ಡಿಸೆಂಬರ್ 11 ರಂದು 6ನೇ ವಂದೇ ಭಾರತ್ ರೈಲನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ. ಛತ್ತೀಸ್‌ಗಢ ಬಿಲಾಸ್‌ಪುರದಿಂದ ನಾಗ್ಪುರ ರನ್ನು ತಲುಪಲಿರುವ ದೇಶದ 6ನೇ ಸೆಮಿ ಹೈಸ್ಪೀಡ್ ವಂದೇ ಭಾರತ್ ರೈಲನ್ನು ಡಿಸೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಈ ಬಗ್ಗೆ ಭಾರತೀಯ ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಧಿಕಾರಿಯ ಪ್ರಕಾರ, ರೈಲು ವಾರದಲ್ಲಿ ಆರು ದಿನಗಳು ಚಲಿಸುತ್ತದೆ ಮತ್ತು ಸುಮಾರು ಐದೂವರೆ ಗಂಟೆಗಳಲ್ಲಿ ಪ್ರಯಾಣದ ಒಂದು ಮಾರ್ಗವನ್ನು ಪೂರ್ಣಗೊಳಿಸುತ್ತದೆ.
“ಬಿಲಾಸ್ಪುರ್-ನಾಗ್ಪುರ ವಂದೇ ಭಾರತ್ ರೈಲನ್ನು ಪ್ರಧಾನಿ ನರೇಂದ್ರ ಮೋದಿ ಅವರು ಡಿ.11 ರಂದು ನಾಗ್ಪುರದಲ್ಲಿ ಉದ್ಘಾಟಿಸಲಿದ್ದಾರೆ” ಎಂದು ಅಧಿಕಾರಿ ತಿಳಿಸಿದ್ದಾರೆ.






