ಮಳೆಗಾಲ ಅಂದ್ರೆ ಒಂದಿಷ್ಟು ಜನಕ್ಕೆ ತುಂಬಾ ಇಷ್ಟ ಇನ್ನು ಕೆಲವರಿಗೆ ಸ್ವಲ್ಪ ಕಷ್ಟ, ಯಾಕೆ ಕಷ್ಟ ಅಂದ್ರೆ ಜೋರು ಮಳೆ ಬಂದಾಗ ಹೊರಗೆ ಹೋವುದಕ್ಕೆ ಆಗುವುದಿಲ್ಲಾ. ಮಳೆಯಲ್ಲಿ ಸ್ವಲ್ಪ ನೆನೆದ್ರೆ ಶೀತ ನೆಗಡಿ ಕೆಮ್ಮು ಶುರುವಾಗುತ್ತದೆ.ಇದೆಲ್ಲದರ ಮಧ್ಯ ತಲೆ ಸ್ನಾನ ಮಾಡಿದಾಗ ಕೂದಲನ್ನು ಒಣಗಿಸುವುದು ಸಾಹಸದ ಕೆಲಸ. ಕೂದಲ ಸರಿಯಾಗಿ ಒಣಗದಿದ್ರೆ , ಉದುರಲು ಶುರುವಾಗುತ್ತದೆ, ಡ್ಯಾಂಡ್ರಫ್ ಬಿಡದೆ ಕಾಡುತ್ತದೆ, ಕಲವರಿಗೆ ತೆಲೆಯಲ್ಲಿ ಹೇನು ಕೂಡಾ ಆಗುತ್ತದೆ..ಹಾಗಾಗಿ ಕೂದಲನ್ನು ಒಣಗಿಸುದು ಉತ್ತಮ ಮಾತ್ರವಲ್ಲದೆ ಕೂದಲಿನ ಬಗ್ಗೆ ಸಾಕಷ್ಟು ಕಾಳಜುಯನ್ನು ವಹಿಸಬೇಕು..ಇಲ್ಲವಾದಲ್ಲಿ ನಿಮ್ಮ ಹೇರ್ಲಾಸ್ ಖಂಡಿತ..ನಿಮ್ಮ ಕೇಶರಾಶಿಯ ಬಗ್ಗೆ ಯಾವ ರೀತಿ ಕಾಳಜಿ ವಹಿಸಬೇಕು ಅನ್ನುವುದರ ಮಾಹಿತಿ ಹೀಗಿದೆ.

ಮಳೆಯಲ್ಲಿ ನೆನೆದು ತಲೆ ಅಥವ ಕೂದಲು ಒದ್ದೆಯಾಗಿದ್ದರೆ. ಅದನ್ನ ಇಗ್ನೋರ್ ಮಾಡದೆ ಒಣಗಿಸಿ. ಒಂದು ಟವಲ್ನಿಂದ ಚನ್ನಾಗಿ ಒರೆಸಿ ನಂತ್ರ ಫ್ಯಾನ್ ನಿಂದ ಕೂದಲನ್ನು ಒಣಗಿಸುದುವು ಉತ್ತಮ.. ಅಧರ್ಬಂದ ಕೂದಲ ಒದ್ದೆಯಾಗಿದಲ್ಲಿ ತಲೆ ನೋವು ಶುರುವಾಗುತ್ತದೆ..ಹಾಗೂ ಶೀತಾ ಆಗುವುದು ಕಂಡಿತ.

ಇನ್ನೂ ಸ್ನಾನ ಮಾಡುವ ಮುನ್ನ ತಲೆಗೆ ಎಣ್ಣೆ ಹಚ್ಚಿ ಸ್ನಾನ ಮಾಡಿ. ಎಣ್ಣೆಹಚ್ಚುವುದರಿಂದ ಕೂದಲು ಗಾಡವಾಗಿ ಹಾಗೂ ಉದ್ದವಾಗಿ ಬೆಳೆಯುತ್ತದೆ, ಮತ್ತು ಕೂದಲಿಗೆ ಮೋಶ್ಚರೈಸ್ ಮಾಡಿದಂತಾಗುತ್ತದೆ..ಮತ್ತು ತಲೆಗೆ ಸ್ನಾನ ಮಾಡಿದ ನಂತ್ರ ಫ್ಯಾನ್ ಅಥವ ಡ್ರೈಯರ್ ಬಳಸಿ ಕೂದಲನ್ನು ಒಣಗಿಸಿ..ಹೀಗೇ ಒಣಗಿಸುವುದರಿಂದ ಬ್ಯಾಕ್ಟಿರಿಯಾದಿಂದ ಕೂದಲನ್ನು ಕಾಪಾಡಿಕೊಳ್ಳಬಹುದು.

ಇನ್ನೂ ಆಗಾಗ ನಮ್ಮ ಕೂದಲನ್ನು ಬಾಚಿಕೊಳ್ತ ಇರಬೇಕು.ಇಲ್ಲವಾದಲ್ಲಿ ಸಿಕ್ಕು ಹೆಚ್ಚುಗುತ್ತದೆ.ಸ್ಪಿಲ್ಟ್ ಎಂಡ್ ಆಗುವಂತ ಚಾಂನ್ಸ್ಸ್ ಜಾಸ್ತಿಯಿರುತ್ತದೆ..ಹಾಗೂ ಸ್ಕಾಲ್ಪ್ನಲ್ಲಿ ರಕ್ತ ಸಂಚಾರ ಚನ್ನಾಗಿ ಆಗುತ್ತದೆ..ಹಾಗೂ ಹೊರಗಡೆ ಅಥವ ಟ್ರಾವಲ್ ಮಾಡುವಾಗ ಕೂದಲನ್ನು ಕಟ್ಟಿರಬೇಕು..ಫ್ರೀ ಹೇರ್ ಬಿಟ್ಟರೆ ನಿಮ್ಮ ಕೂದಲು ಡ್ಯಾಮೇಜ್ ಆಗುವುದು ಸಹಜ..

ಇನ್ನು ನಾವೂ ತಿನ್ನುವ ಆಹಾರದ ಬಗ್ಗೆಯು ಕಾಳಜಿಯನ್ನು ವಹಿಸಬೇಕು..ನಮ್ಮ ದೇಹಕ್ಕೆ ಸರಿಯಾದ ರೀತಿಯಲ್ಲಿ ಖನಿಜಾಂಶ ಅಥವ ಪೋಶಕಾಂಶಗಳು ಸೇರದಿದ್ದಲ್ಲಿ ಕೂದಲು ಉದುರುವುಕೆ ಹೆಚ್ಚಾಗುತ್ತದೆ.. ಹಾಗೂ ಕೂದಲು ವಾಲ್ಯೂಮ್ ಕಳೆದುಕೊಳ್ಳುತ್ತದೆ..
ಮಳೆಗಾಲ ಅಂತಾ ಹೆಚ್ಚು ಬಿಸಿ ನೀರನ್ನು ಬಳಸುವುದು ಒಳ್ಳೆಯದಲ್ಲ ಗೊತ್ತೊ ಗೊತ್ತಿಲ್ಲದೆಯೊ ನಮ್ಮ ಕೂದಲಿಗೆ ಹೆಚ್ಚು ಬಿಸಿ ನೀರು ಹಾನಿ ಉಂಟು ಮಾಡುತ್ತದೆ..

ನಿಮ್ಮ ಕೂದಲಿಗೆ ಸೆಟ್ ಆಗುವಂತ ಶ್ಯಾಂಪು ಬಳಸಿ,ದಿನಕ್ಕೊಂದು ಶ್ಯಾಂಪುವನ್ನ ಬದಲಿಸಬೇಡಿ..ಹಾಗೂ ತಪ್ಪದೆ ಕಂಡಿಷ್ನರ್ನ ಬಳಸಿ..