ಬೆಂಗಳೂರು : ಆಂಧ್ರಪ್ರದೇಶದ ವಿಶಾಖಪಟ್ಟಣಂನ ಉಕ್ಕು ಸ್ಥಾವರದಲ್ಲಿ (RINL) ಭಾರೀ ಪ್ರಮಾಣದ ಕರಗಿದ ಲೋಹ ಸ್ಫೋಟಗೊಂಡು 8 ಜನರು ಸಾವನ್ನಪ್ಪಿರುವ ಭೀಕರ ದುರಂತ ಸಂಭವಿಸಿದೆ. ಈ ದುರಂತದಲ್ಲಿ ಒಟ್ಟು 8 ಜನ ಕಾರ್ಮಿಕರು ಬಲಿಯಾಗಿದ್ದಾರೆ.

ಇನ್ನೂ ಮೃತರ ಕುಟುಂಗಬಗಳಿಗೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಈ ಪರಿಹಾರ ಕಾಯಂ ನೌಕರರು ಹಾಗೂ ಹೊರಗುತ್ತಿಗೆ ನೌಕರರೂ ಎರಡೂ ರೀತಿಯ ಕೆಲಸಗಾರರಿಗೆ ಅನ್ವಯವಾಗುತ್ತದೆ. ಅಲ್ಲದೆ, ಮೃತ ಕಾರ್ಮಿಕರ ಕುಟುಂಬದ ಒಬ್ಬ ಸದಸ್ಯರಿಗೆ ಕಾಯಂ ಉದ್ಯೋಗ, ಟೌನ್‌ಶಿಪ್‌ನಲ್ಲಿ ವಾಸವಿದ್ದ ಮನೆಯಲ್ಲೇ ಮುಂದುವರಿಯುವ ಅವಕಾಶ ಹಾಗೂ ಕುಟುಂಬದ ಎಲ್ಲ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ : ಪೋಕ್ಸೋ ಪ್ರಕರಣದಲ್ಲಿ ಯಡಿಯೂರಪ್ಪಗೆ ಹೈಕೋರ್ಟ್ ರಿಲೀಫ್!






