• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ತಮಿಳುನಾಡಿನಲ್ಲಿ ಕಾಂಗ್ರೆಸ್‌ ತಂತ್ರ ಬಳಸಿದ ಡಿಎಂಕೆ..? ಅಲ್ಲೂ ವರ್ಕ್‌ ಆಗುತ್ತಾ..?

ಕೃಷ್ಣ ಮಣಿ by ಕೃಷ್ಣ ಮಣಿ
April 13, 2024
in Top Story, ರಾಜಕೀಯ
0
ತಮಿಳುನಾಡಿನಲ್ಲಿ ಕಾಂಗ್ರೆಸ್‌ ತಂತ್ರ ಬಳಸಿದ ಡಿಎಂಕೆ..? ಅಲ್ಲೂ ವರ್ಕ್‌ ಆಗುತ್ತಾ..?
Share on WhatsAppShare on FacebookShare on Telegram

ಕರ್ನಾಟಕದಲ್ಲಿ ಆಡಳಿತದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ನಾಯಕರು ಗುರುತರ ಆರೋಪ ಮಾಡಿದ್ದರು. ಗುತ್ತಿಗೆದಾರರಿಂದ 40 ಪರ್ಸೆಂಟ್‌ ಕಮಿಷನ್‌ ಪಡೆಯುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಅಷ್ಟೇ ಅಲ್ಲದೆ ಪೇ ಸಿಎಂ (Pay CM) ಎಂದು ಪೋಸ್ಟರ್‌ ಹಾಕುವ ಮೂಲಕ ಭಾರೀ ಪ್ರಚಾರ ಗಳಿಸಿದ್ದರು. ಆ ಬಳಿಕ ಬಿಜೆಪಿ ಸರ್ಕಾರವನ್ನು ಉರುಳಿಸಿ ಭಾರೀ ಬಹುಮತದಿಂದ ಅಧಿಕಾರಕ್ಕೆ ಬರುವಲ್ಲಿ ಕಾಂಗ್ರೆಸ್‌ ಪಕ್ಷ ಯಶಸ್ಸು ಗಳಿಸಿತ್ತು. ಇದೀಗ ಇದೇ ತಂತ್ರಗಾರಿಕೆಯನ್ನು ತಮಿಳುನಾಡಿನಲ್ಲಿ ಡಿಎಂಕೆ (DMK) ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಳಸುತ್ತಿದೆ. ಪೇ ಮಾಡಿ ಸ್ಕ್ಯಾಮ್‌ ನೋಡಿ ಎನ್ನುವ ಅಭಿಯಾನ ಮಾಡಿದೆ, ಕಂಡ ಕಂಡಲ್ಲಿ ಪ್ರಧಾನಿ ಮೋದಿ ಫೋಟೋದಲ್ಲಿ ಮಾಡಿರುವ ಕ್ಯೂ ಆರ್‌ (QR Code) ಪೋಸ್ಟರ್‌ ಹಾಕಲಾಗಿದೆ.

ADVERTISEMENT

ಚುನಾವಣಾ ಬಾಂಡ್‌ ಮೂಲಕ ಮೋದಿ ಸರ್ಕಾರ ಸಂಗ್ರಹ ಮಾಡಿರುವ ಕೋಟ್ಯಂತರ ರೂಪಾಯಿ ಬಗ್ಗೆ ವಿಡಿಯೋ ಮಾಡಿರುವ ಡಿಎಂಕೆ ಪಕ್ಷ ಸ್ಕ್ಯಾನರ್‌ ಮೂಲಕ ತಮಿಳುನಾಡಿನಾದ್ಯಂತ ಜನರು ತಮ್ಮದೇ ಭಾಷೆಯಲ್ಲಿ ನೋಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ತಮಿಳುನಾಡಿನಲ್ಲಿ ಎಲೆಕ್ಟ್ರೋಲ್‌ ಬಾಂಡ್‌ ಹಗರಣ ಹಾಗು CAG ಹಗರಣವನ್ನು ಬಯಲು ಮಾಡುವ ಕೆಲಸ ಮಾಡಿದ್ದಾರೆ. ಏಪ್ರಿಲ್‌ 19ರಂದು ತಮಿಳುನಾಡಿನಲ್ಲಿ ಮೊದಲ ಹಂತದ ಚುನಾವಣಾ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಕೂಡ ಹಲವಾರು ಬಾರಿ ಪ್ರಚಾರ ಮಾಡ್ತಿದ್ದಾರೆ. ಈ ಬಾರಿ ತಮಿಳುನಾಡಿನಲ್ಲಿ ಖಾತೆ ತೆರೆಯುವ ಕಸರತ್ತು ಮಾಡಿದ್ದಾರೆ. ಆದರೆ DMK ಕೊಟ್ಟಿರುವ ಮಾಸ್ಟರ್‌ ಸ್ಟ್ರೋಕ್‌ ಮೋದಿ ಅಬ್ಬರಕ್ಕೆ ತಣ್ಣೀರು ಎರೆಚಿದೆ.

ಜೀ ಪೇ ಅಂದರೆ ಗೂಗಲ್‌ ಪೇ (Google Pay) ಅಲ್ಲ. ಆದರೆ ಹಣ ಪಾವತಿಸಿ ಜೀ ಎಂದು ಹಿಂದಿಯಲ್ಲಿ ಬಳಸಿದ್ದಾರೆ. ಇದನ್ನು ಯಾರಾದರು ಮೊಬೈಲ್‌ನಲ್ಲಿ ಸ್ಕ್ಯಾನ್‌ ಮಾಡಿದಾಗ ಎಲೆಕ್ಟ್ರೋಲ್‌ ಬಾಂಡ್‌, CAG ಹಗರಣ, ದೊಡ್ಡ ದೊಡ್ಡ ಯೋಜನೆಯಲ್ಲಿ ನಡೆದಿರುವ ಹಗರಣ ಹಾಗು ದೊಡ್ಡ ದೊಡ್ಡ ಕಾರ್ಪೊರೇಟ್‌ ಸಂಸ್ಥೆಗಳಿಗೆ ಲೋನ್‌ ಮನ್ನಾ ಮಾಡಿರುವ ಬಗ್ಗೆ ಹಲವಾರು ವಿಡಿಯೋಗಳಿವೆ. ಜನರು ಯಾವುದನ್ನು ಬೇಕಿದ್ದರು ಆಯ್ಕೆ ಮಾಡಿ ನೋಡಲು ಅವಕಾಶ ಮಾಡಿಕೊಡಲಾಗಿದೆ. ಕೊನೆಯಲ್ಲಿ ಬಿಜೆಪಿಯನ್ನು ತಿರಸ್ಕರಿಸಿ INDIA ಒಕ್ಕೂಟವನ್ನು ಬೆಂಬಲಿಸಿ ಎಂದು ಮನವಿ ಮಾಡಿಕೊಳ್ಳಲಾಗಿದೆ. ಹೊಸ ಮತದಾರರನ್ನು ಸೆಳೆಯಲು ಮೋದಿ ಕಸರತ್ತು ನಡೆಸುತ್ತಿರುವಾಗ ಸ್ಟಾಲಿನ್‌ ಪಡೆ ಈ ಕೌಂಟರ್‌ ನೀಡಿದೆ.

ಮೋದಿ ಅಬ್ಬರಿಸಿದ್ರೂ ತಮಿಳುನಾಡಲ್ಲಿ ಸಿಗ್ತಿಲ್ಲ ಯಶಸ್ಸು..!

ಪ್ರಧಾನಿ ನರೇಂದ್ರ ಮೋದಿ ಅಬ್ಬರದ ಪ್ರಚಾರ ಮಾಡ್ತಾರೆ. ತಮಿಳುನಾಡಿನ ಭಾಷಾ ಪ್ರೇಮವನ್ನೇ ಲಾಭಕ್ಕೆ ಬಳಸಿಕೊಳ್ಳುವ ಸಲುವಾಗಿ ತಮಿಳು ಭಾಷೆಯನ್ನು ಹಾಡಿ ಹೊಗಳ್ತಾರೆ. ಅವರದ್ದೇ ವೇಷಭೂಷಣ ಹಾಕಿಕೊಂಡು ಪ್ರಚಾರ ಮಾಡ್ತಾರೆ. ಆದರೂ ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತೆರೆಯುವಲ್ಲಿ ಯಶಸ್ಸು ಕಂಡಿಲ್ಲ. ಈ ಬಾರಿ ಮಾಜಿ ಪೊಲೀಸ್‌ ಅಧಿಕಾರಿ ಅಣ್ಣಾ ಮಲೈ ಅವರನ್ನು ಬಳಸಿಕೊಂಡು ಬಿಜೆಪಿ ಖಾತೆ ತೆರೆಯುವ ಹುಮ್ಮಸ್ಸಿನಲ್ಲಿದೆ. ತಮಿಳುನಾಡಿನಲ್ಲಿ ಮೊದಲ ಬಾರಿಗೆ ಮತದಾನ ಮಾಡುವ ಯುವಕರನ್ನು ಸೆಳೆಯುವ ಆಲೋಚನೆ ಬಿಜೆಪಿ ಪಕ್ಷದಲ್ಲಿದೆ. ಆದರೆ ದ್ರಾವಿಡರ ಬೀಡು ತಮಿಳುನಾಡಿನ ಜನರು ಮೋದಿಗೆ ಒಂದು ಸೀಟ್‌ ಆದರೂ ಕೊಡ್ತಾರಾ..? ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.

ಕೃಷ್ಣಮಣಿ

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ವೈರಲ್ ಆಗುತ್ತಿದೆ ಮೋದಿ ಹಾಡು; ಸಾಹೇಬ ಹೆದರಿದ್ದಾನೆ, ಮಾತಿಗೂ ಬೆದರಿದ್ದಾನೆ..!

Next Post

ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಹೇಳಿರೋದ್ರಲ್ಲಿ ಏನಾದ್ರು ಸುಳ್ಳು ಇದ್ಯಾ..?

Related Posts

ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 23, 2026
0

ಬೆಂಗಳೂರು: ಬೆಸ್ಕಾಂನ ಹೈ ಟೆನ್ಷನ್ ಗ್ರಾಹಕರಿಗಾಗಿ ಸಂಸ್ಥೆಯ ಇಂಜಿನಿಯರ್‌ಗಳು ಅಭಿವೃದ್ಧಿಪಡಿಸಿರುವ ಸೇವೆ ಕೋರಿಕೆ/ಕುಂದುಕೊರತೆ ಪರಿಹಾರ ಪೋರ್ಟಲ್ 'ಹೆಚ್‌ಟಿ ಮಿತ್ರ'ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಗುರುವಾರ...

Read moreDetails
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
ತಮಿಳುನಾಡು ಅಭಿವೃದ್ಧಿಗೆ ಮತದಾನ ಮಾಡಿ: ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೆ

ತಮಿಳುನಾಡು ಅಭಿವೃದ್ಧಿಗೆ ಮತದಾನ ಮಾಡಿ: ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೆ

April 23, 2026
ಅಬ್ಬರ, ಆರ್ಭಟದ ಬಳಿಕ ಇಂದು ಬಂಗಾಳದಲ್ಲಿ ಮತದಾನ : ದೀದಿ ಮಣಿಸಲು ಮೋದಿ ಸಕಸ್ಸ್ ಆಗ್ತಾರಾ..

ಅಬ್ಬರ, ಆರ್ಭಟದ ಬಳಿಕ ಇಂದು ಬಂಗಾಳದಲ್ಲಿ ಮತದಾನ : ದೀದಿ ಮಣಿಸಲು ಮೋದಿ ಸಕಸ್ಸ್ ಆಗ್ತಾರಾ..

April 23, 2026
Next Post
ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಹೇಳಿರೋದ್ರಲ್ಲಿ ಏನಾದ್ರು ಸುಳ್ಳು ಇದ್ಯಾ..?

ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಹೇಳಿರೋದ್ರಲ್ಲಿ ಏನಾದ್ರು ಸುಳ್ಳು ಇದ್ಯಾ..?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada