ಸಚಿವಾಲಯವು ಎತ್ತಿ ತೋರಿಸಿದೆ ಎಂದು ಮೂಲಗಳು ತಿಳಿಸಿವೆ.

ತನ್ನ ಗೌಪ್ಯತಾ ನೀತಿ-2021 ಅನ್ನು ಹಿಂತೆಗೆದುಕೊಳ್ಳುವಂತೆ ನಿರ್ದೇಶಿಸುವ ನೋಟೀಸು ಬದಲಾವಣೆಗಳು ಮತ್ತು ಅವುಗಳನ್ನು ಪರಿಚಯಿಸುವ ವಿಧಾನವು ‘ಮಾಹಿತಿಯ ಗೌಪ್ಯತೆ, ದತ್ತಾಂಶ ಸುರಕ್ಷತೆ ಮತ್ತು ಭಾರತೀಯ ಬಳಕೆದಾರರಿಗೆ ಬಳಕೆದಾರರ ಆಯ್ಕೆಯ ಪವಿತ್ರ ಮೌಲ್ಯಗಳನ್ನು ಹಾಳು ಮಾಡುತ್ತದೆ ಮತ್ತು ಭಾರತೀಯ ನಾಗರಿಕರ ಹಕ್ಕುಗಳು ಮತ್ತು ಹಿತಾಸಕ್ತಿಗಳಿಗೆ ಹಾನಿ ಮಾಡುತ್ತದೆ’ ಎಂದು ಆತಂಕ ವ್ಯಕ್ತಪಡಿಸುತ್ತದೆ.

ವಾಟ್ಸಾಪ್ ನವೀಕೃತ ಗೌಪ್ಯತಾ ನೀತಿಯು ಅಸ್ತಿತ್ವದಲ್ಲಿರುವ ಭಾರತೀಯ ಕಾನೂನುಗಳು ಮತ್ತು ಹಲವಾರು ನಿಯಮಗಳನ್ನು,  ನಿಬಂಧನೆಗಳನ್ನು ಉಲ್ಲಂಘಿಸುತ್ತದೆ ಎಂಬುದನ್ನು ಸಚಿವಾಲಯವು ಎತ್ತಿ ತೋರಿಸಿದೆ ಎಂದು ಮೂಲಗಳು ತಿಳಿಸಿವೆ.

“ಭಾರತೀಯ ನಾಗರಿಕರ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸುವ ತನ್ನ ಸಾರ್ವಭೌಮ ಜವಾಬ್ದಾರಿಯನ್ನು ಪೂರೈಸುವಲ್ಲಿ, ಭಾರತ ಸರ್ಕಾರವು ಭಾರತದಲ್ಲಿ ಕಾನೂನುಗಳ ಅಡಿಯಲ್ಲಿ ಲಭ್ಯವಿರುವ ವಿವಿಧ ಆಯ್ಕೆಗಳನ್ನು ಪರಿಗಣಿಸುತ್ತದೆ.  ಈ ನೋಟಿಸ್‌ಗೆ ಪ್ರತಿಕ್ರಿಯಿಸಲು ಸರ್ಕಾರ ವಾಟ್ಸ್‌ಆ್ಯಪ್‌ಗೆ ಏಳು ದಿನಗಳ ಕಾಲಾವಕಾಶ ನೀಡಿದೆ ಮತ್ತು ಯಾವುದೇ ತೃಪ್ತಿದಾಯಕ ಪ್ರತಿಕ್ರಿಯೆ ಬರದಿದ್ದರೆ, ಅಗತ್ಯ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು”ಎಂದು ಮೂಲಗಳು ತಿಳಿಸಿವೆ.

ಈ ವರ್ಷದ ಆರಂಭದಲ್ಲಿ ಸರ್ಕಾರವು ತ್ವರಿತ ವಾಟ್ಸಪ್ ಸಿಇಒ ವಿಲ್ ಕ್ಯಾಥ್‌ಕಾರ್ಟ್‌ಗೆ ಪತ್ರ ಬರೆದು, ಗೌಪ್ಯತೆ ನೀತಿಯಲ್ಲಿ ಪ್ರಸ್ತಾಪಿತ ಬದಲಾವಣೆಗಳನ್ನು ಹಿಂತೆಗೆದುಕೊಳ್ಳುವಂತೆ ಕೋರಿ, ಆಯ್ಕೆಯ ಪರಿಣಾಮಗಳು ಮತ್ತು ಭಾರತೀಯ ನಾಗರಿಕರ ಸ್ವಾಯತ್ತತೆಯ ಬಗ್ಗೆ ‘ಗಂಭೀರ ಕಳವಳಗಳನ್ನು’ ವ್ಯಕ್ತಪಡಿಸಿತ್ತು.

ಫೇಸ್‌ಬುಕ್ ಕಂಪನಿಗಯೊಂದಿಗೆ ಡೇಟಾ ಹಂಚಿಕೆಯಿಂದ ಹೊರಗುಳಿಯುವ ಆಯ್ಕೆಯನ್ನು ಭಾರತೀಯ ಬಳಕೆದಾರರಿಗೆ ನೀಡದೆ ಯುರೋಪಿಯನ್ ಬಳಕೆದಾರರಿಗೆ ನೀಡಿರುವುದು ತಾರತಮ್ಯ ಎಂದು  ಸರ್ಕಾರ ಹೇಳಿದೆ. “ನಿಮಗೆ ನಿಸ್ಸಂದೇಹವಾಗಿ ತಿಳಿದಿರುವಂತೆ, ಅನೇಕ ಭಾರತೀಯ ನಾಗರಿಕರು ದೈನಂದಿನ ಜೀವನದಲ್ಲಿ ಸಂವಹನ ನಡೆಸಲು ವಾಟ್ಸಾಪ್ ಅನ್ನು ಅವಲಂಬಿಸಿದ್ದಾರೆ.  ಭಾರತೀಯ ಬಳಕೆದಾರರ ಮೇಲೆ ಅನ್ಯಾಯದ ನಿಯಮಗಳು ಮತ್ತು ಷರತ್ತುಗಳನ್ನು ಹೇರವ ವಾಟ್ಸಾಪ್ ನಡೆ ಕೇವಲ ಸಮಸ್ಯಾತ್ಮಕವಲ್ಲ. ಬೇಜವಾಬ್ದಾರಿಯುತವಾಗಿದೆ. ಅದರಲ್ಲೂ ವಿಶೇಷವಾಗಿ ಯುರೋಪಿನಲ್ಲಿರುವ ಬಳಕೆದಾರರಿಗೆ ಇಲ್ಲದ ನಿಯಮ  ಭಾರತೀಯ ಬಳಕೆದಾರರ ವಿರುದ್ಧ ಹೇರಿ  ತಾರತಮ್ಯವನ್ನು ತೋರಿಸುತ್ತದೆ ”ಎಂದು Meity ಪತ್ರದಲ್ಲಿ ತಿಳಿಸಿದೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...