ಇತಿಹಾಸದಲ್ಲೇ ಮೊದಲಬಾರಿ ಎಂಬಂತೆ ಲಕ್ಷದ್ವೀಪದ ಜನರಿಗೆ ಕೇಂದ್ರ ಸರ್ಕಾರ ಭರ್ಜರಿ ಗಿಫ್ಟ್ ಕೊಟ್ಟಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ದೊಡ್ಡ ಪ್ರಮಾಣದ ಇಳಿಕೆ ಮಾಡಲಾಗಿದ್ದು, ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಶನಿವಾರ ಹೊಸ ಆದೇಶ ಹೊರಡಿಸಿದ್ದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದೆ..

ಲಕ್ಷದ್ವೀಪ ದ್ವೀಪಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ ರೂ 15.3 ವರೆಗೆ ದರ ಕಡಿತವಾಗಿದೆ ಹಾಗೂ ಡೀಸೆಲ್ ಗೆ ೬.೯ ರೂಪಾಯಿಗೆ ದರ ಕಡಿತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಜನವರಿ 24 ರಂದು ಇದೇ ದ್ವೀಪಗಳಿಗೆ ಭೇಟಿ ನೀಡಿದ ಫೋಟೋಸ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್. ಈ ನಡುವೆ ಭಾರತ ಹಾಗೂ ಮಾಲ್ಡಿವ್ಸ್ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಡುತ್ತಿರುವ ಮಧ್ಯೆ ಮಾಲ್ಡೀವ್ಸ್ ಬುದ್ಧಿ ಕಲಿಸಲು ಲಕ್ಷದ್ವೀಪವನ್ನು ಪ್ರವಾಸಿ ಸ್ವರ್ಗವನ್ನಾಗಿ ಅಭಿವೃದ್ಧಿಪಡಿಸಲು ನಮೋ ಮುಂದಾಗಿದ್ದಾರೆ.

ಲಕ್ಷದ್ವೀಪದ ದೂರದ ದ್ವೀಪಗಳಿಗೆ ಪೆಟ್ರೋಲ್ ಡೀಸೆಲ್ ಕೊಂಡಯ್ಯಲು ಮತ್ತು ಸರಬರಾಜು ಮಾಡಲು ಜೊತೆಗೆ ಅಲ್ಲಿನ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಹೆಚ್ಚಿನ ತೆರಿಗೆ ಶುಲ್ಕವನ್ನು ಇದುವರೆಗೂ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸಲಾಗಿತ್ತು.. ಇದೀಗ ಈ ಶುಲ್ಕಗಳನ್ನು ಕಡಿತಗೊಳಿಸಲಾಗಿದ್ದು ಪ್ರತಿ ಲೀಟರ್ ಪೆಟ್ರೋಲ್ ಗೆ ೧೫.೩ ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ ಗೆ ೬.೯ ರೂಪಾಯಿಗೆ ದರ ಕಡಿತವಾಗಿದೆ.

ಈ ಬೆಳವಣಿಗೆ ಲಕ್ಷದ್ವೀಪದ ಅಭಿವೃದ್ಧಿಯಲ್ಲಿ ಸರ್ಕಾರ ಕೈಗೊಂಡ ಗಟ್ಟಿ ನಿರ್ಧಾರ ಅಂತ ಹೇಳಾಗಿದ್ದು , ಮುಂದಿನ ದಿನಗಳಲ್ಲಿ ಈ ಬದಲಾವಣೆಯಿಂದ ನಿರೀಕ್ಷೆಗೂ ಮೀರಿ ಲಕ್ಷದ್ವೀಪ ಅಭಿವೃದ್ಧಿ ಕಾಣಲಿದೆ ಎಂದು ನಂಬಲಾಗಿದೆ. ಇದು ಮಾಲ್ಡೀವ್ಸ್ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.